Site icon Vistara News

ದಕ್ಷಿಣ ಆಫ್ರಿಕಾದ ಟೆಸ್ಟ್​ ಸರಣಿ ಭಾರತದ ಪಾಲಿನ ಕಬ್ಬಿಣದ ಕಡಲೆ; ಹೇಗಿದೆ ಇತಿಹಾಸ?

india in south africa test series

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ಪ್ರವಾಸ(India in South Africa Test Series) ಎಂಬುದು ಭಾರತದ ಪಾಲಿಗೆ ಯಾವತ್ತೂ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಈವರೆಗಿನ 8 ಟೆಸ್ಟ್‌ ಸರಣಿಗಳಲ್ಲಿ ಏಳನ್ನು ಕಳೆದುಕೊಂಡಿದೆ. ಒಂದನ್ನು ಡ್ರಾ ಮಾಡಿದ್ದೇ ದೊಡ್ಡ ಸಾಧನೆ. ಒಟ್ಟು ಟೆಸ್ಟ್‌ ಲೆಕ್ಕಾಚಾರದಲ್ಲೂ ಭಾರತದ್ದು ನಿರಾಶಾದಾಯಕ ಆಟ. ಹರಿಣಗಳ ನಾಡಿನಲ್ಲಿ ಆಡಿದ 20 ಟೆಸ್ಟ್‌ಗಳಲ್ಲಿ 10 ಪಂದ್ಯಗಳನ್ನು ಸೋತಿದೆ. ಏಳನ್ನು ಡ್ರಾ ಮಾಡಿಕೊಂಡಿದೆ. ಗೆದ್ದದ್ದು ಮೂರನ್ನು ಮಾತ್ರ. ಇದುವರೆಗೂ ಸರಣಿ ಗೆದ್ದಿಲ್ಲ.

ಭಾರತ ತಂಡ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಮಾಡಿದ್ದು 1992ರಲ್ಲಿ. ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಭಾರತ ಮೊದಲ ಟೆಸ್ಟ್ ಸರಣಿ ಆಡಿತ್ತು.​ 4 ಟೆಸ್ಟ್‌ಗಳಲ್ಲಿ ಹಣಾಹಣಿ ಇದಾಗಿತ್ತು. ಇದರಲ್ಲಿ 3 ಪಂದ್ಯಗಳು ಡ್ರಾ ಗೊಂಡರೆ, ಅಂತಿಮ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಗೆಲುವು ದಾಖಲಿಸಿತ್ತು.


ಇದಾದ ಬಳಿಕ ಭಾರತ ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. 1996ರಲ್ಲಿ. 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1 ಪಂದ್ಯ ಡ್ರಾ ಗೊಂಡರೆ, ಮುಂದಿನ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆದ್ದು ಬೀಗಿತ್ತು. ಇಲ್ಲಿ ಭಾರತ ಸರಣಿ ಗೆಲ್ಲಲು ವಿಫಲವಾಯಿತು.

ಆರಂಭಿಕ ಎರಡು ಪ್ರವಾಸದಲ್ಲಿ ಸೋಲು ಕಂಡಿದ್ದ ಭಾರತ ಮತ್ತೆ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡದ್ದು 2001ರಲ್ಲಿ ಸೌರವ್​ ಗಂಗೂಲಿ ನಾಯಕತ್ವದಲ್ಲಿ ಭಾರತ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕಣಕ್ಕಿಳಿದಿತ್ತು. ಆದರೆ ಇಲ್ಲಿಯೂ ಭಾರತ 1-0 ಹಿನ್ನಡೆಯಿಂದ ಸೋಲು ಕಂಡಿತ್ತು.

