ಬೆಂಗಳೂರು: ವಿರಾಟ್ ಕೊಹ್ಲಿ (Virat Kohli) ಒಂದು ದಶಕದಲ್ಲಿ ಕ್ರೀಡೆಯ ಅತಿದೊಡ್ಡ ಸೂಪರ್ಸ್ಟಾರ್. ಅವರನ್ನು ಆಧುನಿಕ ಕಾಲದ ಶ್ರೇಷ್ಠ ಎಂದು ಕ್ರಿಕೆಟಿಗ ಎಂದೇ ಪರಿಗಣಿಸಲಾಗಿದೆ. ಜಾಗತಿಕ ಕ್ರಿಕೆಟ್ ಕ್ಷೇತ್ರದಲ್ಲಿ ವ್ಯಾಪಕ ಮೆಚ್ಚುಗೆ ಪಡೆದ ವಿರಾಟ್ ಕೊಹ್ಲಿಯ ಗಮನಾರ್ಹ ಗುಣಗಳಲ್ಲಿ ಒಂದು ಮೈದಾನದಲ್ಲಿ ಅವರ ಸಂಭ್ರಮಾಚರಣೆ. ಅವರು ತಮ್ಮ ತಂಡದ ಆಟಗಾರರ ಯಶಸ್ಸಿನಲ್ಲಿ ಪಾಲು ಪಡೆಯುವುದರಲ್ಲಿ ಎಲ್ಲರಿಗಿಂತಲೂ ಮುಂದು. ಅದರಲ್ಲೂ ವಿಕೆಟ್ ಬಿದ್ದಾಗ ಬೌಲರ್ಗಿಂತಲೂ ಹೆಚ್ಚು ಸಂಭ್ರಮಿಸುತ್ತಾರೆ.
Wait for Kohli and MSD 🤣#RohitSharma pic.twitter.com/iTDoOlxzah
— ICT 💙 (@ROHIRAT_) January 26, 2024
ಭಾರತದ ಮಾಜಿ ನಾಯಕ ಆಗಾಗ್ಗೆ ತಮ್ಮ ಬ್ಯಾಟಿಂಗ್ ಸಾಧನೆಗಳಿಗಿಂತ ಎದುರಾಳಿಗಳ ವಿಕೆಟ್ಗಳನ್ನು ಹೆಚ್ಚು ಸಂಭ್ರಮಿಸುವುದನ್ನು ಕಾಣಬಹುದು. ಭಾರತೀಯ ನಾಯಕ ರೋಹಿತ್ ಶರ್ಮಾ ಸೇರಿದಂತೆ ಭಾರತೀಯ ತಂಡ ಮತ್ತು ಐಪಿಎಲ್ ತಂಡದ ಆಟಗಾರರು ಕೊಹ್ಲಿಯ ಈ ಅವತಾರವನ್ನು ನೋಡಿದವರೆ. ಅಂತೆಯೇ ವಿರಾಟ್ ಕೊಹ್ಲಿ ಆಟದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಭಾರತ ಆಡುವಾಗ ಟಿವಿ ಕ್ಯಾಮೆರಾಗಳಿಂದ ಹೆಚ್ಚಿನ ಗಮನ ಸೆಳೆಯುತ್ತಾರೆ ಅವರು.
ಮುಖ್ಯವಾಗಿ ಮೈದಾನದಲ್ಲಿ ಅವರ ಉಲ್ಲಾಸದ ವರ್ತನೆಗಳು, ಎದುರಾಳಿ ಆಟಗಾರರೊಂದಿಗಿನ ತಮಾಷೆಗಳು ಮತ್ತು ಮೈದಾನದಲ್ಲಿ ಅವರ ಆಕ್ರಮಣಕಾರಿ ವರ್ತನೆಯಿಂದಾಗಿ ಅವರ ತಂಡದ ಸದಸ್ಯರ ನೈತಿಕ ಸ್ಥೈರ್ಯ ಹೆಚ್ಚಿಸುತ್ತದೆ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಮೈದಾನದಲ್ಲಿ ಸುಮ್ಮನಿರದ ಆಟಗಾರ ಎಂದರೆ ಕೊಹ್ಲಿ ಮಾತ್ರ.
ರೋಹಿತ್ ಮರೆಗುಳಿತನ
ಮೈದಾನದಲ್ಲಿ ಉಲ್ಲಾಸಭರಿತ ವರ್ತನೆಗಳಿಗೆ ಹೆಸರುವಾಸಿಯಾದ ಇನ್ನೊಬ್ಬ ಆಟಗಾರ ನಾಯಕ ರೋಹಿತ್ ಶರ್ಮಾ. ಅವರ ಮರೆಗುಳಿತನದ ಸ್ವಭಾವ ಇನ್ನಷ್ಟು ಗಮನ ಸೆಳೆಯುವ ವಿಚಾರ. ರೋಹಿತ್ ತಮಾಷೆಯಲ್ಲಿ ಎಷ್ಟೊ ಬಾರಿ ಕೊಹ್ಲಿಯೂ ಭಾಗಿಯಾಗಿದ್ದನ್ನು ನಾವು ನೋಡಿದ್ದೇವೆ. ಇದೀಗ ವಿರಾಟ್ ಕೊಹ್ಲಿಯ ಸಂಭ್ರಮಾಚರಣೆಯ ಶೈಲಿಯನ್ನು ರೋಹಿತ್ ಶರ್ಮಾ ಅನುಕರಿಸಿರುವ ವಿಡಿಯೊವೊಂದು ವೈರಲ್ ಆಗಿದೆ.
