Site icon Vistara News

Rohit Sharma Birthday: ಬೌಲರ್​ ಆಗಿದ್ದ ರೋಹಿತ್​ ಹಿಟ್​ಮ್ಯಾನ್​ ಆಗಿದ್ದೇಗೆ?; ಕ್ರಿಕೆಟ್​ ಜರ್ನಿಯೇ ರೋಚಕ

Rohit Sharma Birthday

ಬೆಂಗಳೂರು: ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮಾ(Rohit Sharma Birthday) ಅವರಿಗೆ ಇಂದು 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. 30 ಏಪ್ರಿಲ್ 1987ರಲ್ಲಿ ಜನಿಸಿದ ರೋಹಿತ್(Rohit Sharma)​ ಅವರ ಕ್ರಿಕೆಟ್​ ಜರ್ನಿಯೇ ಬಲು ರೋಚಕ. ಆರಂಭದಲ್ಲಿ ಬೌಲರ್​ ಆಗಿ ತಂಡ ಸೇರಿದ ಅವರು ಮಧ್ಯಮ ಕ್ರಮಾಂದಿಂದ ಆರಂಭಿಕ ಆಟಗಾರನಾಗಿ ಸಾಧನೆಯ ಶಿಖರವನ್ನೇರಿದರು. ಇವರ ಕ್ರಿಕೆಟ್​ ಜರ್ನಿಯ ಕುತೂಹಲಕಾರಿ ಸ್ಟೋರಿ ಇಂತಿದೆ.

ವಿಶ್ವಕಪ್​ನ ಶತಕ ವೀರ


ಪ್ರಸ್ತುತ ಟೀಮ್​ ಇಂಡಿಯಾದ ನಾಯಕನಾಗಿರುವ ರೋಹಿತ್​ ಶರ್ಮ ಒಂದೇ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಕೀರ್ತಿ ಹೊಂದಿದ್ದಾರೆ. ರೋಹಿತ್​ 2019ರಲ್ಲಿ ಲಂಡನ್​ನಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ 5 ಶತಕ ಬಾರಿಸಿದ್ದರು. ಈ ಮೂಲಕ ಲಂಕಾದ ಕುಮಾರ ಸಂಗಕ್ಕರ ಅವರ ಹೆಸರಿನಲ್ಲಿದ್ದ ದಾಖಲಯನ್ನು ಮುರಿದಿದ್ದರು. ರೋಹಿತ್​ 9 ಪಂದ್ಯಗಳನ್ನು ಆಡಿ ಒಟ್ಟು 648 ರನ್ ಗಳಿಸಿದ್ದರು. ವಿಶ್ವಕಪ್​ನಲ್ಲಿ ಒಟ್ಟು ರೋಹಿತ್​ 7 ಶತಕ ಬಾರಿಸಿದ್ದಾರೆ. 2015 ಮತ್ತು 2023ರಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ತಲಾ ಒಂದು ಶತಕ ಬಾರಿಸಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿ ಭಾರತ ಫೈನಲಲ್​ನಲ್ಲಿ ಸೋಲು ಕಂಡಿತ್ತು.​ ಸೋತರೂ ಕೂಡ ರೋಹಿತ್​ ನಾಯಕತ್ವದ ಬಗ್ಗೆ ಇಡೀ ವಿಶ್ವವೇ ಮೆಚ್ಚುಗೆ ಸೂಚಿಸಿತ್ತು.

