ಜೊಹಾನ್ಸ್ಬರ್ಗ್: ಭಾರತ ತಂಡ ದಕ್ಷಿಣ ಆಫ್ರಿಕಾ(South Africa vs India, 1st Test) ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತರೂ ಕೂಡ ದ್ವಿತೀಯ ಇನಿಂಗ್ಸ್ನಲ್ಲಿ ಏಕಾಂಗಿಯಾಗಿ ಬ್ಯಾಟಿಂಗ್ ಹೋರಾಟ ನಡೆಸಿದ ವಿರಾಟ್ ಕೊಹ್ಲಿಯ(Virat And Rohit) ಸಾಹಸಕ್ಕೆ ತಂಡದ ನಾಯಕ ರೋಹಿತ್ ಶರ್ಮಾ(rohit sharma) ಮೆಚ್ಚುಗೆ ಸೂಚಿಸಿದ್ದಾರೆ. ಕೊಹ್ಲಿ(virat kohli) 76 ರನ್ ಗಳಿಸಿ ಔಟಾಗಿ ಡ್ರೆಸ್ಸಿಂಗ್ ರೂಮ್ಗೆ ಮರಳುವಾಗ ರೋಹಿತ್ ಎದ್ದು ನಿಂತು ಶ್ಲಾಘಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(viral video) ಆಗಿದೆ.
ಕೊಹ್ಲಿ ಏಕಾಂಗಿ ಹೋರಾಟ
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕೂಡ ವಿರಾಟ್ ಕೊಹ್ಲಿ ಕ್ರೀಸ್ ಕಚ್ಚಿ ನಿಂತು ಎದೆಗುಂದದೆ ರನ್ ಗಳಿಸುತ್ತಿದ್ದರು. ಆದರೆ ಇವರಿಗೆ ಯಾರೋಬ್ಬರು ಕೂಡ ಸಾಥ್ ನೀಡಲಿಲ್ಲ. ಕೊಹ್ಲಿಯನ್ನು ಮೈದಾನದಲ್ಲಿ ನೋಡುವಾಗ ಅಸಹಾಯಕರಂತೆ ಕಂಡು ಬಂತು. ಆದರೂ ಛಲ ಬಿಡದ ಕೊಹ್ಲಿ ಇನಿಂಗ್ಸ್ ಸೋಲನ್ನು ತಪ್ಪಿಸಲು ಪ್ರಯತ್ನಪಟ್ಟರು. ಆದರೆ, ಅಂತಿಮವಾಗಿ ರಬಾಡಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಜಾನ್ಸೆನ್ ಪಾಲಾಯಿತು. 82 ಎಸೆತ ಎದುರಿಸಿ 12 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ ಕೊಹ್ಲಿ 76 ರನ್ ಗಳಿಸಿದರು.
Rohit Sharma appreciating the heroic fightback of Virat Kohli at Centurion 👌👏pic.twitter.com/7TED1hFpNG
— Johns. (@CricCrazyJohns) December 29, 2023
ಪಂದ್ಯ ಸೋತ ನಿರಾಸೆಯಲ್ಲಿ ಬರುತ್ತಿದ್ದ ಕೊಹ್ಲಿಯನ್ನು ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಕಾರಣದಿಂದ ಬೆನ್ನು ತಟ್ಟಿ ಪ್ರಶಂಸಿಸಿದ್ದಾರೆ. ಇದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ರೋಹಿತ್ ಅವರ ಈ ನಡೆಯನ್ನು ನೆಟ್ಟಗರು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ IND vs SA: ದ್ವಿತೀಯ ಪಂದ್ಯಕ್ಕೆ ಜಡೇಜಾ ಲಭ್ಯ; ಆಡುವ ಬಳಗದಲ್ಲಿ ಬದಲಾವಣೆ
ಟೆಸ್ಟ್ ಸರಣಿ ಮುಗಿದ ಬಳಿಕ ರೋಹಿತ್-ಕೊಹ್ಲಿ ಟಿ20 ಭವಿಷ್ಯ ನಿರ್ಧಾರ!
2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ನಲ್ಲಿ ನಿರ್ಗಮಿಸಿತ್ತು. ಇದಾದ ಬಳಿಕ ರೋಹಿತ್ ಮತ್ತು ಕೊಹ್ಲಿ ಒಂದೇ ಒಂದು ಟಿ20 ಪಂದ್ಯವನ್ನು ಕೂಡ ಇದುವರೆಗೆ ಆಡಿಲ್ಲ. ಅಂದಿನಿಂದಲೂ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜತೆಗ ಯುವ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಮುಂದಿನ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಕೊಹ್ಲಿ ಮತ್ತು ರೋಹಿತ್ ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಉಭಯ ಆಟಗಾರರ ಟಿ20 ಕ್ರಿಕೆಟ್ ಭವಿಷ್ಯದ ಬಗ್ಗೆ ಸ್ಪಷ್ಟ ಉತ್ತರ ಸಿಗುವ ಸಾಧ್ಯತೆ ಇದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಶೀಘ್ರದಲ್ಲೇ ಇದಕ್ಕೆ ಉತ್ತರ ಸಿಗಲಿದೆ ಎಂದು ರೋಹಿತ್ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿದ್ದರು.
ಇನ್ನೊಂದು ಮೂಲಗಳ ಪ್ರಕಾರ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಿಂದ ಈಗಾಗಲೇ ದೂರ ಉಳಿಯಲು ನಿರ್ಧರಿಸಿದ್ದು ಕೇವಲ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ಗೆ ಮಾತ್ರ ಗಮನ ನೀಡಲು ನಿರ್ಧರಿಸಿರುವುದಾಗಿ ವರದಿಯೊಂದು ತಿಳಿಸಿದೆ. ಏಕದಿನ ವಿಶ್ವಕಪ್ ಸೋಲಿನ ಬಳಿಕವೇ ಉಭಯ ಆಟಗಾರರು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಉಭಯ ಆಟಗಾರರು ಈ ವಿಚಾರವನ್ನು ಅಧಿಕೃತವಾಗಿ ಎಲ್ಲಿಯೂ ಇದುವರೆಗೆ ಹೇಳಿಲ್ಲ.