Site icon Vistara News

Rohit Sharma : ಎಂಎಸ್ ಧೋನಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್ ರೋಹಿತ್ ಶರ್ಮಾ

Rohit Sharma

ವಿಸ್ತಾರ ನ್ಯೂಸ್ ಬೆಂಗಳೂರು: ​​ ಇಂದೋರ್​ನಲ್ಲಿ ಭಾನುವಾರ (ಜನವರಿ 14) ನಡೆದ ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್​ ಗೆಲವು ಸಾಧಿಸಿದೆ. ಇದರೊಂದಿಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಭಾರತ ತಂಡದ ಪರ ನೂತನ ದಾಖಲೆ ಮಾಡಿದ್ದಾರೆ. ಅವರು ಮಾಜಿ ನಾಯಕ ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್ ಧೋನಿಯ ದಾಖಲೆ ಸರಿಗಟ್ಟಲಿದ್ದಾರೆ.

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಇದುವರೆಗೆ ಆಡಿರುವ 53 ಟಿ20 ಪಂದ್ಯಗಳಲ್ಲಿ 41 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ 2007ರಲ್ಲಿ ಉದ್ಘಾಟನಾ ಐಸಿಸಿ ಟಿ20 ವಿಶ್ವಕಪ್ ಸೇರಿದಂತೆ ಧೋನಿ ನೇತೃತ್ವದಲ್ಲಿ ಭಾರತ ತಂಡ 72 ಪಂದ್ಯಗಳಲ್ಲಿ 41 ಪಂದ್ಯಗಳನ್ನು ಗೆದ್ದಿರುವ ಸಾಧನೆಯನ್ನು ಸರಿಗಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರು ಕೊನೇ ಪಂದ್ಯದಲ್ಲಿ ಗೆದ್ದರೆ ಭಾರತ ತಂಡದ ಪಾಲಿಗೆ ಚುಟುಕು ಕ್ರಿಕೆಟ್​ನಲ್ಲಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಳ್ಳಲಿದ್ದಾರೆ ರೋಹಿತ್ ಶರ್ಮಾ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಐಸಿಸಿ ವಿಶ್ವಕಪ್​ ಪಂದ್ಯಾವಳಿಯ ವೇಳೆ ರೋಹಿತ್ ತಮ್ಮ ಸಹ ಆಟಗಾರ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದರು. ಕೊಹ್ಲಿ 50 ಟಿ20 ಪಂದ್ಯಗಳಲ್ಲಿ 30 ಗೆಲುವುಗಳನ್ನು ದಾಖಲಿಸಿದ್ದರು.

ಭಾರತದ ಎಲ್ಲ ನಾಯಕರ ಪೈಕಿ ರೋಹಿತ್ ನಾಯಕನಾಗಿ ಅತ್ಯುತ್ತಮ ಗೆಲುವು – ಸೋಲಿನ ಅನುಪಾತ ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ಪ್ರತಿ ಸೋಲಿಗೆ ಸುಮಾರು 3:5 ಪಂದ್ಯಗಳ ಗೆಲುವು ಕಂಡಿದೆ ಭಾರತ. ಅನುಭವಿ ಆರಂಭಿಕ ಆಟಗಾರನ ಅಡಿಯಲ್ಲಿ ಟೀಮ್ ಇಂಡಿಯಾ ತನ್ನ 52 ಪಂದ್ಯಗಳಲ್ಲಿ ಕೇವಲ 12 ಪಂದ್ಯಗಳಲ್ಲಿ ಮಾತ್ರ ಸೋತಿದೆ. ದುರದೃಷ್ಟವಶಾತ್ ಅವುಗಳಲ್ಲಿ ಒಂದು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲು.

ಇದನ್ನೂ ಓದಿ : Rohit Sharma : ಶುಭ್​ಮನ್​ ಹೊರಗಿಟ್ಟು ಸೇಡು ತೀರಿಸಿಕೊಂಡ್ರಾ ರೋಹಿತ್​ ಶರ್ಮಾ?

ಸರಣಿಯ ಅಂತ್ಯದ ವೇಳೆಗೆ ಧೋನಿಯನ್ನು ಮೀರಿಸುವ ಅವಕಾಶ ರೋಹಿತ್​ಗೆ ಇದೆ. ಜತೆಗೆ ಮುಂಬರುವ ಟಿ20 ವಿಶ್ವಕಪ್ 2024ರ ಮೂಲಕ 15 ತಿಂಗಳ ಹಿಂದೆ ಅಡಿಲೇಡ್​ನಲ್ಲಿ ಆಗಿರುವ ವಿಶ್ವ ಕಪ್ ಸೆಮಿಫೈನಲ್ ಮುಖಭಂಗಕ್ಕೆ ಉತ್ತರ ಹೇಳುವ ಅವಕಾಶವಿದೆ.

