ಮೊಹಾಲಿ: ಇಲ್ಲಿನ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಜನವರಿ 11 ರಂದು ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಅಫಘಾನಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma ) ತಮ್ಮ ತಂಡದ ಸಹ ಆಟಗಾರರೊಬ್ಬರ ಹೆಸರನ್ನು ಮರೆಯುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ರೋಹಿತ್ ಶರ್ಮಾ ತಮ್ಮ ಮರೆಗುಳಿ ಸ್ವಭಾವದ ಮೂಲಕ ಆಗಾಗ ಸುದ್ದಿಯಾಗುತ್ತಾರೆ. ಇದೀಗ ಮತ್ತೊಂದು ಬಾರಿ ಆಟಗಾರನ ಹೆಸರನ್ನೇ ಮರೆತು ಸೋಶಿಯಲ್ ಮೀಡಿಯಾಗಳಲ್ಲಿ ಮೀಮ್ಸ್ಗೆ ಕಾರಣರಾಗಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಅವರು ಪ್ಲೇಯಿಂಗ್ ಇಲೆವೆನ್ ನಿಂದ ವಂಚಿತಗೊಂಡ ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದರು. ಅವರು ಸಂಜು ಸ್ಯಾಮ್ಸನ್, ಅವೇಶ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಹೆಸರನ್ನು ಬಹಿರಂಗಪಡಿಸಿದರು. ಆದರೆ ಕೊನೆಯ ಹೆಸರನ್ನು ಮರೆತರು. ಅವರೇ ಸ್ಪಿನ್ನರ್ ಕುಲ್ದೀಪ್ ಯಾದವ್. ಆದರೆ, ಒಟ್ಟು ಸದಸ್ಯರ ಬಗ್ಗೆ ಮಾಹಿತಿ ಹೊಂದಿದ್ದ ವೀಕ್ಷಕ ವಿವರಣೆಗಾರ ಮುರಳಿ ಕಾರ್ತಿಕ್ ಸ್ವಲ್ಪ ಸಹಾಯ ಮಾಡಿದರು. ಅವರು ಕುಲ್ದೀಪ್ ಅವರು ಅಲ್ಲವೇ ಎಂದು ಕೇಳುವ ಮೂಲಕ ನೆರವು ಕೊಟ್ಟರು.
Typical Rohit Sharma moment during the toss😂#RohitSharma𓃵 #INDvsAFG pic.twitter.com/ntWUjdWF4t
— Quantum⁴⁵ Yadav (@45Quantum) January 11, 2024
ಸಂಜು, ಅವೇಶ್, ಯಶಸ್ವಿ ಅವರಂತಹ ಆಟಗಾರರು ತಂಡದಲ್ಲಿ ಇರುವುದಿಲ್ಲ. ಅವರು ಆಡುವ ಪರಿಸ್ಥಿತಿಯಲ್ಲಿ ಇಲ್ಲ. ಮತ್ತೊಬ್ಬರು ಆಡುತ್ತಿಲ್ಲ. ಅವರ ಬಗ್ಗೆ ನಿಮಗೆ ಟಾಸ್ಗೆ ಮೊದಲೇ ತಿಳಿಸಿದ್ದೇನೆ ಎಂದು ಹೇಳಿದರು. ಈ ವೇಳೆ ಕಾರ್ತಿಕ್ ಕುಲ್ದೀಪ್ ಅವರಲ್ವೇ ಎಂದು ಹೇಳಿದರು. ಆಗ ರೋಹಿತ್ ಶರ್ಮಾ ನೀವು ಹೇಳಿದ್ದು ಸರಿ ಎಂದರು.
