Site icon Vistara News

Rohit Sharma : ರೋಹಿತ್​ ಎಲ್ಲಿಗೂ ಹೋಗುವುದಿಲ್ಲ; ಊಹಾಪೋಹಗಳಿಗೆ ತೆರೆ

Rohit Sharma in IPL

ಬೆಂಗಳೂರು: 2024ರ ಐಪಿಎಲ್ ಋತುವಿಗೆ ಮುಂಚಿತವಾಗಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (Rohit Sharma) ಬದಲಿಗೆ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ ನಂತರ ಫ್ರಾಂಚೈಸಿ ಟೀಕೆಗಳನ್ನು ಎದುರಿಸಬೇಕಾಯಿತು. ಹಾರ್ದಿಕ್ ಪಾಂಡ್ಯ ಕಳೆದ ತಿಂಗಳು ಗುಜರಾತ್ ಟೈಟಾನ್ಸ್ ಜೊತೆಗಿನ ವ್ಯಾಪಾರದ ಮೂಲಕ ಮುಂಬೈ ಇಂಡಿಯನ್ಸ್ ಜೊತೆ ಸೇರಿಕೊಂಡಿದ್ದರು. ನಿರ್ಣಾಯಕ ಹರಾಜಿಗೆ ಕೆಲವು ದಿನಗಳ ಮೊದಲು ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಇದರಿಂದ ರೋಹಿತ್​ಗೆ ಅಸಮಾಧಾನವಾಗಿದೆ ಎಂಬ ಮಾತುಗಳು ಕೇಳಿ ಬಂದವು. ಅವರು ತಂಡವನ್ನು ಬಿಟ್ಟು ಹೋಗುತ್ತಾರೆ ಎಂದು ಹೇಳಲಾಯಿತು.

ಮುಂಬೈ ಇಂಡಿಯನ್ಸ್ ನಿಂದ ಬಿಟ್ಟು ಬರುವಂತೆ ಮನವೊಲಿಸಲು ಕೆಲವು ಪ್ರತಿಸ್ಪರ್ಧಿ ಐಪಿಎಲ್ ತಂಡಗಳು ರೋಹಿತ್ ಶರ್ಮಾ ಅವರನ್ನು ಸಂಪರ್ಕಿಸಿವೆ ಎಂದು ವದಂತಿಗಳು ಹರಡಿದವು. ಅಷ್ಟೇ ಅಲ್ಲ, ರೋಹಿತ್ ಅವರ ಸಹವರ್ತಿಗಳಾದ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಅನೇಕರು ಹಾರ್ದಿಕ್ ನೇಮಕದ ವಿರುದ್ಧ ದಂಗೆ ಎದ್ದಿದ್ದಾರೆ ಮತ್ತು ನಿರ್ಗಮನವನ್ನು ಕೋರಿದ್ದಾರೆ ಎಂದು ಹೇಳಲಾಯಿತು.

ಲೀಗ್ ಅಧಿಕೃತವಾಗಿ ಪ್ರಾರಂಭವಾಗುವ 30 ದಿನಗಳ ಮೊದಲಿನ ತನಕ ವ್ಯಾಪಾರ ವಿಂಡೋ ತೆರೆದಿರುತ್ತವೆ ಎಂದು ಹೇಳಲಾಗಿರುವ ಕಾರಣ ರೋಹಿತ್ ಮತ್ತು ಅವರ ಅನೇಕ ಸಹ ಆಟಗಾರರು ಬೇರೆ ಫ್ರಾಂಚೈಸಿಗೆ ಹೋಗುತ್ತಾರೆ ಎಂದು ಹೇಳಲಾಗಿತ್ತು.

ಮುಂಬೈ ತೊರೆಯುತ್ತಾರಾ ರೋಹಿತ್ ಶರ್ಮಾ?

ಮುಂಬೈ ಇಂಡಿಯನ್ಸ್​​ನ ಹೆಸರು ಹೇಳಲು ಇಚ್ಛಿಸದ ಹಿರಿಯ ಸದಸ್ಯರೊಬ್ಬರು ಹರಾಜು ಸ್ಥಳದಲ್ಲಿ ಈ ಊಹಾಪೋಹಗಳನ್ನು ನಿರಾಕರಿಸಿದ್ದಾರೆ. ಕ್ರಿಕ್​ಬಜ್​ನೊಂದಿಗೆ ಮಾತನಾಡಿದ ಅವರು ರೋಹಿತ್ ಅಥವಾ ಇತರ ಯಾವುದೇ ಎಂಐ ಆಟಗಾರನನ್ನು 2024ರ ಋತುವಿಗೆ ಮುಂಚಿತವಾಗಿ ವ್ಯಾಪಾರ ಮಾಡುವುದಿಲ್ಲ ಎಂದು ದೃಢಪಡಿಸಿದ್ದಾರೆ.. ಅಂತರ್ಜಾಲದಲ್ಲಿ ಸುತ್ತುತ್ತಿರುವ ವರದಿಗಳು ಸಂಪೂರ್ಣವಾಗಿ ಆಧಾರ ರಹಿತ ಮತ್ತು ನಕಲಿ ಎಂದು ಹಿರಿಯ ಸದಸ್ಯ ಹೇಳಿದ್ದಾರೆ.

