ಮುಂಬಯಿ: ಹಿಟ್ಮ್ಯಾನ್ ಖ್ಯಾತಿಯ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ಅವರು ಸದ್ಯದಲ್ಲೇ ಎರಡನೇ ಮಗುವಿನ ತಂದೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಹೌದು, ರೋಹಿತ್ ಪತ್ನಿ ರಿತಿಕಾ ಸಜ್ದೇಹ್ (Ritika Sajdeh) ಗರ್ಭಿಣಿಯಾಗಿದ್ದಾರೆ ಎಂದು ವರದಿಯಾಗಿದೆ. ರಿತಿಕಾ ಬೇಬಿ ಬಂಪ್ ವಿಡಿಯೊ ಒಂದು ವೈರಲ್ ಆಗುತ್ತಿದ್ದು, ರೋಹಿತ್ ಅಭಿಮಾನಿಗಳು ಜೂನಿಯರ್ ಹಿನ್ಮ್ಯಾನ್ ಶೀಘ್ರದಲ್ಲೇ ಬರಲಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ರೋಹಿತ್ ಶರ್ಮ ಮತ್ತು ರಿತಿಕಾ ಸಜ್ದೇಹ್(Ritika Sajdeh) ದಂಪತಿಗೆ ಈಗಾಗಲೇ ಓರ್ವ ಪುತ್ರಿ ಇದ್ದಾಳೆ. ಈಕೆಯ ಹೆಸರು ಸಮೈರಾ. ಇದೀಗ ಈ ಜೋಡಿ 2ನೇ ಮಗುವಿನ ನಿರೀಕ್ಷೆಯಲ್ಲಿ ಇದ್ದ ಹಾಗಿದೆ. ರಿತಿಯಾ ಮುಂಬೈಯಲ್ಲಿ ತಿರುಗಾಡುವುದನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಈ ವಿಡಿಯೊದಲ್ಲಿ ರಿತಿಕಾ ಅವರ ಬೆಬಿ ಬಂಪ್ ದೃಶ್ಯವು ಸೆರೆಯಾಗಿದೆ. ಹಾಗಾಗಿ, ರೋಹಿತ್ ಪತ್ನಿಯು ಗರ್ಭಿಣಿಯಾಗಿರುವುದು ದೃಢಪಟ್ಟಿದೆ.
ತನ್ನ ಬ್ಯುಸಿನೆಸ್ ಮ್ಯಾನೇಜರ್ ಆಗಿದ್ದ ರಿತಿಕಾ ಸಜ್ದೇಹ್ ಅವರನ್ನು ರೋಹಿತ್ ಶರ್ಮಾ 2015ರಲ್ಲಿ ಮದುವೆಯಾಗಿದ್ದರು. ಮದುವೆಗೂ ಮುನ್ನ ರೋಹಿತ್-ರಿತಿಕಾ ಇಬ್ಬರೂ 6 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಮದುವೆಯಾದ ಬಳಿಕವೂ ಕ್ರಿಕೆಟ್ ಪಂದ್ಯಗಳ ವೇಳೆ ಮೈದಾನದಲ್ಲಿದ್ದು ತನ್ನ ಪತಿ ರೋಹಿತ್ಗೆ ರಿತಿಕಾ ಚಿಯರ್ ಮಾಡುತ್ತಿರುತ್ತಾರೆ.
ಇದನ್ನೂ ಓದಿ Rohit Sharma: ಮುಂಬೈ ಸ್ಟ್ರೀಟ್ನಲ್ಲಿ ಜಾಲಿ ರೈಡ್ ಮಾಡಿದ ರೋಹಿತ್; ವಿಡಿಯೊ ವೈರಲ್
ಸದ್ಯ ರೋಹಿತ್ ಶರ್ಮ(Rohit Sharma) ಅವರು ಯಾವುದೇ ಸರಣಿ ಇಲ್ಲದ ಕಾರಣ ವಿಶ್ರಾಂತಿಯಲ್ಲಿದ್ದಾರೆ. ತವರಾದ ಮುಂಬೈನಲ್ಲಿ ಜಾಲಿ ಮೂಡ್ನಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮುಂಬೈಯ ಸ್ಟ್ರೀಟ್ ಒಂದರಲ್ಲಿ ರೋಹಿತ್ ನೀಲಿ ಬಣ್ಣದ ಲ್ಯಾಂಬೋರ್ಗಿನಿ(Lamborghini) ಕಾರಿನಲ್ಲಿ ಜಾಲಿ ರೈಡ್ ಮಾಡಿರುವ ವಿಡಿಯೊ ವೈರಲ್ ಆಗಿತ್ತು.
ರೋಹಿತ್ ಅವರು ಲ್ಯಾಂಬೋರ್ಗಿನಿ ಕಾರಿನಲ್ಲಿ ಬರುತ್ತಿರುವ ವಿಡಿಯೊವನ್ನು ನೆಟ್ಟಿಗರೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರೋಹಿತ್ ರಸ್ತೆ ಬದಿಯಲ್ಲಿ ನಿಂತಿದ್ದ ಅಭಿಮಾನಿಗಳನ್ನು ಕಂಡು ಥಮ್ಸ್ ಅಪ್ ಮಾಡಿ ಮುಂದೆ ಸಾಗಿದ್ದರು. ರೋಹಿತ್ ಏಕದಿನದಲ್ಲಿ ಲಂಕಾ ವಿರುದ್ಧ 264 ರನ್ ಬಾರಿಸಿದ್ದರು. ಇದೇ ಸಂಖ್ಯೆಯನ್ನು ತಮ್ಮ ಕಾರ್ ನಂಬರ್ ಆಗಿ ಬಳಸಿಕೊಂಡಿದ್ದಾರೆ.
ಟಿ20 ವಿಶ್ವಕಪ್ ಮುಗಿದ ಬಳಿಕ ಕುಟುಂಬ ಸಮೇತರಾಗಿ ವಿದೇಶಕ್ಕೆ ಪ್ರವಾಸ ಹೋಗಿದ್ದ ರೋಹಿತ್ ಮುಂಬೈಗೆ ಮರಳಿದ್ದ ವೇಳೆಯೂ ಇದೇ ಕಾರಿನಲ್ಲಿ ವಿಮಾನ ನಿಲ್ದಾಣದಿಂದ ಮನೆಗೆ ತೆರಳಿದ್ದ ವಿಡಿಯೊ ಮೂರು ವಾರಗಳ ಹಿಂದೆ ವೈರಲ್ ಆಗಿತ್ತು. ಸದ್ಯ ವಿಶ್ರಾಂತಿಯಲ್ಲಿರುವ ರೋಹಿತ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ವೇಳೆಗೆ ತಂಡ ಸೇರಲಿದ್ದಾರೆ.