ಅವಕಾಶ ಕೈಚೆಲ್ಲಿದ ದ್ರಾವಿಡ್​-ಧೋನಿ

ಮೂರನೇ ಪ್ರಯತ್ನದಲ್ಲಿಯೂ ವಿಫಲವಾದ ಭಾರತ ಆ ಬಳಿಕ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಮಾಡಿದ್ದು 5 ವರ್ಷಗಳ ಬಳಿಕ. ಇದು 2006ರಲ್ಲಿ. ಇದು ಪ್ರಸ್ತುತ ಟೀಮ್​ ಇಂಡಿಯಾದ ಕೋಚ್​ ಆ್ಇರುವ ರಾಹುಲ್​ ದ್ರಾವಿಡ್​ ಅವರ ನಾಯಕತ್ವದಲ್ಲಿ. ಇಲ್ಲಿ ಭಾರತ ಸರಣಿ ಸೋಲು ಕಂಡರೂ ಗೆಲುವುವಿನ ಖಾತೆಯನ್ನು ತೆರೆಯುವಲ್ಲಿ ಯಶಸ್ವಿಯಾಯಿತು. ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಟೆಸ್ಟ್​ ಪಂದ್ಯ ಭಾರತೀಯ ನಾಯಕ ಎನ್ನುವ ಕೀರ್ತಿ ರಾಹುಲ್​ ಪಾಲಾಯಿತು. ಮೊದಲ ಟೆಸ್ಟ್‌ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದರೂ ಉಳಿದೆರಡರಲ್ಲಿ ಸೋತು ದುರದೃಷ್ಟವನ್ನು ತೆರೆದಿರಿಸಿತು.

ಇದನ್ನೂ ಓದಿ IND vs SA: ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್​ ಇತಿಹಾಸ, ಪಿಚ್​ ರಿಪೋರ್ಟ್​ ಹೇಗಿದೆ?

2010-11ರಲ್ಲಿ ಧೋನಿ ಸಾರಥ್ಯದ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಈ ತಂಡದ ಮೇಲೆ ಭಾರಿ ಬರವಸೆ ಇರಿಸಲಾಗಿತ್ತು. ಭಾರತ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್​ ಸರಣಿ ಗೆಲ್ಲಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, 1-1 ಸಮಬಲ ಸಾಧಿಸಿದ ಬಳಿಕ ಅಂತಿಮ ಟೆಸ್ಟ್‌ನಲ್ಲಿ ಮುಗ್ಗರಿಸಿ ಸರಣಿ ಕಳೆದುಕೊಂಡಿತು.

ಧೋನಿ ಸಾರಥ್ಯಧಲ್ಲಿ ಭಾರತ ಮತ್ತೆ 2013ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದಾಗ 2 ಟೆಸ್ಟ್‌ಗಳನ್ನಾಡಿ, ಸರಣಿಯನ್ನು 1-0 ಅಂತರದಿಂದ ಸೋತಿತ್ತು. ಇದಾದ ಬಳಿಕ ಕೊಹ್ಲಿ ಮತ್ತು ಕೆ.ಎಲ್​ ರಾಹುಲ್​ ಸಾರಥ್ಯದಲ್ಲಿ ಆಡಿದರೂ ಸರಣಿ ಗೆಲುವು ಮಾತ್ರ ಒಳಿಯಲಿಲ್ಲ. ಇದೀಗ 31 ವರ್ಷಗಳ ಬಳಿಕವಾದರೂ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದೀತೇ ಎಂಬುದೊಂದು ಕುತೂಹಲ.

ರೋಹಿತ್​ಗೆ ಅಗ್ನಿಪರೀಕ್ಷೆ

ರೋಹಿತ್​ ಶರ್ಮ ಅವರು ನಾಯಕನಾಗಿ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್​ ಸರಣಿ ಆಡುತ್ತಿದ್ದಾರೆ. ಇದುವರೆಗೂ ಭಾರತ ತಂಡ ಯಶಸ್ವಿ ನಾಯಕರಿಗೆ ಇಲ್ಲಿ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ರೋಹಿತ್​ ಶರ್ಮ ಈ ಸಾಧನೆ ಮಾಡಿಯಾರೇ ಎನ್ನುವುದನ್ನು ಕಾದು ನೋಡೆಬೇಕಿದೆ. ಗೆದ್ದರೆ 31 ವರ್ಷಗಳ ಬಳಿಕ ಭಾರತದ ಸರಣಿ ಸೋಲಿನ ಬರ ನೀಗಲಿದೆ. ಏಕದಿನ ವಿಶ್ವಕಪ್​ನಲ್ಲಿ ಆಡಿದ ಎಲ್ಲ 10 ಪಂದ್ಯಗಳನ್ನು ಗೆದ್ದು ಫೈನಲ್​ ತಲುಪುವಂತೆ ಮಾಡಿದ್ದ ರೋಹಿತ್​ ಫೈನಲ್​ ಪಂದ್ಯದಲ್ಲಿ ಎಡವಿದ್ದರು. ವಿಶ್ವಕಪ್​ ಬಳಿಕ ರೋಹಿತ್​ ಆಡುತ್ತಿರುವ ಮೊದಲ ಸರಣಿ ಇದಾಗಿದೆ.

Exit mobile version