ಬೆಂಗಳೂರು: ಭಾರತ ಮತ್ತು ನೆದರ್ಲ್ಯಾಂಡ್ಸ್ ವಿಶ್ವಕಪ್ ಪಂದ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತ ತಂಡದ ಆಟಗಾರರು (Team India) ಸತತವಾಗಿ ಅಭ್ಯಾಸ ನಡೆಸುವುದು ಕಂಡುಬಂತು. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ಶ್ರೇಯಸ್ ಅಯ್ಯರ್ ಮತ್ತು ಇತರರು ನೆಟ್ಸ್ನಲ್ಲಿ ಕಾಣಿಸಿಕೊಂಡರು. ಸತತ 8 ಗೆಲುವುಗಳೊಂದಿಗೆ ಭಾರತ 100 ಪ್ರತಿಶತ ದಾಖಲೆಯೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಕೊನೇ ಪಂದ್ಯದಲ್ಲಿ ದುರ್ಬಲ ನೆದರ್ಲ್ಯಾಂಡ್ಸ್ಗೆ ಎದುರಾಗಲಿದೆ.
Today's photos of Team India during net practice before the Netherlands match.#INDvsNED
— Krishna (@sigmakrixhna) November 10, 2023
Thread (1/n) Rohit Sharma and Rahul Dravid pic.twitter.com/OWlESRM4Hx
ಮೆನ್ ಇನ್ ಬ್ಲೂ ತಂಡವು ಸೆಮಿಫೈನಲ್ ಗೆ ಹೋಗುವ ಮೂಲಕ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸಲು ಪ್ರಯತ್ನಿಸುತ್ತದೆ. ಇನ್ನು ಮುಂದೆ ಎಲ್ಲವೂ ಗಂಭೀರ ಸ್ಪರ್ಧೆಗಳಾಗಲಿದೆ. ಹೀಗಾಗಿ ಭಾರತವು ನೆದರ್ಲ್ಯಾಂಡ್ಸ್ ತಂಡವನ್ನು ಪೂರ್ಣ ಶಕ್ತಿಯೊಂದಿಗೆ ಎದುರಿಸಲಿದೆ. ನಾಯಕ ರೋಹಿತ್ ಶರ್ಮಾ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಶುಕ್ರವಾರ ಸಂಜೆ ಪಿಚ್ ಪರಿಶೀಲಿಸಿದ್ದಾರೆ. ಭಾರತದ ಅಭ್ಯಾಸದ ವೇಳೆ ಇಶಾನ್ ಕಿಶನ್ ಕಾಣಿಸಲಿಲ್ಲ.
ಈ ಸುದ್ದಿಯನ್ನೂ ಓದಿ: Quinton de Kock : ವಿಕೆಟ್ ಕೀಪಿಂಗ್ನಲ್ಲೂ ಹೊಸ ಸಾಧನೆ ಮಾಡಿದ ಕ್ವಿಂಟನ್ ಡಿ ಕಾಕ್
ಕೊಹ್ಲಿ ಪರಿಶ್ರಮ
ವಿರಾಟ್ ಕೊಹ್ಲಿ ನೆಟ್ಸ್ನಲ್ಲಿ ಕಠಿಣ ಪರಿಶ್ರಮ ಪಟ್ಟರು, ಅಲ್ಲಿ ಅವರು ಎಡಗೈ ಸ್ಪಿನ್ ಮತ್ತು ಶಾರ್ಟ್ ಬೌಲಿಂಗ್ ಎದುರಿಸುವ ಮೂಲಕ ತಮ್ಮ ಶಾಟ್ಗಳನ್ನು ಪರಿಪೂರ್ಣಗೊಳಿಸಿದರು. ಜಸ್ಪ್ರೀತ್ ಬುಮ್ರಾ ಸ್ಪಿನ್ ಬೌಲಿಂಗ್ನಲ್ಲಿ ಅಭ್ಯಾಸ ನಡೆಸಿದರು. ರಾಹುಲ್ ದ್ರಾವಿಡ್ ಥ್ರೋ-ಡೌನ್ ಅಭ್ಯಾಸಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಮ್ಮ ಬ್ಯಾಟಿಂಗ್ ಅಭ್ಯಾಸದ ನಂತರ ತಮ್ಮ ಸಂಪೂರ್ಣ ಗಮನವನ್ನು ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ಅಭ್ಯಾಸಗಳತ್ತ ಕೇಂದ್ರೀಕರಿಸಿದರು. ವಿಶ್ವಕಪ್ನಲ್ಲಿ ಇಲ್ಲಿಯವರೆಗೆ ಎದುರಿಸಿದ ಪ್ರತಿಯೊಂದು ಎದುರಾಳಿಯನ್ನು ಹಿಂದಿಕ್ಕಿರುವುದರಿಂದ ಇಡೀ ಗುಂಪು ಸ್ನೇಹಪರ ಮತ್ತು ಸಂತೋಷದ ಮನಸ್ಥಿತಿಯಲ್ಲಿ ಕಂಡುಬಂತು.
ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತನ್ನ ಕೊನೆಯ ಗ್ರೂಪ್ ಹಂತದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ನಿರ್ಣಾಯಕ ಸೆಮಿಫೈನಲ್ ಪಂದ್ಯವನ್ನು ಆಡುವ ಮೊದಲು ರೋಹಿತ್ ಶರ್ಮಾ ಮತ್ತು ತಂಡವು ಅಜೇಯ 9 ಗೆಲುವುಗಳಿಂದ ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನು ಹೊಂದಿದೆ.
ಸಚಿನ್ ‘ವಿಶ್ವ’ ದಾಖಲೆ ಮುರಿಯಲು ಕೊಹ್ಲಿ,ರಚಿನ್ ಮಧ್ಯೆ ತೀವ್ರ ಪೈಪೋಟಿ
ಬೆಂಗಳೂರು: ವಿಶ್ವಕಪ್(icc world cup 2023) ಟೂರ್ನಿಯಲ್ಲಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯೊಂದನ್ನು ಮುರಿಯಲು ಕಿಂಗ್ ವಿರಾಟ್ ಕೊಹ್ಲಿ(Virat Kohli) ಮತ್ತು ಕಿವೀಸ್ನ ಯುವ ಆಟಗಾರ ರಚಿನ್ ರವೀಂದ್ರ(Rachin Ravindra) ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಉಭಯ ಆಟಗಾರರಲ್ಲಿ ಯಾರು ಈ ದಾಖಲೆಯನ್ನು ಮುರಿಯಲಿದ್ದಾರೆ? ಇವರಿಗೆ ಇದು ಸಾಧ್ಯವಾದಿತೇ? ಹೀಗೊಂದು ಚರ್ಚೆ ಕ್ರಿಕೆಟ್ ವಲಯದಲ್ಲಿ ಕೇಳಿಬಂದಿದೆ.
ಹೌದು, ರಚಿನ್ ರವೀಂದ್ರ ಮತ್ತು ವಿರಾಟ್ ಕೊಹ್ಲಿ ಅವರು ಚಿತ್ತ ನೆಟ್ಟಿರುವ ಸಚಿನ್ ಅವರ ದಾಖಲೆ ಯಾವುದೆಂದರೆ, ವಿಶ್ವಕಪ್ನ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ. ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಸಚಿನ್ ಅವರು ವಿಶ್ವಕಪ್ ಆವೃತ್ತಿಯೊಂದರಲ್ಲಿ 11 ಪಂದ್ಯಗಳನ್ನು ಆಡಿ 673 ರನ್ ಬಾರಿಸಿದ್ದರು. ಸದ್ಯ ಇದು ಈವರೆಗೆ ವಿಶ್ವಕಪ್ನ ದಾಖಲೆಯಾಗಿಯೇ ಉಳಿದುಕೊಂಡಿದೆ. ಈ ದಾಖಲೆಯನ್ನು ಮುರಿಯುವ ಅವಕಾಶ ರಚಿನ್ ಮತ್ತು ಕೊಹ್ಲಿಗೆ ಇದೆ.