ಇತ್ತೀಚಿನ ಏಕದಿನ ವಿಶ್ವಕಪ್ 2023ರಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ರನ್ನರ್ ಅಪ್​ ಪ್ರಶಸ್ತಿ ಗೆದ್ದಿತ್ತು. ಆದರೆ, ಚಾಂಪಿಯನ್ ಆಗುವ ಅವಕಾಶ ಕಳೆದುಕೊಂಡ ಅನುಭವಿ ಮುಂಬೈಕರ್ ಬೇಸರಕ್ಕೆ ಒಳಗಾಗಿದ್ದರು. ಇದೀಗ ಕೆರಿಬಿಯನ್ ಮತ್ತು ಯುಎಸ್ಎಯಲ್ಲಿ ಆ ಸೋಲನ್ನು ಮರೆಯುವ ಅವಕಾಶವಿದೆ. ಟಿ20 ಐ ನಾಯಕನಾಗಿ, ರೋಹಿತ್ 147.10 ರ ಅತ್ಯುತ್ತಮ ಸ್ಟ್ರೈಕ್ ರೇಟ್​ನಲ್ಲಿ 1,527 ರನ್ ಗಳಿಸಿದ್ದಾರೆ. ಎರಡು ಶತಕಗಳನ್ನು ಮತ್ತು 10 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಸಂಕ್ಷಿಪ್ತ ರೂಪದ ಕ್ರಿಕೆಟ್​ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಪುರುಷರ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 150 ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ. ಇಂದೋರ್​ನ ಹೋಳ್ಕರ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ನಡೆಯುತ್ತಿದೆ. ಇದು ಬ್ಯಾಟರ್​ಗೆ ವಿಶೇಷ ದಿನವಾಗಿದೆ. ಏಕೆಂದರೆ ಅವರ 150 ಪಂದ್ಯಗಳನ್ನು ಆಡುವ ಜತೆಗೆ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಟಿ20 ಮಾದರಿಯಲ್ಲಿ ಭಾರತೀಯ ಕ್ರಿಕೆಟ್ ಮಿನುಗಲು ರೋಹಿತ್ ಶರ್ಮಾ ಕೂಡ ಒಬ್ಬರು. ಅವರು 2007ರಲ್ಲಿ ಈ ಮಾದರಿಗೆ ಪದಾರ್ಪಣೆ ಮಾಡಿದ್ದು. ಅಂದಿನಿಂದ ಈ ಮಾದರಿಯಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಟಿ20 ಪಂದ್ಯಗಳಲ್ಲಿ ಮಾತ್ರವಲ್ಲದೆ ಇತರ ಎರಡು ಸ್ವರೂಪಗಳಲ್ಲಿಯೂ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಹಲವು ವರ್ಷಗಳಿಂದ, ರೋಹಿತ್ ಶರ್ಮಾ ಆಟದ ಅತ್ಯುತ್ತಮ ಪವರ್ ಹಿಟ್ಟರ್​ ಆಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಸಮಯದಿಂದ ತಂಡದ ಬೆನ್ನೆಲುಬಾಗಿದ್ದಾರೆ. ಬ್ಯಾಟರ್​​ ಅನೇಕ ವಿಶ್ವ ಪ್ರಸಿದ್ಧ ಇನಿಂಗ್ಸ್​ಗಳನ್ನು ಆಡಿದ್ದಾರೆ. ತಂಡವನ್ನು ವಿಶೇಷ ಗೆಲುವುಗಳ ಕಡೆಗೆ ಕೊಂಡೊಯ್ದಿದ್ದಾರೆ.

ರೋಹಿತ್ ಶರ್ಮಾ ಇತ್ತೀಚೆಗೆ ಟಿ20 ಪಂದ್ಯಗಳಲ್ಲಿ 100 ಗೆಲುವುಗಳ ಭಾಗವಾಗಿದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ತಂಡವು 6 ವಿಕೆಟ್​ಗಳ ವಿಜಯ ಸಾಧಿಸಿದ ನಂತರ ಅವರು ಈ ಸಾಧನೆ ಮಾಡಿದ್ದಾರೆ.

Exit mobile version