ಧರ್ಮಶಾಲಾ: ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಂದು ವರ್ಷದ ಅವಧಿಯಲ್ಲಿ 50 ಸಿಕ್ಸರ್ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ (Rohit Sharma) ಪಾತ್ರರಾಗಿದ್ದಾರೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್ಪಿಸಿಎ) ಕ್ರೀಡಾಂಗಣದಲ್ಲಿ ಟಾಮ್ ಲಾಥಮ್ ನೇತೃತ್ವದ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ 2023ರ ಪಂದ್ಯದ ವೇಳೆ ಅವರು ಈ ಸಾಧನೆ ಮಾಡಿದ್ದಾರೆ. ಅವರು ಈ ಸಿಕ್ಸರ್ಗಾಗಿ 20 ಇನಿಂಗ್ಸ್ಗಳನ್ನು ಪಡೆದುಕೊಂಡಿದ್ದಾರೆ.
Rohit Sharma has most sixes for India in world Cups.
— Johns. (@CricCrazyJohns) October 22, 2023
– Hitman is creating history. pic.twitter.com/GuqRhKgVQD
ನಾಗ್ಪುರ ಮೂಲದ ರೋಹಿತ್ ಎರಡನೇ ಓವರ್ನ ಕೊನೆಯ ಎಸೆತದಲ್ಲಿ ಮ್ಯಾಟ್ ಹೆನ್ರಿ ಅವರ ಎಸೆತಕ್ಕೆ ಮಿಡ್ ವಿಕೆಟ್ ಕಡೆಗೆ ಬೃಹತ್ ಸಿಕ್ಸರ್ ಹೊಡೆದ ಬಳಿಕ ಈ ಸಾಧನೆ ಮಾಡಿದರು. ಅವರು 2017ರಲ್ಲಿ ತಾವೇ ಸೃಷ್ಟಿಸಿದ್ದ 46 ಸಿಕ್ಸರ್ಗಳ ದಾಖಲೆಯನ್ನು ಅವರು ಮುರಿದಿದ್ದಾರೆ.
ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದೆ. 2015ರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ 18 ಇನ್ನಿಂಗ್ಸ್ಗಳಲ್ಲಿ 58 ಸಿಕ್ಸರ್ಗಳನ್ನು ಬಾರಿಸಿದ್ದರು. 2019ರಲ್ಲಿ 56 ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಉತ್ತಮ ಫಾರ್ಮ್ನಲ್ಲಿರುವ ರೋಹಿತ್
ಪ್ರಸ್ತುತ ನಡೆಯುತ್ತಿರುವ ವಿಶ್ವ ಕಪ್ನಲ್ಲಿ ರೋಹಿತ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಪ್ಯಾಟ್ ಕಮಿನ್ಸ್ ಮುಂದಾಳತ್ವದ ಆಸ್ಟ್ರೇಲಿಯಾ ವಿರುದ್ಧದ ಭಾರತದ ಮೊದಲ ಪಂದ್ಯದಲ್ಲಿ ಅವರು ಶೂನ್ಯ ರನ್ ಗಳಿಸಿದರೂ, ಅನುಭವಿ ಆಟಗಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶತಕ ಗಳಿಸುವ ಮೂಲಕ ಉತ್ತಮ ಆರಂಭ ಪಡೆದಿದ್ದರು.
ವಿಶ್ವಕಪ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಆಟಗಾರ ಕಪಿಲ್ ದೇವ್ ದಾಖಲೆಯನ್ನು ರೋಹಿತ್ ಈ ವೇಳೆ ಮುರಿದಿದ್ದರು. ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 14 ರಂದು ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಬಲಗೈ ಬ್ಯಾಟರ್ 86 ರನ್ ಗಳಿಸಿದ್ದರು. ಅಕ್ಟೋಬರ್ 19ರಂದು ಧರ್ಮಶಾಲಾದ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಚ್ಪಿಸಿಎ) ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತದ ರನ್ ಚೇಸ್ ವೇಳೆ ಅವರು 48 ರನ್ ಗಳಿಸಿದ್ದರು. ರೋಹಿತ್ 50 ಓವರ್ಗಳ ಫಾರ್ಮಾದಲ್ಲಿ ಅದ್ಭುತ ರನ್ ಗಳಿಸುತ್ತಿದ್ದಾರೆ.
ಶುಭ್ಮನ್ ಗಿಲ್ ದಾಖಲೆ
ಭಾರತ ತಂಡದ ಯುವ ಬ್ಯಾಟರ್ ಶುಬ್ಮನ್ ಗಿಲ್ (Shubman Gill) ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ವೇಗವಾಗಿ 2000 ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಭಾನುವಾರ ಪಾತ್ರರಾಗಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಕಪ್ ಪಂದ್ಯ ವೇಳೆ ಅವರು ಈ ಸಾಧನೆ ಮಾಡದಿದ್ದಾರೆ. ಅವರು ಏಕ ದಿನ ಕ್ರಿಕೆಟ್ನಲ್ಲಿ 38 ಇನಿಂಗ್ಸ್ಗಳಲ್ಲಿ ಎರಡು ಸಹಸ್ರ ರನ್ಗಳ ಗಡಿ ದಾಟಿದ ಸಾಧನೆ ಮಾಡಿದ್ದಾರೆ.
2011 ರಲ್ಲಿ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ ತಮ್ಮ 40ನೇ ಇನ್ನಿಂಗ್ಸ್ನಲ್ಲಿ 2000 ರನ್ಗಳ ದಾಖಲೆ ಮಾಡಿದ್ದರು. ಹೀಗಾಗಿ ಕಳೆದ 12 ವರ್ಷಗಳ ಅವಧಿಯಲ್ಲಿ ಅವರೇ ಅತಿ ವೇಗದ 2000 ರನ್ಗಳ ಸರದಾರ ಎನಿಸಿಕೊಂಡಿದ್ದರು. ಇದೀಗ ಗಿಲ್ ಆ ದಾಖಲೆಯನ್ನು ಮುರಿದಿದ್ದಾರೆ. ಗಿಲ್ ಇನ್ನೂ ಎರಡು ಕಡಿಮೆ ಇನಿಂಗ್ಸ್ಗಳನ್ನು ಆಡಿದ್ದಾರೆ.
ಬಲಗೈ ಬ್ಯಾಟರ್ ಶುಬ್ಮನ್ ಗಿಲ್ ಭಾರತ ಪರವಾಗಿ ಅತಿ ವೇಗದ 2000 ರನ್ ಬಾರಿಸಿ ಖ್ಯಾತಿ ಪಡೆದಿದ್ದ ಧವನ್ ಅವರ ದಾಖಲೆಯನ್ನೂ ಮುರಿದಿದ್ದಾರೆ. 2014ರ ನವೆಂಬರ್ 9ರಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಧವನ್ 2000 ರನ್ಗಳ ಗಡಿ ದಾಟಿದ್ದರು. ಅದಕ್ಕಾಗಿ ಅವರು 48 ನೇ ಇನಿಂಗ್ಸ್ ತೆಗೆದುಕೊಂಡಿದ್ದರು.