Site icon Vistara News

Rohit Sharma : ಹಿಟ್​ಮ್ಯಾನ್​ ರೋಹಿತ್​ ಈಗ ಸಿಕ್ಸರ್​ಗಳ ಕಿಂಗ್​

Rohit Sharma

ನವದೆಹಲಿ : ಅಫ್ಘಾನಿಸ್ತಾನ ವಿರುದ್ಧದ ಐಸಿಸಿ ವಿಶ್ವಕಪ್ 2023 ರ ಪಂದ್ಯದಲ್ಲಿ ಭಾರತದ ಬ್ಯಾಟರ್​ ರೋಹಿತ್ ಶರ್ಮಾ (Rohit Sharma) ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ಅಂತಾರರಾಷ್ಟ್ರೀಯ ಸಿಕ್ಸರ್​ಗಳನ್ನು ಬಾರಿಸಿದ ಹೊಸ ದಾಖಲೆ ಸೃಷ್ಟಿಸಿದರು. ಅವರು ವೆಸ್ಟ್ ಇಂಡೀಸ್​​ನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ 551 ಇನಿಂಗ್ಸ್​​ಗಳಲ್ಲಿ ಬಾರಿಸಿದ್ದ 553 ಸಿಕ್ಸರ್​ಗಳ ದಾಖಲೆ ಮುರಿದರು. ರೋಹಿತ್ ಖಾತೆಯಲ್ಲಿ ಈಗ 554 ಸಿಕ್ಸರ್​ಗಳಿದ್ದು, ಇದು ಕೇವಲ 473 ಇನಿಂಗ್ಸ್​ಗಳಲ್ಲಿ ಸೃಷ್ಟಿಯಾಗಿವೆ. ಏಕದಿನ ಪಂದ್ಯಗಳಲ್ಲಿ ಶಾಹಿದ್ ಅಫ್ರಿದಿ ಮತ್ತು ಗೇಲ್ ನಂತರ ರೋಹಿತ್ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಟಿ 20ಐನಲ್ಲಿ 140 ಇನಿಂಗ್ಸ್​ಗಳಲ್ಲಿ 182 ಸಿಕ್ಸರ್​ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್​​ನಲ್ಲಿ 77 ಸಿಕ್ಸರ್ಗಳೊಂದಿಗೆ ರೋಹಿತ್ ಮೂರನೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಎನಿಸಿಕೊಂಡಿದ್ದಾರೆ. ವೀರೇಂದ್ರ ಸೆಹ್ವಾಗ್ (91) ಮತ್ತು ಎಂಎಸ್ ಧೋನಿ (78) ನಂತರದ ಸ್ಥಾನದಲ್ಲಿದ್ದಾರೆ.

ಗರಿಷ್ಠ ಸಿಕ್ಸರ್ ಬಾರಿಸಿದವರ ಪಟ್ಟಿ ಇಲ್ಲಿದೆ

7 ಶತಕಗಳ ದಾಖಲೆ

ಶರ್ಮಾ (Rohit Sharma) ಹಲವು ದಾಖಲೆಗಳನ್ನು ಮಾಡಿದ್ದಾರೆ. ಅದರಲ್ಲೊಂದು ವಿಶ್ವ ಕಪ್​ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳ ದಾಖಲೆ. ಅವರಿಗೆ ಇದು ವಿಶ್ವ ಕಪ್​ನಲ್ಲಿ ಏಳನೇ ದಾಖಲೆಯಾಗಿದೆ. ಈ ಮೂಲಕ ಅವರು ಕ್ರಿಕೆಟ್​ ಇತಿಹಾಸದಲ್ಲಿ ಏಕ ದಿನ ವಿಶ್ವ ಕಪ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದೇ ವೇಳೆ ಅವರು ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಮ್ಮೆಟ್ಟಿಸಿದ್ದಾರೆ. ಸಚಿನ್ ಅವರು ವಿಶ್ವ ಕಪ್​ನಲ್ಲಿ 6 ಶತಕಗಳನ್ನು ಬಾರಿಸಿದ್ದರು.

