ರಾಂಚಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ (Ind vs Eng) ಭಾರತ ತಂಡ ಗೆಲುವಿನ ಸನಿಹದಲ್ಲಿದೆ. 192 ರನ್ಗಳ ಗುರಿ ಪಡೆದು ಮೂರನೇ ದಿನದಂತ್ಯಕ್ಕೆ 8 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ಅದಕ್ಕಿಂತ ಮೊದಲು ಮೂರನೇ ದಿನದಲ್ಲಿ ಇಂಗ್ಲೆಂಡ್ ತಂಡ ಭಾರತದ ಸ್ಪಿನ್ನರ್ಗಳಾದ ಆರ್. ಅಶ್ವಿನ್ (51 ರನ್ಗೆ 5 ವಿಕೆಟ್) ಹಾಗೂ ಕುಲ್ದೀಪ್ ಯಾದವ್ (22 ರನ್ಗೆ 4 ವಿಕೆಟ್) ಅವರ ಸ್ಪಿನ್ ದಾಳಿಗೆ ಬೆಚ್ಚಿ 2ನೇ ಇನ್ನಿಂಗ್ಸ್ನಲ್ಲಿ 145 ರನ್ಗಳಿಗೆ ಕುಸಿತ ಕಂಡಿತು. ರೋಹಿತ್ ಶರ್ಮಾ 24 (Rohit Sharma) ರನ್ ಬಾರಿಸಿ ಕ್ರೀಸ್ನಲ್ಲಿದ್ದಾರೆ.
ಪಂದ್ಯದಲ್ಲಿ ಭಾರತ ತಂಡದ ಅತ್ಯುತ್ತಮ ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನ ನೀಡಿತು. ಏತನ್ಮಧ್ಯೆ ನಾಯಕ ರೋಹಿತ್ ಶರ್ಮಾ (Rohit Sharma) ಫೀಲ್ಡಿಂಗ್ನಲ್ಲಿದ್ದ ಸರ್ಫರಾಜ್ ಖಾನ್ ವಿರುದ್ದ ಕೋಪಗೊಂಡ ಪ್ರಸಂಗ ನಡೆಯಿತು. ದೊಡ್ಡ ಹೀರೋ ಆಗಬೇಡ, ಹೆಲ್ಮೆಟ್ ಹಾಕಿಕೊಂಡು ಫೀಲ್ಡಿಂಗ್ ಮಾಡು ಎಂದು ಬೈದ ಘಟನೆ ನಡೆಯಿತು. ಸರ್ಫರಾಜ್ ಅವರೊಂದಿಗಿನ ರೋಹಿತ್ ಸಂಭಾಷಣೆ ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ.
🔊 Hear this! Rohit does not want Sarfaraz to be a hero?🤔#INDvsENG #IDFCFirstBankTestSeries #BazBowled #JioCinemaSports pic.twitter.com/ZtIsnEZM67
— JioCinema (@JioCinema) February 25, 2024
ಸರ್ಫರಾಜ್ ಖಾನ್ಗೆ ರೋಹಿತ್ ಶರ್ಮಾ ಹೇಳಿದ್ದನ್ನು ವೀಕ್ಷಕ ವಿವರಣೆಗಾರ ದಿನೇಶ್ ಕಾರ್ತಿಕ್ ವಿವರಿಸಿದರು. ಅವರ ಪ್ರಕಾರ, ‘ಏ ಭಾಯ್ ಹೀರೋ ನಹೀ ಬನ್ನೆ ಕಾ, ನಿನ್ನ ಹೆಲ್ಮೆಟ್ ಗಾಗಿ ಕಾಯಿ’ ಎಂದು ರೋಹಿತ್ ಹೇಳಿದ್ದರು ಇದರರ್ಥ, ‘ಹೀರೋ ಆಗುವ ಅಗತ್ಯವಿಲ್ಲ ಮತ್ತು ನಿಮ್ಮ ಹೆಲ್ಮೆಟ್ ಗಾಗಿ ಕಾದು ಫೀಲ್ಡಿಂಗ್ ಮಾಡು ಎಂಬುದು.
