ಬೆಂಗಳೂರು: ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ರೋಮಾಂಚಕ ಐಪಿಎಲ್ 2024ರ (IPL 2024) ಪಂದ್ಯದ ಕೊನೆಯ ಓವರ್ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮ ತಂಡಕ್ಕೆ ಫೀಲ್ಡ್ ಸೆಟ್ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಹಾಲಿ ನಾಯಕ ಪಾಂಡ್ಯ ಇದ್ದ ಹೊರತಾಗಿಯೂ ಅವರು ಬೌಲರ್ ಜತೆ ಸೇರಿಕೊಂಡು ಫೀಲ್ಡ್ ಸೆಟ್ ಮಾಡುವ ವಿಡಿಯೊ ವೈರಲ್ ಆಗಿದೆ ಯುವ ಬೌಲರ್ ಕೂಡ ಪಾಂಡ್ಯನ ಮಾತುಗಳಿಗೆ ಕಿಮ್ಮತ್ತು ಕೊಡದೇ ಕೇವಲ ರೋಹಿತ್ ಮಾತುಗಳನ್ನು ಮಾತ್ರ ಕೇಳಿಸಿಕೊಳ್ಳುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.
My guy, Madhwal was trying his best not to look at Hardik 😭😭😭 pic.twitter.com/DlWlHj2BV7
— ab (rohit's version) (@ydisskolaveridi) April 18, 2024
ಪಂದ್ಯವನ್ನು ಮುಂಬಯಿ ತಂಡ ಬಹುತೇಕ ಕಳೆದುಕೊಳ್ಳುವ ಹಂತದಲ್ಲಿ ಇತ್ತು. ಆದರೆ, ಕೊನೇ ಹಂತದಲ್ಲಿ ಗೆಲುವು ಲಭಿಸಿತು. ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 193 ರನ್ಗಳ ಗುರಿ ಬೆನ್ನತ್ತಿದ ಕಿಂಗ್ಸ್ ಎರಡನೇ ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿತ್ತು. ಆದರೆ ಅಶುತೋಷ್ ಶರ್ಮಾ 28 ಎಸೆತಗಳಲ್ಲಿ 61 ರನ್ ಗಳಿಸಿ ಗೆಲುವು ಸಾಧಿಸುವ ಭರವಸೆ ಮೂಡಿಸಿದರು. ಕೊನೆಯ ಓವರ್ನಲ್ಲಿ ಆತಿಥೇಯರಿಗೆ ಗೆಲ್ಲಲು 12 ರನ್ಗಳ ಅವಶ್ಯಕತೆಯಿತ್ತು. ಆದರೆ ಕೇವಲ ಒಂದು ವಿಕೆಟ್ ಮಾತ್ರ ಉಳಿದಿತ್ತು. ಮುಂಬೈ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಜವಾಬ್ದಾರಿಯನ್ನು ಬೌಲರ್ ಆಕಾಶ್ ಮಧ್ವಾಲ್ ಅವರಿಗೆ ನೀಡಲಾಯಿತು.
ಕೊನೆಯ ಓವರ್ ಎಸೆಯುವ ಮೊದಲು, ಮಧ್ವಾಲ್ ತಮ್ಮ ಮೊದಲ ಮೂರು ಓವರ್ಗಳಲ್ಲಿ 44 ರನ್ ಬಿಟ್ಟುಕೊಟ್ಟಿದ್ದರು. ವಿಕೆಟ್ ಪಡೆದಿರಲಿಲ್ಲ. ರೊಮಾರಿಯೊ ಶೆಫರ್ಡ್ಗೆ ಚೆಂಡನ್ನು ನೀಡುವ ಆಯ್ಕೆಯನ್ನು ಹಾರ್ದಿಕ್ ಹೊಂದಿದ್ದರು. ಆದರೆ, ರೋಹಿತ್ ಮಧ್ವಾಲ್ ಅವರನ್ನು ಆಯ್ಕೆ ಮಾಡಿದರು. ಬರೋಡಾ ಆಲ್ರೌಂಡರ್ ಬೌಲಿಂಗ್ಗೆ ಮೊದಲು ರೋಹಿತ್ ಜತೆ ಸುದೀರ್ಘ ಚರ್ಚೆ ನಡೆಸಿದ್ದರು. ಆದರೆ, ನಾಯಕ ಪಾಂಡ್ಯನ ಬಳಿ ಒಂದೇ ಒಂದು ಮಾತು ಆಡಿರಲಿಲ್ಲ. ಮಾಜಿ ನಾಯಕ ಹಾಗೂ ಬೌಲರ್ ಫೀಲ್ಡ್ ಸೆಟ್ ಮಾಡುವಾಗ ಪಾಂಡ್ಯ ಪೆಚ್ಚು ಮೋರೆ ಹಾಕಿ ನೋಡುತ್ತಿದ್ದರು.
ಇದನ್ನೂ ಓದಿ: Royal Challenges Bangalore : ಬೆಂಗಳೂರಿನ ಮೂರು ಕೆರೆಗಳನ್ನೂ ಅಭಿವೃದ್ಧಿ ಮಾಡಿದ ಆರ್ಸಿಬಿ
ರೋಹಿತ್ ಶರ್ಮಾ ಅವರ ನಾಯಕತ್ವದ ಕೌಶಲ್ಯಗಳ ಬಗ್ಗೆ ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಆಕಾಶ್ ಮಧ್ವಾಲ್, ಮೈದಾನದ ಫೀಲ್ಡ್ ಸೆಟಿಂಗ್ನಲ್ಲಿ ಅವರ ನೆರವು ಕೇಳಿದ್ದಾರೆ. ಕೊನೆಯಲ್ಲಿ, ಹಾರ್ದಿಕ್ ರೋಹಿತ್ ಹೇಳಿದ್ದನ್ನೇ ಒಪ್ಪಿಕೊಂಡರು.
ಪಂಜಾಬ್ ವಿರುದ್ಧ ಮುಂಬೈಗೆ ಗೆಲುವು
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್ ಮುಗಿಸಲು ಮುಂಬೈ ಇಂಡಿಯನ್ಸ್ 20 ನೇ ಓವರ್ನಲ್ಲಿ ಕೇವಲ ಒಂದು ವಿಕೆಟ್ ಅಗತ್ಯವಿತ್ತು. ಕಗಿಸೊ ರಬಾಡ ಎರಡು ರನ್ ಗಳಿಸುವ ಯೋಜನೆಯಲ್ಲಿ ಓಡಿದರು. ಅವರು ರನ್ಔಟ್ ಆದರು. ಈ ಪಂದ್ಯವನ್ನು ಹಾರ್ದಿಕ್ ಬಳಗ 9 ರನ್ ಗಳಿಂದ ಗೆದ್ದುಕೊಂಡಿತು. 4 ಓವರ್ಗಳಲ್ಲಿ 21 ರನ್ಗೆ 3 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮತ್ತೊಂದು ಗಮನಾರ್ಹ ಪ್ರದರ್ಶನದಲ್ಲಿ, ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೊಟ್ಜೆ ಕೂಡ ಬುಮ್ರಾಗೆ ಉತ್ತಮ ಬೆಂಬಲ ನೀಡಿ 3 ವಿಕೆಟ್ ಪಡೆದರು. ಐಪಿಎಲ್ 2024 ರ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ಇನ್ನು ರಾಜಸ್ಥಾನ್ ರಾಯಲ್ಸ್ (ಆರ್ಆರ್ ವಿರುದ್ಧ ಆಡಲಿದೆ.