ಇದನ್ನೂ ಓದಿ : IPL 2024 Auction : ಹರಾಜಿನಲ್ಲಿ 7.5 ಕೋಟಿ ಪಡೆದ 19 ವರ್ಷದ ಕುಶಾಗ್ರ ಯಾರು?

“ರೋಹಿತ್ ಎಲ್ಲಿಗೂ ಹೋಗುವುದಿಲ್ಲ. ಅಲ್ಲದೆ ಯಾವುದೇ ಆಟಗಾರನೂ ಹೋಗುವುದಿಲ್ಲ. ಈ ಸುದ್ದಿ ವರದಿಗಳು ಸಂಪೂರ್ಣವಾಗಿ ನಕಲಿ ಮತ್ತು ಸುಳ್ಳು. ಯಾವುದೇ ಎಂಐ ಆಟಗಾರ ನಮ್ಮನ್ನು ಬಿಡುವುದಿಲ್ಲ, ನಾವು ವ್ಯಾಪಾರ ಮಾಡುವುದಿಲ್ಲ,” ಎಂದು ಮುಂಬೈ ಇಂಡಿಯನ್ಸ್​​ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರೋಹಿತ್​ಗೆ ಅನ್ಯಾಯವಾಗಿಲ್ಲ

ರೋಹಿತ್ ಶರ್ಮಾ ಅವರ ನಾಯಕತ್ವದ ಭವಿಷ್ಯದ ಬಗ್ಗೆ ಅವರನ್ನು ತೆರೆಮರೆಯಲ್ಲಿ ಇಟ್ಟಿಲ್ಲ ಆಡಳಿತ ಮಂಡಳಿಯ ನಿರ್ಧಾರದ ಬಗ್ಗೆ ಅವರಿಗೆ ಸಮಯೋಚಿತವಾಗಿ ಮಾಹಿತಿ ನೀಡಲಾಗಿದೆ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯುದ್ದಕ್ಕೂ ಅವರೊಂದಿಗೆ ಸಮಾಲೋಚನೆ ಮಾಡಲಾಗಿದೆ. ಇಲ್ಲಿ ಗೌಪ್ಯ ಕಾರ್ಯಾಚರಣೆ ಯಾವುದೂ ಇಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.

“ನಿರ್ಧಾರ ತೆಗೆದುಕೊಳ್ಳುವ ಮೊದಲು ಪ್ರತಿಯೊಬ್ಬ ಆಟಗಾರನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು. ರೋಹಿತ್ ಅವರಿಗೂ ಮಾಹಿತಿ ನೀಡಲಾಯಿತು. ರೋಹಿತ್ ಕೂಡ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗಿದ್ದಾರೆ, ” ಮುಂಬಯಿ ಇಂಡಿಯನ್ಸ್​ ಅಧಿಕಾರಿ ಹೇಳಿದ್ದಾರೆ.

ಈ ಹಿಂದೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ರೋಹಿತ್ ಶರ್ಮಾ ಅವರನ್ನು ವ್ಯಾಪಾರ ಮಾಡಲು ಮುಂಬೈ ಇಂಡಿಯನ್ಸ್ ಅನ್ನು ಸಂಪರ್ಕಿಸಿದವು ಎಂದು ವದಂತಿಗಳು ಸೂಚಿಸಿದವು. ಆದರೆ ಅವರು ಇನ್ನು ಮುಂದೆ ಟ್ರೇಡಿಂಗ್​ನ್ಲಿ ಪಾಲ್ಗೊಳ್ಳದ ಕಾರಣ ಈ ಪ್ರಸ್ತಾಪವನ್ನು ನಿರಾಕರಿಸಲಾಗಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಅವರ ನಾಯಕತ್ವದಲ್ಲಿ, ಎಂಐ ಗೌರವಾನ್ವಿತ ಶಕ್ತಿಯಾಗಿ ರೂಪಾಂತರಗೊಂಡಿದೆ. ಅಧಿಕಾರ ಹಸ್ತಾಂತರ ನಡೆದಾಗ ಅಭಿಮಾನಿಗಳು ಕೋಪಗೊಂಡಿದ್ದರು ಎನ್ನಲಾಗಿದೆ. ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿರುವುದರಿಂದ ಅವ್ರು ಮುಂಬೈ ಇಂಡಿಯನ್ಸ್ ಭವಿಷ್ಯಕ್ಕಾಗಿ ಕೆಲಸ ಮಾಡಲಿದ್ದಾರೆ.

Exit mobile version