Site icon Vistara News

Rohit Sharma : ಸಿಕ್ಸರ್​ಗಳನ್ನು ಬಾರಿಸಿ ನೂತನ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​​

Rohit Sharma

ಅಹಮದಾಬಾದ್​: ರೋಹಿತ್ ಶರ್ಮಾ 50 ಓವರ್​ಗಳ ಕ್ರಿಕೆಟ್​​ನಲ್ಲಿ 300 ಸಿಕ್ಸರ್​ಗಳನ್ನು ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ (Rohit Sharma) ಪಾತ್ರರಾದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಈ ಮೈಲಿಗಲ್ಲನ್ನು ತಲುಪಿದ್ದಾರೆ. ಅಫ್ಘಾನಿಸ್ತಾನ ಪಂದ್ಯದ ನಂತರ ಸ್ಟಾರ್ ಬ್ಯಾಟರ್​ ಸಿಕ್ಸರ್ ಹಾಗೂ ಫೋರ್​ಗಳ ಸುರಿಮಳೆ ಸುರಿಸುತ್ತಿದ್ದಾರೆ. ಪಾಕಿಸ್ತಾನ ಪಂದ್ಯದಲ್ಲಿ ಅವರ ಬೌಲರ್​ಗಳನ್ನೇ ಕಂಗೆಡಿಸಿಬಿಟ್ಟಿದ್ದಾರೆ.

ಈ ಸುದ್ದಿ ಬರೆಯುವ ವೇಳೆ ಶರ್ಮಾ 31 ಎಸೆತಗಳಲ್ಲಿ 46 ರನ್ ಗಳಿಸಿದ್ದರು/ ಇದರಲ್ಲಿ ಮೂರು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್​ಗಲು ಸೇರಿವೆ. ಇತ್ತೀಚೆಗೆ, ಅಫ್ಘಾನಿಸ್ತಾನ ಪಂದ್ಯದಲ್ಲಿ, ಅವರು 554 ಸಿಕ್ಸರ್​ಗಳ ಮೂಲಕ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಫಿರೋಜ್ ಷಾ ಕೋಟ್ಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧ 81 ಎಸೆತಗಳಲ್ಲಿ 131 ರನ್ ಗಳಿಸಿದ ರೋಹಿತ್ ಐದು ಸಿಕ್ಸರ್ ಗಳನ್ನು ಬಾರಿಸಿ 556 ಸಿಕ್ಸರ್​ಗಳ ಗುರಿ ದಾಟಿಸಿದ್ದರು.

ಪಾಕಿಸ್ತಾನದ ಬ್ಯಾಟ್ಸ್​ಮನ್​ ಶಾಹಿದ್ ಅಫ್ರಿದಿ ಏಕದಿನ ಕ್ರಿಕೆಟ್​​ನಲ್ಲಿ 351 ಸಿಕ್ಸರ್​ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್​​ನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ 50 ಓವರ್​ಗಳ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಅಫ್ರಿದಿ ನಂತರದ ಸ್ಥಾನದಲ್ಲಿದ್ದಾರೆ.

ಫಿರೋಜ್ ಷಾ ಕೋಟ್ಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧ 81 ಎಸೆತಗಳಲ್ಲಿ 131 ರನ್ ಗಳಿಸಿದ ರೋಹಿತ್ ಮೂರು ಸ್ವರೂಪಗ ಕ್ರಿಕೆಟ್​ನಲ್ಲಿ 556 ಸಿಕ್ಸರ್​ಗಳ ಗುರಿ ತಲುಪಿದ್ದರು. ರೋಹಿತ್ 453 ಪಂದ್ಯಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ. ಇದು ಗೇಲ್​ಗಿಂಗ 30 ಪಂದ್ಯಗಳು ಕಡಿಮೆ.

ನಾನು ಮತ್ತು ಗೇಲ್​ ಒಂದೇ ಸಂಖ್ಯೆ ಜೆರ್ಸಿಯನ್ನು ಧರಿಸುತ್ತೇವೆ (ಸಂಖ್ಯೆ 45). ಅವರು ಅದರ ಬಗ್ಗೆ ಸಂತೋಷವಾಗಿದ್ದಾರೆ ಎಂದು ನನಗೆ ಖಾತ್ರಿಯಿದೆ ಏಕೆಂದರೆ ಜರ್ಸಿ ಸಂಖ್ಯೆ 45 ಅದನ್ನು ಮಾಡಿದೆ (ಅವರ ದಾಖಲೆಯನ್ನು ಮುರಿದಿದೆ)”ಎಂದು ರೋಹಿತ್ ಬಿಸಿಸಿಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ICC World Cup 2023 : ವಿಶ್ವ ಕಪ್​ನ ಆರಂಭಿಕ ಪಂದ್ಯಗಳಿಂದ ಕೇನ್​ ವಿಲಿಯಮ್ಸನ್​ ಔಟ್​

“ನಾನು ಈ ಆಟವನ್ನು ಆಡಲು ಪ್ರಾರಂಭಿಸಿದಾಗ, ನಾನು ಇಷ್ಟು ಸಿಕ್ಸರ್​ಗಳನ್ನು ಹೊಡೆಯಲು ಸಾಧ್ಯವಾಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನಿಸ್ಸಂಶಯವಾಗಿ, ಮುಂದಿನ ವರ್ಷಗಳಲ್ಲಿ ಸಿಕ್ಸರ್​ ಹೊಡೆಯಲು ಕಲಿತೆ. ಆದ್ದರಿಂದ, ನಾನು ಮಾಡಿದ ಕೆಲಸದಿಂದ ನನಗೆ ಸಾಕಷ್ಟು ಸಂತೋಷವಾಗಿದೆ ಎಂದು ರೋಹಿತ್ ಹೇಳಿದ್ದಾರೆ.

ಬೌಲರ್​ಗಳಿಗೆ ಶ್ಲಾಘನೆ

ಬ್ಯಾಟರ್​ಗಳಿಗೆ ಸೂಕ್ತವಾದ ಪಿಚ್​ನಲ್ಲಿ ಅಫ್ಘಾನಿಸ್ತಾನವನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿದ್ದಕ್ಕಾಗಿ 36 ವರ್ಷದ ನಾಯಕ ತಮ್ಮ ಬೌಲರ್​ಗಳನ್ನು ಶ್ಲಾಘಿಸಿದರು. “ನಾವು ಅದ್ಭುತ ಆಟವನ್ನು ಆಡಿದ್ದೇವೆ ಎಂದು ನಾನು ಭಾವಿಸಿದ್ದೇವೆ. ಅಫ್ಘಾನಿಸ್ತಾನವನ್ನು 280 ಕ್ಕಿಂತ ಕಡಿಮೆ ರನ್​ಗಳಿಗೆ ನಿಯಂತ್ರಿಸಲು ಬೌರಲ್​ಗಳು ಅಸಾಧಾರಣ ಕೆಲಸ ಮಾಡಿದರು, ಏಕೆಂದರೆ ಪಿಚ್​ ಬ್ಯಾಟಿಂಗ್ ಮಾಡಲು ನಿಜವಾಗಿಯೂ ಅನುಕೂಲಕರವಾಗಿತ್ತು ಎಂದು ರೋಹಿತ್​ ವಿಡಿಯೊದಲ್ಲಿ ಹೇಳಿದ್ದರು.

Exit mobile version