ಮುಂಬಯಿ: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು, ಶಸ್ತ್ರಚಿಕಿತ್ಸಗೆ ಒಳಗಾಗಿ ಚೇತರಿಕೆ(rishabh pant recovery) ಕಾಣುತ್ತಿರುವ ರಿಷಭ್ ಪಂತ್ (Rishabh Pant)ಅವರು ಕ್ರಿಕೆಟ್ಗೆ ಯಾವಾಗ ಮರಳಲಿದ್ದಾರೆ ಎಂಬ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರವೊಂದು ಲಭಿಸಿದೆ. ಬಿಸಿಸಿಐನ(BCCI) ಉನ್ನತ ಅಧಿಕಾರಿಯೊಬ್ಬರು ಪಂತ್ ಕ್ರಿಕೆಟ್ ಕಮ್ಬ್ಯಾಕ್ ವಿಚಾರವಾಗಿ ಮಹತ್ವದ ಅಪ್ಡೇಟ್ವೊಂದನ್ನು ನೀಡಿದ್ದಾರೆ.
ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಕಾರ್ಯದಲ್ಲಿ ತೊಡಗಿರುವ ರಿಷಭ್ ಪಂತ್, ಏಕದಿನ ವಿಶ್ವಕಪ್ ವೇಳೆಗೆ ಟೀಮ್ ಇಂಡಿಯಾ ಸೇರಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇದು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಂತ್ ಅವರು ಕ್ರಿಕೆಟ್ಗೆ ಮರಳಬೇಕಾದರೆ ಇನ್ನೂ ಒಂದು ಬೇಕು ಅವರು ಟಿ20 ವಿಶ್ವ ಕಪ್ಗೆ ಭಾರತ ತಂಡ ಸೇರುವುದು ಖಚಿತ ಎಂದಿದ್ದಾರೆ.
ಪಂತ್ ಅವರು ಶೀಘ್ರ ಗುಣಮುಖರಾಗುತ್ತಿದ್ದಾರೆ. ಅವರ ಚೇತರಿಕೆಯ ವೇಗವನ್ನು ನೋಡುವಾಗ ಅವರು ಇಂದು ಅಥವಾ ನಾಳೆಯೇ ಕ್ರಿಕೆಟ್ಗೆ ಮರಳುವಂತೆ ಭಾಸವಾಗುತ್ತಿದೆ. ಆದರೆ ಸಂಪೂರ್ಣ ಗುಣಮುಖರಾಗಲೂ ಇನ್ನೂ ಒಂದು ವರ್ಷದ ಕಾಲಾವಕಾಶ ಬೇಕು. ಹೊರಗಿನಿಂದ ಗಾಯ ಒಣಗಿದಂತೆ ಕಂಡರು ಒಳಗಿರುವ ನೋವು ಮಾಸಲು ಹಲವು ದಿನಗಳು ಬೇಕು. ಆದರೆ ಮುಂದಿನ ಟಿ20 ವಿಶ್ವಕಪ್ನಲ್ಲಿ ಅವರು ಆಡುವುದಂತು ನಿಜ. ಹಾಗಂತ, ಯಾವುದನ್ನೂ ಅವಸರದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ Rishabh Pant: ಮರುಹುಟ್ಟಿನ ದಿನಾಂಕ ಘೋಷಿಸಿದ ರಿಷಭ್ ಪಂತ್
Not bad yaar Rishabh ❤️❤️😂. Simple things can be difficult sometimes 😇 pic.twitter.com/XcF9rZXurG
— Rishabh Pant (@RishabhPant17) June 14, 2023
ಕಳೆದ ಡಿಸೆಂಬರ್ 30ರಂದು ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್ ಪಂತ್ ಪಾರಾಗಿದ್ದರು. ಡೆಹ್ರಾಡೂನ್ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಐಪಿಎಲ್ ವೇಳೆ ಊರುಗೋಲಿನಲ್ಲಿ ಕಾಣಿಸಿಕೊಂಡಿದ್ದ ಅವರು ಇದೀಗ ಯಾವುದೇ ಸಹಾಯವಿಲ್ಲದೆ ನಡೆದಾಡುತ್ತಿದ್ದಾರೆ. ಕಳೆದ ವಾರವಷ್ಟೇ ಮೆಟ್ಟಿಲುಗಳನ್ನು ಸರಗವಾಗಿ ಏರಿ ಇಳಿಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದರು. ಅವರ ಚೇತರಿಕೆಯ ಎಲ್ಲ ಅಪ್ಡೇಟ್ಸ್ಗಳನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡುತ್ತಿರುತ್ತಾರೆ.