Site icon Vistara News

Rohit Sharma : ಏರ್​ಪೋರ್ಟ್​ಗೆ ಹೊರಡುವಾಗ ಪಾಸ್​​​ಪೋರ್ಟ್​​ ಮರೆತು ಬಂದ ರೋಹಿತ್​! ಎಲ್ಲರಿಗೂ ಪೀಕಲಾಟ

Rohit Sharma 2

ಕೊಲೊಂಬೊ: ಕೆಲವು ವರ್ಷಗಳ ಹಿಂದೆ ಯೂಟ್ಯೂಬ್ ಶೋ ಬ್ರೇಕ್​ಪಾಸ್ಟ್​ ವಿತ್​ ಚಾಂಪಿಯನ್ಸ್​ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಲಿ ನಾಯಕ ರೋಹಿತ್ ಶರ್ಮಾ ಅವರಿಗೆ ಇರುವ ಮರೆವಿನ ಸಮಸ್ಯೆ ಬಗ್ಗೆ ಹೇಳಿದ್ದರು. ಏರ್​ಪೋರ್ಟ್​ ಸೇರಿದಂತೆ ನಾನಾ ಕಡೆ ಅವರು ವಸ್ತುಗಳನ್ನು ಮರೆತು ಹೋಗುತ್ತಿದ್ದರು. ಅದರಲ್ಲಿ ಬೆಲೆ ಬಾಳುವ ವಸ್ತುಗಳೂ ಸೇರಿಕೊಂಡಿವೆ ಎಂಬುದಾಗಿ ಹೇಳಿದ್ದರು. ಅದಕ್ಕೆ ಈ ಹಿಂದೆ ಹಲವಾರು ಉದಾಹರಣೆಗಳು ಸಿಕ್ಕಿದೆ. ಇದೀಗ ಸಿಕ್ಕಿರುವ ತಾಜಾ ಪ್ರಸಂಗವೊಂದರಲ್ಲಿ ಏರ್​ಪೋರ್ಟ್​ಗೆ ಹೋಗಲು ಹೊರಟಿದ್ದ ರೋಹಿತ್​ ಶರ್ಮಾ ಪಾಸ್​ಪೋರ್ಟ್​ ಮರೆತು ಬಂದಿದ್ದು ಸುದ್ದಿಯಾಗಿದೆ.

“ರೋಹಿತ್ ಶರ್ಮಾ ಅವರಂತೆ ಮರೆಯುವುದನ್ನು ನಾನು ಇದುವರೆಗೆ ಯಾರನ್ನೂ ನೋಡಿಲ್ಲ. ಅವರು ತಮ್ಮ ಐಪ್ಯಾಡ್, ಪಾಸ್ಪೋರ್ಟ್ ಅನ್ನು ಸಹ ಮರೆತುಬಿಡುತ್ತಾರೆ ಎಂದು ಕೊಹ್ಲಿ ಎಪಿಸೋಡ್​ನಲ್ಲಿ ಹೇಳಿದ್ದರು. ಅದಕ್ಕೆ ಈಗ ಸಾಕ್ಷಿ ಸಿಕ್ಕಿದ್ದು ಏಷ್ಯಾ ಕಪ್ ಗೆಲುವಿನ ಬಳಿಕ ಮುಂಬಯಿಗೆ ಹೊರಟಿದ್ದ ರೋಹಿತ್ ಪಾಸ್​ಪೋರ್ಟ್​ ಹೋಟೆಲ್​ನಲ್ಲಿಯೇ ಬಿಟ್ಟು ಬಸ್​ ಹತ್ತಿ ಕುಳಿತಿದ್ದರು. ಬಳಿಕ ಹೋಟೆಲ್​ ಸಿಬ್ಬಂದಿ ಬಸ್​ ತನಕ ಬಂದು ಪಾಸ್​ಪೋರ್ಟ್ ಕೊಟ್ಟು ಹೋಗಿದ್ದರು.

ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಶರ್ಮಾ ಬಸ್ ಒಳಗೆ ಇರುವುದನ್ನು ಕಾಣಬಹುದು, ಜಸ್ಪ್ರೀತ್ ಬುಮ್ರಾ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಅವರ ಹಿಂದೆ ಕುಳಿತಿರುವುದು ಕಂಡುಬಂದಿದೆ. ವಿಕೆಟ್ ಕೀಪರ್ ಬ್ಯಾಟರ್​ ಕೆಎಲ್ ರಾಹುಲ್ ಅವರ ಹಿಂದೆ ನಿಂತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವರದಿಗಳ ಪ್ರಕಾರ, ಭಾರತೀಯ ತಂಡದ ಸಹಾಯಕ ಸಿಬ್ಬಂದಿಯ ಸದಸ್ಯರೊಬ್ಬರು ಶರ್ಮಾ ಅವರಿಗೆ ಪಾಸ್​​ಪೋರ್ಟ್​​ ಕೊಟ್ಟಿದ್ದು ವಿಡಿಯೊದಲ್ಲಿ ದಾಖಲಾಗಿದೆ.