ಟಾಸ್ ಆಯ್ಕೆ ಹೇಳಲು ಮರೆತಿದ್ದರು
ರೋಹಿತ್ಗೆ ಮರೆಗುಳಿತನ ಹೊಸತಲ್ಲ. ಏಕದಿನ ಪಂದ್ಯವೊಂದರ ಸಮಯದಲ್ಲಿ ಅವರು ಟಾಸ್ ಆಯ್ಕೆ ಹೇಳಲು ಮರೆತಿದ್ದ ಘಟನೆ ನಡೆದಿತ್ತು. ಅದೇ ರೀತಿ ಟೀಮ್ ಇಂಡಿಯಾ ನಾಯಕ ಹೋಟೆಲ್ನಲ್ಲಿ ಅಥವಾ ವಿಮಾನಗಳಲ್ಲಿ ತಮ್ಮ ವಸ್ತುಗಳನ್ನು ಮರೆತುಬಿಡುವುದು ಮಾಮೂಲು. ವಿರಾಟ್ ಕೊಹ್ಲಿ ಈ ವಿಷಯವನ್ನು ಹಿಂದೊಮ್ಮೆ ಬಹಿರಂಗ ಮಾಡಿದ್ದರು.
ಇದನ್ನೂ ಓದಿ : Shreyas Iyer : ಐಪಿಎಲ್ ದುಡ್ಡು ಬರುವ ಮೊದಲು ಹೆಣ್ಣು ಮಕ್ಕಳು ಕ್ಯಾರೇ ಮಾಡುತ್ತಿರಲಿಲ್ಲ ಎಂದ ಶ್ರೇಯಸ್!
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬಲ ಸೊಂಟದ ನೋವಿನಿಂದಾಗಿ ಆರಂಭಿಕ ಟಿ20 ಪಂದ್ಯದಲ್ಲಿ ಆಯ್ಕೆಯಿಂದ ವಂಚಿತರಾದರು. . ಸರಣಿಗೆ ಮುಂಚಿತವಾಗಿ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು 14 ತಿಂಗಳ ನಂತರ ಟಿ20 ಐಗೆ ಮರಳುತ್ತಿರುವ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಲು ಜೈಸ್ವಾಲ್ ಉತ್ತಮ ಎಂದಿದ್ದರು.
2022ರ ಟಿ 20 ವಿಶ್ವಕಪ್ನಲ್ಲಿ ಆಡಿದ್ದರು
ಆರಂಭಿಕ ಬ್ಯಾಟರ್ ರೋಹಿತ್ ಕೊನೆಯ ಬಾರಿಗೆ ಟಿ20 ಪಂದ್ಯದಲ್ಲಿ ಆಡಿರುವುದು ವಿಶ್ವಕಪ್ 2022ರಲ್ಲಿ. ಅಲ್ಲಿ ಭಾರತವು ಸೆಮಿಫೈನಲ್ನಲ್ಲಿ ಹತ್ತು ವಿಕೆಟ್ಗಳ ಅವಮಾನಕರ ಸೋಲಿಗೆ ಒಳಗಾಗಿತ್ತು. ಇಂಗ್ಲೆಂಡ್ ವಿರುದ್ಧದ ಈ ಸೋಲಿನ ಬಳಿಕ ರೋಹಿತ್ ಸಂಕ್ಷಿಪ್ತ ಮಾದರಿಯಲ್ಲಿ ಆಡಿರಲಿಲ್ಲ. ರೋಹಿತ್ ಆರು ಇನಿಂಗ್ಸ್ಗಳಲ್ಲಿ 19.33 ಸರಾಸರಿಯಲ್ಲಿ ಮತ್ತು 106.42 ಸ್ಟ್ರೈಕ್ ರೇಟ್ನಲ್ಲಿ ಕೇವಲ 116 ರನ್ ಗಳಿಸಿದ್ದರು.
ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಗಾಯಗೊಂಡ ಕಾರಣ ಬಿಸಿಸಿಐ ಅಫ್ಘಾನಿಸ್ತಾನ ಸರಣಿಗೆ ಹೊಸ ನಾಯಕನನ್ನು ಹೆಸರಿಸುವ ಅನಿವಾರ್ಯತೆ ಎದುರಿಸಿತ್ತು. ಆದರೆ, ರೋಹಿತ್ ವಿರಾಟ್ ಮರಳುವಿಕೆಯೊಂದಿಗೆ ಈ ಸಮಸ್ಯೆ ಇಲ್ಲದಾಯಿತು.