ಜಿಯೋ ಸಿನೆಮಾದ ರೆಡ್ ಕಾರ್ಪೆಟ್ ಶೋನಲ್ಲಿ ನಡೆದ ಬಿಸಿಸಿಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ತಂಡವು ವಿಕೆಟ್ ಪಡೆದ ನಂತರ ವಿರಾಟ್ ಕೊಹ್ಲಿಯ ಸಂಭ್ರಮವನ್ನು ಅನುಕರಿಸುವಂತೆ ಭಾರತೀಯ ನಾಯಕನನ್ನು ಕೇಳಲಾಯಿತು. ಅದಕ್ಕವರು ಕೊಹ್ಲಿ ಕಿರುಚುವ ರೀತಿಯಲ್ಲಿ ಮಾಡಿ ತೋರಿಸಿದರು. ಕೆಲವರು ಇದನ್ನು ಕೊಹ್ಲಿಗೆ ತಮಾಷೆ ಮಾಡುತ್ತಾರೆ ಎಂದ ಅಂದುಕೊಂಡರು.
ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಮಿಮಿಕ್ರಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಗಮನ ಸೆಳೆದಿದೆ. ವೀಡಿಯೊದಲ್ಲಿ, ರೋಹಿತ್ ಶರ್ಮಾ ಎದುರಾಳಿಯ ವಿಕೆಟ್ ಅನ್ನು ಸಂಭ್ರಮಿಸುವಾಗ ವಿರಾಟ್ ಕೊಹ್ಲಿಯ ಕಿರುಚುತ್ತಿರುವ ರೀತಿಯನ್ನು ಅಭಿನಯಿಸಿದ್ದಾರೆ.
ಎಲ್ಲರಿಗೂ ಒಂದೇ ಪ್ರಶ್ನೆ
ಭಾರತದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಮತ್ತು ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೂ ವಿರಾಟ್ ಅವರ ಆಚರಣೆಯನ್ನು ಅನುಕರಿಸುವಂತೆ ಕೇಳಿಕೊಂಡರು. ರೋಹಿತ್ ಶರ್ಮಾ ಅವರ ಪುಲ್ ಶಾಟ್, ಸೂರ್ಯಕುಮಾರ್ ಯಾದವ್ ಅವರ ಸುಪ್ಲಾ ಶಾಟ್, ಎಂಎಸ್ ಧೋನಿ ಅವರ ಹೆಲಿಕಾಪ್ಟರ್ ಶಾಟ್, ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಆಕ್ಷನ್, ಶುಭ್ಮನ್ ಗಿಲ್ ಅವರ ಬೌ-ಡೌನ್ ಸಿಗ್ನಲ್ ಮತ್ತು ಕೆಎಲ್ ರಾಹುಲ್ ಅವರ ‘ ಶಟ್ ದಿ ನಾಯ್ಸ್’ ಶತಕ ಸಂಭ್ರಮಾಚರಣೆಯನ್ನು ಮಾಡಲಾಯಿತು.
ಇದನ್ನೂ ಓದಿ : Ravindra Jadeja : ಜಡೇಜಾ ಔಟ್ ಅಲ್ಲ; ಅಂಪೈರ್ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು!
ಹೈದರಾಬಾದ್ನಲ್ಲಿ ಮಂಗಳವಾರ (ಜನವರಿ 23) ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿರಾಟ್ ಕೊಹ್ಲಿ ಭಾಗವಹಿಸಲಿಲ್ಲ. ಸಮಾರಂಭಕ್ಕೆ ಒಂದು ದಿನ ಮೊದಲು, ವೈಯಕ್ತಿಕ ಕಾರಣಗಳಿಂದಾಗಿ ಮನೆಗೆ ಹೋಗಿದ್ದರು. ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಘೋಷಿಸಲಾಗಿದೆ.
ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿದ್ದಾರೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ಬಹಿರಂಗಪಡಿಸಿದೆ. ಬಿಸಿಸಿಐ ಸ್ಟಾರ್ ಭಾರತೀಯ ಬ್ಯಾಟರ್ಗೆ ತಮ್ಮ ಬೆಂಬಲವನ್ನು ನೀಡಿದೆ. ಆದರೆ ಅಭಿಮಾನಿಗಳು ಮತ್ತು ಮಾಧ್ಯಮಗಳನ್ನು ಅವರ ಗೌಪ್ಯತೆಯನ್ನು ಗೌರವಿಸುವಂತೆ ಮತ್ತು ಅವರ ಅನುಪಸ್ಥಿತಿಯ ಹಿಂದಿನ ಕಾರಣಗಳ ಬಗ್ಗೆ ಊಹಾಪೋಹಗಳನ್ನು ಮಾಡದಂತೆ ಮನವಿ ಮಾಡಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ 190 ರನ್ಗಳ ಮುನ್ನಡೆ ಸಾಧಿಸಿದೆ.