Site icon Vistara News

Rohit Sharma Holi Celebration: ಹೋಳಿ ಆಡಿ ಸಂಭ್ರಮಿಸಿದ ರೋಹಿತ್​ ಶರ್ಮ; ವಿಡಿಯೊ ವೈರಲ್

Rohit Sharma: celebrated the festival of Holi

ಮುಂಬಯಿ: ಮುಂಬೈ ಇಂಡಿಯನ್ಸ್​ ತಂಡದ ಮಾಜಿ ನಾಯಕ ರೋಹಿತ್​ ಶರ್ಮ(Rohit Sharma Holi Celebration) ಅವರು ಪತ್ನಿ ರಿತಿಕಾ ಮತ್ತು ಮಗಳು ಸಮೈರಾ(Ritika Sajdeh) ಜತೆ ಹೋಳಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ಹೋಳಿ ಆಚರಣೆಯ ವಿಡಿಯೋವನ್ನು ರೋಹಿತ್​ ಶರ್ಮ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ(MI’s Holi Celebration) ಕೂಡ ಈ ವಿಡಿಯೊವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದೆ.


ರೋಹಿತ್​ ಶರ್ಮ ಅವರು ಸಹ ಆಟಗಾರರೊಂದಿಗೆ ಮಕ್ಕಳಂತೆ ಹೋಳಿ ಆಡಿ ಕುಣಿದು ಕುಪ್ಪಳಿಸಿದ್ದಾರೆ. ರೋಹಿತ್​ ಅವರನ್ನು ನೋಡುವಾಗ ಸಂಪೂರ್ಣವಾಗಿ ಒತ್ತಡರಹಿತವಾಗಿರುವಂತೆ ಕಂಡುಬಂದಿದೆ. ಗುಜರಾತ್​ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಮುಂಬೈ ಸೋಲು ಕಂಡರೂ ಕೂಡ ರೋಹಿತ್​ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. 43 ರನ್​ ಬಾರಿಸಿದ್ದರು.

ಇದನ್ನೂ ಓದಿ IPL 2024 Points Table: ಆರ್​ಸಿಬಿ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?


ರೋಹಿತ್​ ಮಾತ್ರವಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್​, ಲಕ್ನೋ ಸೂಪರ್​ ಜೈಂಟ್ಸ್​, ಕೆಕೆಆರ್​ ಸೇರಿ ಇನ್ನೂ ಕೆಲ ಫ್ರಾಂಚೈಸಿಗಳ ಆಟಗಾರರು ಕೂಡ ಹೋಳಿ ಬಣ್ಣ ಹಾಕಿ ಸಂಭ್ರಮಿಸಿದ್ದಾರೆ. ಆಟಗಾರರು ಹೋಳಿ ಆಡಿರುವ ವಿಡಿಯೊ ಮತ್ತು ಫೋಟೊಗಳನ್ನು ಆಯಾಯ ಫ್ರಾಂಚೈಸಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಉತ್ತರ ಭಾರತದ ಹಲವು ಕಡೆ ಐದು ದಿನಗಳ ಕಾಲ ಸಂಭ್ರಮ ದಿಂದ ಆಚರಿಸುವ ಹಬ್ಬವಿದು. ಕೆಟ್ಟದ್ದೆಲ್ಲ ಸುಟ್ಟು ಒಳಿತಷ್ಟೇ ಉಳಿಯುವಂತಾಗಲಿ, ನಮ್ಮೊಳಗೂ ಇರುವಂಥ ವಿಕಾರಗಳನ್ನೆಲ್ಲ ಸುಟ್ಟು, ಬದುಕಿಗೆ ಹೊಸದಾಗಿ ರಂಗು ತುಂಬಿಸಿಕೊಳ್ಳಬೇಕು ಎನ್ನುವುದು ಈ ಹಬ್ಬದ ಸಂದೇಶವಾಗಿದೆ. ಜಾತಿ, ಮತ, ಧರ್ಮದ ಕಟ್ಟುಪಾಡುಗಳಿಲ್ಲದೆ ಪ್ರತಿಯೊಬ್ಬರೂ ಮನಸಾರೆ ಸ್ವಇಚ್ಛೆಯಿಂದ ಪರಸ್ಪರ ಬಣ್ಣ ಎರಚಿ ಉಲ್ಲಾಸ ಪಡುತ್ತಾರೆ. ಐಪಿಎಲ್​ ಭಾರತದಲ್ಲಿರುವ ವಿದೇಶಿ ಆಟಗಾರರು ಕೂಡ ಪ್ರತಿ ವರ್ಷ ತಮ್ಮ ತಂಡದ ಸಹ ಆಟಗಾರರೊಂದಿಗೆ ಹೋಳಿ ಆಡಿ ಸಂಭ್ರಮಿಸುತ್ತಾರೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ 6 ಪಂದ್ಯಗಳು ಮುಕ್ತಾಯ ಕಂಡಿದ್ದು ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಈ ಬಾರಿ ತವರಿನ ತಂಡವೇ ಮೇಲುಗೈ ಸಾಧಿಸುತ್ತಿವೆ. ಇಂದು ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ಮುಖಾಮುಖಿಯಾಗಲಿವೆ. ಈ ಪಂದ್ಯ ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಒಂದೊಮ್ಮೆ ಗುಜರಾತ್​ ಗೆದ್ದರೆ, ತವರಿನ ಪಂದ್ಯಗಳು ಗೆಲ್ಲುತ್ತಿದ್ದ ದಾಖಲೆಯ ಕೊಂಡಿ ಕಡಿದುಕೊಳ್ಳಲಿದೆ.

Exit mobile version