Site icon Vistara News

Rishabh Pant | ಪಂತ್‌ ಜತೆಯೇ ಇದ್ದಾರಾ ಊರ್ವಶಿ? ಕುತೂಹಲ ಹುಟ್ಟಿಸಿದ ಇನ್‌ಸ್ಟಾಗ್ರಾಂ ಸ್ಟೋರಿ!

ಮುಂಬಯಿ: ಕಾರು ಅಪಘಾತದಿಂದಾಗಿ ಗಂಭೀರ ಗಾಯಾಳುವಾಗಿರುವ ರಿಷಭ್‌ ಪಂತ್‌ (Rishabh Pant) ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್‌ ಆಸ್ಪತ್ರೆಯಿಂದ ಮಹಾರಾಷ್ಟ್ರದ ಮುಂಬೈನ ಕೋಕಿಲಬೆನ್‌ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿದೆ. ಅವರ ಗರ್ಲ್‌ ಫ್ರೆಂಡ್‌ ಎಂದು ಹೇಳಿಕೊಳ್ಳುತ್ತಿರುವ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಕೂಡ ಪಂತ್‌ ಜತೆಯೇ ಇದ್ದಾರೆಯೇ ಎನ್ನುವ ಅನುಮಾನವೊಂದು ಇದೀಗ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಊರ್ವಶಿ ಅವರ ಆ ಒಂದು ಇನ್‌ಸ್ಟಾಗ್ರಾಂ ಸ್ಟೋರಿ.‌

ಇದನ್ನೂ ಓದಿ: Rishabh Pant | ರಿಷಭ್​ ಪಂತ್​ ಪುನಶ್ಚೇತನದ ಅವಧಿಯ ಮಾಹಿತಿ ಪ್ರಕಟಿಸಿದ ಮುಂಬಯಿ ವೈದ್ಯರು
ಊರ್ವಶಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ. ಪಂತ್‌ ಅವರು ಚಿಕಿತ್ಸೆ ಪಡೆಯುತ್ತಿರುವ ಕೋಕಿಲಬೆನ್‌ ಆಸ್ಪತ್ರೆಯದ್ದೇ ಫೋಟೋ ಅದಾಗಿದೆ. ತಾವು ತಮ್ಮ ಪ್ರಿಯತಮ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಬಳಿಯೇ ಇದ್ದೇನೆ ಎಂದು ಅಭಿಮಾನಿಗಳಿಗೆ ತೋರಿಸುವುದಕ್ಕಾಗಿಯೇ ಹಂಚಿಕೊಂಡಂತಿದೆ ಆ ಫೋಟೋ.


ಈ ಫೋಟೋ ನೋಡಿರುವ ಊರ್ವಶಿ ಹಾಗೂ ಪಂತ್‌ ಅಭಿಮಾನಿಗಳು ಹಲವು ರೀತಿಯ ಚರ್ಚೆಗಳನ್ನು ಆರಂಭಿಸಿದ್ದಾರೆ. “ಜನರ ಗಮನ ಸೆಳೆಯುವುದಕ್ಕಾಗಿಯೇ ಇಂತಹ ನಾಟಕಗಳನ್ನು ಊರ್ವಶಿ ಮಾಡುತ್ತಿದ್ದಾರೆ” ಎಂದು ಕೆಲವರು ಹೇಳಿದರೆ, “ನಿಜ ಪ್ರೀತಿಯೆಂದರೆ ಹೀಗೆ. ಪ್ರಿಯತಮ ಇರುವಲ್ಲಿಗೆ ನಿಮ್ಮನ್ನು ಸೆಳೆದೇ ಸೆಳೆಯುತ್ತದೆ” ಎಂದು ಹಲವರು ವ್ಯಾಖ್ಯಾನಿಸಲಾರಂಭಿಸಿದ್ದಾರೆ.

ಇದನ್ನೂ ಓದಿ: Rishabh Pant | ಹೆಚ್ಚಿನ ಚಿಕಿತ್ಸೆಗೆ ರಿಷಭ್​ ಪಂತ್​ ಮುಂಬೈಗೆ ಶಿಫ್ಟ್​; ಶ್ಯಾಮ್ ಶರ್ಮಾ ಮಾಹಿತಿ
ಪಂತ್‌ಗೆ ಅಪಘಾತವಾಗಿ, ಆಸ್ಪತ್ರೆ ಸೇರಿದ ತಕ್ಷಣ ಇನ್‌ಸ್ಟಾಗ್ರಾಂನಲ್ಲಿ ಊರ್ವಶಿ ಪೋಸ್ಟ್‌ ಹಾಕಿದ್ದರು. ಶ್ವೇತ ವರ್ಣದ ಬಟ್ಟೆ ತೊಟ್ಟಿರುವ ಫೋಟೊ ಹಂಚಿಕೊಂಡಿದ್ದ ಅವರು, ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುವುದಾಗಿ ಕ್ಯಾಪ್ಶನ್‌ನಲ್ಲಿ ತಿಳಿಸಿದ್ದರು.

Exit mobile version