ವಿಸ್ತಾರನ್ಯೂಸ್ ಬೆಂಗಳೂರು: ಮೊದಲ ಎರಡು ಟಿ 20 ಪಂದ್ಯಗಳಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿದ ನಂತರ, ಭಾರತೀಯ ಆಟಗಾರರು ಸರಣಿಯ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಮೂರನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂತೆಯೇ ಸೋಮವಾರ ನಾಯಕ ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾದ ಸದಸ್ಯರ ಬೆಂಗಳೂರಿನಲ್ಲಿ ಬಂದಿಳಿದರು. ಶುಬ್ಮನ್ ಗಿಲ್, ಮುಖೇಶ್ ಕುಮಾರ್, ರಿಂಕು ಸಿಂಗ್, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಸೇರಿದಂತೆ ಹಲವಾರು ಸಹ ಆಟಗಾರರು ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ವಿಡಿಯೊ ಕಂಡು ಬಂದಿದೆ.
Indore ✈️ Bengaluru#TeamIndia in town for the 3⃣rd & final T20I 👏 👏#INDvAFG | @IDFCFIRSTBank pic.twitter.com/xKKRi6yf9W
— BCCI (@BCCI) January 15, 2024
ಜನವರಿ 15 ರಂದು ಈ ಆಟಗಾರರು ಬೆಂಗಳೂರು ತಲುಪಿದ್ದಾರೆ. ಅವರೆಲ್ಲರೂ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಲಿದ್ದಾರೆ. ತಂಡದ ಹೋಟೆಲ್ಗೆ ತೆರಳುವ ಮೊದಲು ಆಟಗಾರರು ವಿಮಾನ ನಿಲ್ದಾಣದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ದೊಡ್ಡ ವಿಭಾಗದಿಂದ ಆತ್ಮೀಯ ಸ್ವಾಗತ ಪಡೆದರು.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಮೊದಲ ಎರಡು ಟಿ 20 ಪಂದ್ಯಗಳಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ ಗೆದ್ದುಕೊಂಡಿದೆ. ಆಲ್ರೌಂಡರ್ ಶಿವಂ ದುಬೆ ಎರಡೂ ಸಂದರ್ಭಗಳಲ್ಲಿ ರನ್ ಚೇಸಿಂಗ್ ಇನಿಂಗ್ಸ್ಗಳನ್ನು ಆಡಿದ್ದಾರೆ. ಮೊಹಾಲಿಯಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಜಿತೇಶ್ ಶರ್ಮಾ ಮತ್ತು ಇಂದೋರ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶಿವಂ ದುಬೆ ಜತೆ ಉತ್ತಮ ಇನಿಂಗ್ಸ್ ಆಡಿದ್ದರು.
ಇದನ್ನೂ ಓದಿ : Shreyas Iyer : ಸುಂದರ ಹುಡುಗಿಗೆ ಟಿಶರ್ಟ್ ಕೊಟ್ಟ ಶ್ರೇಯಸ್ ಅಯ್ಯರ್
ಮುಂಬರುವ 2024 ರ ಟಿ 20 ವಿಶ್ವಕಪ್ ಹಾದಿಯಲ್ಲಿ ‘ಮೆನ್ ಇನ್ ಬ್ಲೂ’ ಗೆ ಈ ಸರಣಿ ಪರೀಕ್ಷಾ ಪಂದ್ಯಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಪರಿಗಣಿಸಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತದ ಟಿ20 ಐ ಸೆಟಪ್ಗಳಿಗೆ ಮರಳಿದ್ದಾರೆ. ಇಂದೋರ್ನಲ್ಲಿ ಕೊಹ್ಲಿ 29 ರನ್ ಗಳಿಸಿ ಪುನರಾಗಮನ ಮಾಡಿದ್ದರೆ ನಾಯಕ ಶರ್ಮಾ ಸರಣಿಯಲ್ಲಿ ಆಡಿದ ಎರಡು ಇನ್ನಿಂಗ್ಸ್ಗಳಲ್ಲಿ ಖಾತೆ ತೆರೆಯಲು ವಿಫಲಗೊಂಡಿದ್ದಾರೆ.
ಅಫ್ಘಾನಿಸ್ತಾನ ಮತ್ತು ಆತಿಥೇಯ ಭಾರತ ನಡುವಿನ ಮೂರನೇ ಟಿ 20 ಪಂದ್ಯ ಜನವರಿ 17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ದಾಖಲೆ ಪಟ್ಟಿ ಸೇರಿದ ಶಿವಂ ದುಬೆ
ವಿಸ್ತಾರ ನ್ಯೂಸ್ ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ಆಲ್ರೌಂಡರ್ ಶಿವಂ ದುಬೆ ಸತತ ಎರಡನೇ ಅರ್ಧ ಶತಕ ಬಾರಿಸುವ ಜತೆಗೆ ತಲಾ ಒಂದು ವಿಕೆಟ್ ಪಡೆಯುವ ಮೂಲಕ ವಿಶಿಷ್ಟ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಶ್ರೇಷ್ಠ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಅವರಿರುವ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಬ್ಯಾಕಪ್ ಆಲ್ರೌಂಡರ್ ಟಿ20 ಐ ಇತಿಹಾಸದಲ್ಲಿ ಎರಡು ಅರ್ಧ ಶತಕ ಗಳಿಸುವ ಜತೆಗೆ ಎರಡು ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ತಂಡಕ್ಕಾಗಿ ಒಂದು ವಿಕೆಟ್ ಪಡೆದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈಟ್ ಬಾಲ್ ದಂತಕಥೆಗಳಾದ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಮಾತ್ರ ಈ ಅಪರೂಪದ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದಿದ್ದರು.
ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 40 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿದ್ದ ಅವರು ತಮ್ಮ ಬೌಲಿಂಗ್ ಸ್ಪೆಲ್ನ ಮೊದಲ 2 ಓವರ್ಗಳಲ್ಲಿ 9 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಇಂದೋರ್ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ 32 ಎಸೆತಗಳಲ್ಲಿ 36 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಅದೇ 63* ರನ್ ಗಳಿಸುವ ಮೂಲಕ ತಮ್ಮ ಅದ್ಭುತ ಪ್ರದರ್ಶನ ನೀಡಿದ್ದರು.
ಮೂರು ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ ಅಜೇಯ ಮುನ್ನಡೆ ಸಾಧಿಸಲು ಸಹಾಯ ಮಾಡಿದ ದುಬೆ ಸತತ ಆಲ್ರೌಂಡ್ ಪ್ರದರ್ಶನದೊಂದಿಗೆ ದುಬೆ ಟಿ 20 ಐ ಇತಿಹಾಸದಲ್ಲಿ ಎರಡು ಸಂದರ್ಭಗಳಲ್ಲಿ ಅರ್ಧಶತಕ ಮತ್ತು ಒಂದು ವಿಕೆಟ್ ಪಡೆದ ಅಪರೂಪದ ಭಾರತೀಯ ಆಟಗಾರರ ಪಟ್ಟಿಗೆ ಸೇರಿದರು.