Site icon Vistara News

Robin Uthappa | ಎಲ್ಲ ಮಾದರಿಯ ಕ್ರಿಕೆಟ್‌ಗೆ ಕನ್ನಡಿಗ ರಾಬಿನ್‌ ಉತ್ತಪ್ಪ ನಿವೃತ್ತಿ

Uthappa

ಬೆಂಗಳೂರು: ಎಲ್ಲ ಮಾದರಿಯ ಕ್ರಿಕೆಟ್‌ಗೆ ಕನ್ನಡಿಗ ರಾಬಿನ್‌ ಉತ್ತಪ್ಪ (Robin Uthappa) ಅವರು ನಿವೃತ್ತಿ ಘೋಷಿಸಿದ್ದಾರೆ. ಭಾರತದ ಪರ ೪೬ ಏಕದಿನ ಹಾಗೂ ೧೩ ಟಿ-೨೦ ಪಂದ್ಯಗಳನ್ನು ಆಡಿದ್ದ ಅವರು ಐಪಿಎಲ್‌ನಲ್ಲಿಯೂ ಅಬ್ಬರದ ಬ್ಯಾಟಿಂಗ್‌ ಮೂಲಕ ಖ್ಯಾತಿ ಗಳಿಸಿದ್ದರು. ಈಗ ಎಲ್ಲ ಮಾದರಿಯ ಕ್ರಿಕೆಟ್‌ಗೆ ಉತ್ತಪ್ಪ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಭಾವನಾತ್ಮಕ ಪತ್ರದ ಮೂಲಕ ಈ ವಿಷಯ ಪ್ರಕಟಿಸಿದ್ದಾರೆ.

“ಇದುವರೆಗೆ ನನ್ನ ದೇಶ ಹಾಗೂ ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸಿದ್ದಕ್ಕೆ ಹೆಮ್ಮೆ ಇದೆ. ಪ್ರತಿಯೊಂದು ಉತ್ತಮ ಸಂಗತಿಗಳಿಗೂ ಕೊನೆ ಎಂಬುದು ಇರುತ್ತದೆ. ಅದರಂತೆ, ನಾನು ಭಾರತೀಯ ಕ್ರಿಕೆಟ್‌ನ ಎಲ್ಲ ಮಾದರಿಗೆ ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ಉತ್ತಪ್ಪ ಟ್ವೀಟ್‌ ಮಾಡಿದ್ದಾರೆ.

ಭಾರತ ತಂಡದ ಪರ ಆಡಿದ ೪೬ ಏಕದಿನ ಪಂದ್ಯಗಳಲ್ಲಿ ಅವರು ೯೩೪ ರನ್‌ ಗಳಿಸಿದ್ದರು. ಹಾಗೆಯೇ, ೧೩ ಟಿ-೨೦ ಪಂದ್ಯಗಳಲ್ಲಿ ೨೪೯ ರನ್‌ ಗಳಿಸಿದ್ದರು. ಐಪಿಎಲ್‌ನಲ್ಲಿ ರಾಬಿನ್‌ ಉತ್ತಪ್ಪ ಅಬ್ಬರದ ಬ್ಯಾಟಿಂಗ್‌ ಮೂಲಕ ಹೆಸರುವಾಸಿಯಾಗಿದ್ದರು. ಚೆನ್ನೈ ಸೂಪರ್‌ ಕಿಂಗ್‌, ಕೋಲ್ಕೊತಾ ನೈಟ್‌ ರೈಡರ್ಸ್‌, ರಾಜಸ್ಥಾನ ರಾಯಲ್ಸ್‌ ಪರ ಆಡಿದ್ದ ಅವರು ೨೦೫ ಪಂದ್ಯಗಳಿಂದ ೪,೯೫೨ ರನ್‌ ಗಳಿಸಿದ್ದರು. ೨೦೧೪ರ ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್‌ ತಂಡದ ಪರ ೬೬೦ ರನ್‌ ಗಳಿಸಿ, ತಂಡವು ಟ್ರೋಫಿ ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಇದನ್ನೂ ಓದಿ | ರಾಬಿನ್‌ ಉತ್ತಪ್ಪ (Robin Uthappa) ಮನೆಗೆ ಬಂದಳು ಮುದ್ದು ಅತಿಥಿ

Exit mobile version