ಅನೇಕ ಕಾಮೆಂಟ್​ಗಳು

ಈ ವೀಡಿಯೊಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಂದ ಅನೇಕ ಕಾಮೆಂಟ್​​ಗಳು ಬಂದಿವೆ. ಅವರಲ್ಲಿ ಕೆಲವರು ಶರ್ಮಾ ಪಾಸ್ಪೋರ್ಟ್ ಏಕೆ ಮರೆತಿರಬಹುದು ಎಂಬುದಕ್ಕೆ ತಮ್ಮದೇ ಆದ ಕಾರಣಗಳನ್ನು ನೀಡಿದ್ದಾರೆ.

ಅವರು ಈಗ ವಿಶ್ವಕಪ್ ಗೆಲ್ಲುವ ಬಗ್ಗೆ ಯೋಚಿಸುತ್ತಿದ್ದಾರೆ. ಚಿಂತಿಸಬೇಡಿ ಕ್ಯಾಪ್ಟನ್. ಅದು ನಡೆಯುವುದು ಭಾರತದಲ್ಲೇ ಎಂದು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

“ಇದನ್ನು ಈ ರೀತಿ ಗ್ರಹಿಸೋಣ. ರೋಹಿತ್ ಅವರ ಮರೆಗುಳಿತನದಿಂದಾಗಿ ಅವರು ಮೈದಾನದಲ್ಲಿ ಶಾಂತವಾಗಿರುತ್ತಾರೆ. ಮೈದಾನದಲ್ಲಿ ಗಮನ ಕೇಂದ್ರೀಕರಿಸಲು ಅವರಿಗೆ ನೆರವಾಗಿದೆ.ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ಭಾನುವಾರ ನಡೆದ ಏಷ್ಯಾಕಪ್ ವಿಜೇತ ತಂಡದ ಭಾಗವಾಗಿದ್ದ ತಂಡದ ಹೆಚ್ಚಿನ ಸದಸ್ಯರು ಸೋಮವಾರ ಮುಂಜಾನೆ ಮುಂಬಯಿಗೆ ಆಗಮಿಸಿದ್ದಾರೆ.

ಇದನ್ನೂ ಓದಿ : Mohammed Siraj : ಪಂದ್ಯ ಶ್ರೇಷ್ಠ ಪ್ರಶಸ್ತಿಯ ಚೆಕ್​ ದಾನ ಮಾಡಿದ ಸಿರಾಜ್​​ಗೆ ನೆಟ್ಟಿಗರ ಮೆಚ್ಚುಗೆ

ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ (ಸೆಪ್ಟೆಂಬರ್ 17) ನಡೆದ ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 8ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತ ತಂಡವು ಮೊಹಮ್ಮದ್ ಸಿರಾಜ್ ಅವರ ಅಸಾಧಾರಣ ಪ್ರದರ್ಶನದಿಂದ ಫೈನಲ್​ನಲ್ಲಿ ಗೆಲುವು ಕಂಡಿತು ಸಿರಾಜ್​ ಏಳು ಓವರ್​ಗಳಲ್ಲಿ 21 ರನ್​ಗಳಿಗೆ 6 ವಿಕೆಟ್​ಗಳನ್ನು ಪಡೆದಿದ್ದರು.

ಸಿರಾಜ್​ ಅವರ ಅಸಾಧಾರಣ ಪ್ರಯತ್ನದಿಂದಾಗಿ ಶ್ರೀಲಂಕಾ 15.2 ಓವರ್​ಗಳಲ್ಲಿ ಕೇವಲ 50 ರನ್​ಗಳಲ್ಲಿ ಆಲೌಟ್ ಆಯಿತು. ಭಾರತ 6.1 ಓವರ್​ಗಳಲ್ಲಿ 51 ರನ್​ಗಳಲ್ಲಿ ಆಲೌಟ್ ಆಯಿತು. ಏಷ್ಯಾಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕಾಗಿ ಹಾಲಿ ಚಾಂಪಿಯನ್ಸ್ ತಂಡವನ್ನು ಔಟ್ ಮಾಡುವ ಮೂಲಕ, ಇನ್ನಿಂಗ್ಸ್ ನಲ್ಲಿ 263 ಎಸೆತಗಳು ಬಾಕಿ ಇರುವಾಗ ಭಾರತವು ಜಯ ಸಾಧಿಸಿತು. ಎಸೆತಗಳ ಸಂಖ್ಯೆಯ ದೃಷ್ಟಿಯಿಂದ ತನ್ನ ಅತಿದೊಡ್ಡ ಏಕದಿನ ವಿಜಯವನ್ನು ಸಾಧಿಸಿತು.

Exit mobile version