ಬೌಲರ್​ ಆಗಿ ಕ್ರಿಕೆಟ್​ ಜರ್ನಿ ಆರಂಭ


ರೋಹಿತ್​ ಅವರ ಕ್ರಿಕೆಟ್​ ಜರ್ನಿ ಆರಂಭವಾಗಿದ್ದು ಆಫ್​ ಸ್ಪಿನ್ನರ್​ ಆಗಿ. 2007ರಲ್ಲಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅದೇ ವರ್ಷ ನಡೆದ ಐಸಿಸಿ T20 ವಿಶ್ವಕಪ್​ನಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ರೋಹಿತ್​ 88 ರನ್ ಬಾರಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಆರು ವರ್ಷಗಳ ಕಾಲ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಶಿಖರ್ ಧವನ್ ಅವರೊಂದಿಗೆ ಓಪನರ್​ ಆಗಿ ಆಡುವ ಅವಕಾಶವನ್ನು ಪಡೆದಿದ್ದರು. ಧೋನಿ ಅವರು ರೋಹಿತ್​ಗೆ ಆರಂಭಿಕ ಆಟಗಾರನಾಗಿ ಭಡ್ತಿ ನೀಡಿದ್ದರು. ಧೋನಿಯ ಈ ಒಂದು ನಿರ್ಧಾರ ರೋಹಿತ್​ ವೃತ್ತಿ ಜೀವನಕ್ಕೆ ಸಿಕ್ಕ ಮಹತ್ವದ ತಿರುವಾಯಿತು. ಈ ಟೂರ್ನಿಯಿಂದ ರೋಹಿತ್​ ಖಾಯಂ ಆರಂಭಿಕ ಆಟಗಾರನಾಗಿ ಸ್ಥಾನ ಪಡೆದರು.

ಇದನ್ನೂ ಓದಿ Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

3 ದ್ವಿಶತಕ


ಏಕದಿನ ಕ್ರಿಕೆಟ್​ನಲ್ಲಿ ಒಂದು ದ್ವಿಶತಕ ಬಾರಿಸುವುದೇ ಬಹಳ ಕಷ್ಟ. ಹೀಗಿರುವಾಗ ರೋಹಿತ್​ ಬರೋಬ್ಬರಿ ಮೂರು ದ್ವಿಶತಕ ಬಾರಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್​ ಎನ್ನುವ ಹಿರಿಮೆಯೂ ಇವರದ್ದಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿಯೂ ಒಂದು ದ್ವಿಶತಕ ಬಾರಿಸಿದ್ದಾರೆ. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 472 ಪಂದ್ಯಗಳನ್ನಾಡಿ 18,820 ರನ್​ ಬಾರಿಸಿದ್ದಾರೆ. ಇದರಲ್ಲಿ 48 ಶತಕ ಒಳಗೊಂಡಿದೆ. ಏಕದಿನ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ (18426), ರಾಹುಲ್ ದ್ರಾವಿಡ್ (10,768), ಸೌರವ್ ಗಂಗೂಲಿ (11,221), ವಿರಾಟ್ ಕೊಹ್ಲಿ (13848) ಮತ್ತು ಎಂಎಸ್ ಧೋನಿ (10599) ನಂತರ ಅತಿ ಹೆಚ್ಚು ರನ್ ಗಳಿಸಿದ ಆರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಕ್ರಿಕೆಟ್ ಸಾಧನೆಗೆ 2015ರಲ್ಲಿ ಅರ್ಜುನ ಪ್ರಶಸ್ತಿ, 2020ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗಳು ಲಭಿಸಿವೆ.

ಒಟ್ಟಾರೆ ಕ್ರಿಕೆಟ್​ ಸಾಧನೆ

ರೋಹಿತ್ ಶರ್ಮಾ ಈವರೆಗೆ 262 ಏಕದಿನ ಏಕದಿನ ಪಂದ್ಯಗಳ್ನನಾಡಿದ್ದಾರೆ. ಇದರಲ್ಲಿ 31 ಶತಕ, 3 ದ್ವಿಶತಕ ಮತ್ತು 55 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 10709 ರನ್​ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 59 ಪಂದ್ಯಗಳಿಂದ 4138 ರನ್​ ಬಾರಿಸಿದ್ದಾರೆ. 12 ಶತಕ ,1 ದ್ವಿಶತಕ ಮತ್ತು 17 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ 151 ಪಂದ್ಯ, 3974 ರನ್​, 5 ಶತಕ ಮತ್ತು 29 ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್​ನಲ್ಲಿಯೂ ಉತ್ತಮ ಸಾಧನೆ ಮಾಡಿರುವ ರೋಹಿತ್​ ನಾಯಕನಾಗಿ ಮುಂಬೈ ತಂಡಕ್ಕೆ 5 ಬಾರಿ ಕಪ್​ ಗೆದ್ದಿದ್ದಾರೆ. 252 ಐಪಿಎಲ್​ ಪಂದ್ಯಗಳಿಂದ 6522 ರನ್​, 2 ಶತಕ ಮತ್ತು 42 ಅರ್ಧಶತಕ ಬಾರಿಸಿದ್ದಾರೆ.

Exit mobile version