ಈ ಸುದ್ದಿಗಳನ್ನೂ ಓದಿ :
ಧೋನಿ ಮಾಡಿದ್ರೆ ತಪ್ಪು, ರಿಜ್ವಾನ್​ ಉಗ್ರರಿಗೆ ಬೆಂಬಲ ಕೊಟ್ರೆ ಸರಿ; ಐಸಿಸಿ ವಿರುದ್ಧ ನೆಟ್ಟಿಗರು ಗರಂ
Virat Kohli : ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ
Virat Kohli : ಚೇಸಿಂಗ್ ವೇಳೆ ಅರ್ಧ ಶತಕಗಳು; ಇಲ್ಲಿಯೂ ಒಂದು ದಾಖಲೆ ಬರೆದ ವಿರಾಟ್​

ರೋಹಿತ್ ಕೇವಲ 63 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ ಈ ಮೈಲಿಗಲ್ಲನ್ನು ತಲುಪಿದರು. ಕೇವಲ 19 ಇನ್ನಿಂಗ್ಸ್ಗಳಲ್ಲಿ 1000 ರನ್ ಪೂರೈಸಿದ ವೇಗದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು 36 ವರ್ಷದ ಆಟಗಾರ ಸರಿಗಟ್ಟಿದರು.

ರೋಹಿತ್ ಶತಕಗಳ ವಿವರ ಇಲ್ಲಿದೆ

ಅತಿವೇಗದ 1000 ರನ್​

ವಿಶ್ವಕಪ್ ನಲ್ಲಿ ಅತಿ ವೇಗವಾಗಿ 1000 ರನ್ ಪೂರೈಸಿದ ದಾಖಲೆಯನ್ನೂ ರೋಹಿತ್ ಶರ್ಮಾ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಡಕ್ ಔಟ್ ಆದ ನಂತರ ಕೇವಲ 21 ರನ್​ಗಳ ಅಗತ್ಯವಿದ್ದ ರೋಹಿತ್, ಇದೀಗ ಅಫ್ಘಾನಿಸ್ತಾನ ವಿರುದ್ಧ 1,000 ರನ್ ಪೂರೈಸಿದರು. ಡೇವಿಡ್ ವಾರ್ನರ್ ಅವರೊಂದಿಗೆ 19 ಇನಿಂಗ್ಸ್​ಗಳಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಚಿನ್​ ದಾಖಲೆ ಮುರಿದ ರೋಹಿತ್

ರೋಹಿತ್​ ಶರ್ಮಾ ಭಾರತ ತಂದ ದಿಗ್ಗಜ ಸಚಿನ್​ ತೆಂಡೂಲ್ಕರ್ ಅವರ ದಾಖಲೆಯೊಂದನ್ನೂ ಅಫಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಅವರು ಬಾರಿಸಿದ ಶತಕ ವಿಶ್ವ ಕಪ್​ನಲ್ಲಿ ಅವರದ್ದು ಏಳನೇ ಶತಕ. ಈ ಮೂಲಕ ವಿಶ್ವ ಕಪ್​​ನಲ್ಲಿ ಅತಿ ಹೆಚ್ಚು ಶತಕಗಳನ್ನು ಪೂರೈಸಿದ ಆಟಗಾರ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ. ಈ ಹಿಂದೆ ಸಚಿನ್​ ತೆಂಡೂಲ್ಕರ್ ಮತ್ತು ರೋಹಿತ್​ ತಲಾ ಆರು ಶತಕಗಳನ್ನು ಬಾರಿಸಿದ್ದರು. ಅಂದಹಾಗೆ ರೋಹಿತ್ ಶರ್ಮಾ ಅರು 2019ರ ಒಂದೇ ಆವೃತ್ತಿಯಲ್ಲಿ ಐದು ಶತಕಗಳನ್ನು ಬಾರಿಸಿದ್ದರು.

Exit mobile version