ಮೂರನೇ ದಿನ ಆರಂಭದಲ್ಲಿ ಭಾರತ ತಂಡದ 307 ರನ್ಗಳಿಗೆ ಆಲ್ಔಟ್ ಆಯಿತು. ಈ ಮೂಲಕ 46 ರನ್ಗಳ ಹಿನ್ನಡೆಗೆ ಒಳಗಾಯಿತು. ಆದರೆ, ಎಡನೇ ಇನಿಂಗ್ಸ್ ಬೌಲಿಂಗ್ನಲ್ಲಿ ಭಾರತ ತಂಡ ಚಮತ್ಕಾರ ಮಾಡಿತು. ಎರಡನೇ ದಿನ ಏಳು ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿದ್ದ ಭಾರತಕ್ಕೆ ಮೂರನೇ ದಿನ ವಿಕೆಟ್ಕೀಪರ್ ಬ್ಯಾಟರ್ ಧ್ರುವ್ ಜುರೆಲ್ (90) ಆಸರೆಯಾದರು. ಎರಡನೇ ದ್ವಿತೀಯ ದಿನದಂದು 30 ರನ್ ಗಳಿಸಿದ್ದ ಜುರೆಲ್ ಅದಕ್ಕೆ 60 ರನ್ ಸೇರಿಸಿದರು. ಆದರೆ ಚೊಚ್ಚಲ ಶತಕದ ಅವಕಾಶದಿಂದ ವಂಚಿತರಾದು. ಆದಾಗ್ಯೂ ಅವರು ಬೃಹತ್ ಅಂತರದ ಹಿನ್ನಡೆ ತಗ್ಗಿಸಿ ರೋಹಿತ್ ಪಡೆಯನ್ನು ಕಾಪಾಡಿದರು. 149 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 90 ರನ್ ಗಳಿಸಿ ಔಟಾದರು. ಜತೆಗೆ ತಂಡವನ್ನು 300ರ ಗಡಿ ದಾಟಿಸಿದರು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 353 ರನ್ ಗಳಿಸಿತ್ತು. ಅಂತೆಯೇ 46 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ ದೊಡ್ಡ ಮೊತ್ತ ಗಳಿಸುವ ನೀಡುವ ವಿಶ್ವಾಸ ಹೊಂದಿತ್ತು. ಆದರೆ ಅಶ್ವಿನ್, ಕುಲ್ದೀಪ್ ಯಾದವ್ ದಾಳಿಗೆ 145 ರನ್ಗಳಿಗೆ ಆಲೌಟ್ ಆಯಿತು.
ಅಶ್ವಿನ್ ಮತ್ತು ಕುಲ್ದೀಪ್ ಸ್ಪಿನ್ ಮ್ಯಾಜಿಕ್
ಎರಡನೇ ಇನ್ನಿಂಗ್ಸ್ನಲ್ಲಿ ಬೃಹತ್ ರನ್ ಪೇರಿಸುವ ನಿರೀಕ್ಷೆ ಮತ್ತು ಕನಸಿನಲ್ಲಿದ್ದ ಇಂಗ್ಲೆಂಡ್ಗೆ ಆರ್ ಅಶ್ವಿನ್ ಮತ್ತು ಕುಲ್ದೀಪ್ ಯಾದವ್ ಮಾರಕವಾಗಿ ಪರಿಣಮಿಸಿದರು. ಅಶ್ವಿನ್ 5 ವಿಕೆಟ್ ಪಡೆದರೆ, ಬ್ಯಾಟಿಂಗ್ನಲ್ಲಿ 28 ರನ್ಗಳ ಕಾಣಿಕೆ ನೀಡಿದ್ದ ಕುಲ್ದೀಪ್ ಬೌಲಿಂಗ್ನಲ್ಲಿ 4 ವಿಕೆಟ್ ಕಿತ್ತು ಗಮನ ಸೆಳೆದರು. ಇದರ ನಡುವೆಯೂ ಜಾಕ್ ಕ್ರಾವ್ಲಿ 60 ರನ್ ಸಿಡಿಸಿದರು.
ಇದನ್ನೂ ಓದಿ : R Ashwin : ಕ್ರಿಕೆಟ್ ದಂತಕತೆಗಳ ಎಲೈಟ್ ಪಟ್ಟಿ ಸೇರಿದ ಆರ್ ಅಶ್ವಿನ್; ಏನಿದು ಸಾಧನೆ?
ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 28 ರನ್ಗಳಿಂದ ಗೆಲುವು ಸಾಧಿಸಿದ್ದ ಇಂಗ್ಲೆಂಡ್, ತದ ನಂತರ ವಿಶಾಖಪಟ್ಟಣಂ ಮತ್ತು ರಾಜ್ಕೋಟ್ನಲ್ಲಿ ಭಾರತದ ಎದುರಿಗೆ ಶರಣಾದವು. ಕ್ರಮವಾಗಿ 106 ಮತ್ತು 434 ರನ್ಗಳ ಅಂತರದಿಂದ ಸೋಲು ಅನುಭವಿಸಿತು. ಇದೀಗ 4ನೇ ಪಂದ್ಯದಲ್ಲೂ ಸೋಲಿನ ಅಂಚಿನಲ್ಲಿದೆ. ಈ ಟೆಸ್ಟ್ನಲ್ಲಿ ಪರಾಭವಗೊಂಡರೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಇಂಗ್ಲೆಂಡ್ ಕೈಚೆಲ್ಲಲಿದೆ.