ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ (Mumbai Indian’s ) ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅನಗತ್ಯ ಸಾಧನೆ ಮಾಡಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Banglore) ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರೊಂದಿಗೆ ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಸಾಲಿಗೆ ಸೇರಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (Rajstan Royals) ನಡುವೆ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಕಳಪೆ ರೆಕಾರ್ಡ್ ಮಾಡಿದ್ದಾರೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 14ನೇ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದೆ.
ರೋಹಿತ್ ಶರ್ಮಾ ಮುಂಬೈನಲ್ಲಿ ತಮ್ಮ ತವರು ಪ್ರೇಕ್ಷಕರ ಮುಂದೆ ಫಲಪ್ರದ ಪ್ರದರ್ಶನ ನೀಡಲಿಲ್ಲ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವನ್ನು ರಾಜಸ್ಥಾನ್ ರಾಯಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಲು ಕೇಳಿಕೊಂಡಿತು. ರಾಜಸ್ಥಾನ್ ರಾಯಲ್ಸ್ ವೇಗಿ ಟ್ರೆಂಟ್ ಬೌಲ್ಟ್ ತಮ್ಮ ರೋಚಕ ಸ್ವಿಂಗ್ ಬೌಲಿಂಗ್ಗೆ ಆತಿಥೇಯರ ಬ್ಯಾಟಿಂಗ್ ಲೈನ್ಅಪ್ ಕುಸಿಯಿತು.
ಮೊದಲ ಓವರ್ನಲ್ಲಿಯೇ ಔಟ್
ಟ್ರೆಂಟ್ ಬೌಲ್ಟ್ ಮೊದಲ ಓವರ್ನ 5 ನೇ ಎಸೆತದಲ್ಲಿ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು. ಹೊರಗೆ ಹೋಗುತ್ತಿದ್ದ ಚೆಂಡನ್ನು ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ಕೆಣಕಿದರು. ಸಂಜು ಸ್ಯಾಮ್ಸನ್ ಅದ್ಬುತ ಕ್ಯಾಚ್ ಹಿಡಿದು ಅವರನ್ನು ಪೆವಿಲಿಯನ್ಗೆ ಕಳುಹಿಸಿದರು.
Rohit Sharma Equals Dinesh Karthik's Duck Record 🔥 pic.twitter.com/ohsL2vDWoa
— Junaid Khan (@JunaidKhanation) April 1, 2024
ರೋಹಿತ್ ಶರ್ಮಾ ಗೋಲ್ಡರ್ ಡಕ್ ಸಾಧನೆ ಮಾಡಿದರು. ಟ್ರೆಂಟ್ ಬೌಲ್ಟ್ ಟಿ 20 ಯಲ್ಲಿ ಭಾರತೀಯ ನಾಯಕನನ್ನು ಔಟ್ ಮಾಡಿದ್ದು ಇದು ನಾಲ್ಕನೇ ಬಾರಿ. ಬಲಗೈ ಬ್ಯಾಟ್ಸ್ಮನ್ ಕಿವೀಸ್ ವೇಗದ ಬೌಲರ್ ವಿರುದ್ಧ ಸದಾ ಗೊಂದಲಕ್ಕೆ ಬೀಳುತ್ತಾರೆ. ಅವರ ವಿರುದ್ಧ ಕೇವಲ 18 ಸರಾಸರಿಯಲ್ಲಿ ಕೇವಲ 69 ರನ್ ಗಳಿಸಿದ್ದಾರೆ.
ಇದನ್ನೂ ಓದಿ : Jos Butler : ಐಪಿಎಲ್ ನಡುವೆಯೇ ಹೆಸರು ಬದಲಾಯಿಸಿಕೊಂಡ ಜೋಸ್ ಬಟ್ಲರ್
ಇದು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಇ ರೋಹಿತ್ ಶರ್ಮಾ ಅವರ 17 ನೇ ಡಕ್ ಔಟ್ ಆಗಿದೆ. ಲೀಗ್ನಲ್ಲಿ ಅತಿ ಹೆಚ್ಚು ಡಕ್ಔಟ್ ಪಟ್ಟಿಯಲ್ಲಿ ಭಾರತದ ನಾಯಕ ಅಗ್ರಸ್ಥಾನದಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಕೂಡ 17 ಡಕ್ಗಳನ್ನು ಹೊಂದಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್, ಪಿಯೂಷ್ ಚಾವ್ಲಾ, ಮನ್ದೀಪ್ ಸಿಂಗ್ ಮತ್ತು ಸುನಿಲ್ ನರೈನ್ 15 ಡಕ್ಔಟ್ ಮೂಲಕ ಈ ಪಟ್ಟಿಯಲ್ಲಿದ್ದಾರೆ.
ಐಪಿಎಲ್ನಲ್ಲಿ ಅತಿ ಹೆಚ್ಚು ಡಕ್ಔಟ್
- 17- ರೋಹಿತ್ ಶರ್ಮಾ
- 17- ದಿನೇಶ್ ಕಾರ್ತಿಕ್
- 15- ಗ್ಲೆನ್ ಮ್ಯಾಕ್ಸ್ವೆಲ್
- 15- ಪಿಯೂಷ್ ಚಾವ್ಲಾ
- 15- ಮನ್ದೀಪ್ ಸಿಂಗ್
- 15- ಸುನಿಲ್ ನರೈನ್
200 ಪಂದ್ಯಗಳ ದಾಖಲೆ ಮಾಡಿದ ಆರ್. ಅಶ್ವಿನ್
ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಐಪಿಎಲ್ 2024 ರ 14ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ. ಎರಡು ದೊಡ್ಡ ತಂಡಗಳ ನಡುವಿನ ಈ ಹೈ ಪ್ರೊಫೈಲ್ ಪಂದ್ಯದಲ್ಲಿ ಆರ್ಆರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) 200+ ಐಪಿಎಲ್ ಪಂದ್ಯಗಳನ್ನು ಆಡಿದ ಎಲೈಟ್ ಆಟಗಾರರ ಗುಂಪಿಗೆ ಸೇರಿಕೊಂಡಿದ್ದಾರೆ.
ಅನುಭವಿ ಸ್ಪಿನ್ನರ್ ಅಶ್ವಿನ್ ಸೋಮವಾರ ರಾಜಸ್ಥಾನ್ ರಾಯಲ್ಸ್ ಪರ ಆಡಿ ಐಪಿಎಲ್ನಲ್ಲಿ ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಋತುವಿನಲ್ಲಿ ಈಗಾಗಲೇ ರಾಯಲ್ಸ್ ಪರ ಎರಡೂ ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಅಶ್ವಿನ್, ಮುಂಬೈ ಇಂಡಿಯನ್ಸ್ ವಿರುದ್ಧ ಆಯ್ಕೆಯಾಗಿದ್ದಾರೆ. ವೃತ್ತಿಜೀವನದಲ್ಲಿ 200 ಐಪಿಎಲ್ ಪಂದ್ಯಗಳನ್ನು ಆಡಿದ 10 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2009ರಲ್ಲಿ ಸಿಎಸ್ಕೆ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ 37ರ ಹರೆಯದ ಅಶ್ವಿನ್ , ಲೀಗ್ನಲ್ಲಿ ಒಟ್ಟು 199 ಪಂದ್ಯಗಳಿಂದ 743 ರನ್ ಹಾಗೂ 172 ವಿಕೆಟ್ಗಳನ್ನು ಪಡೆದಿದ್ದಾರೆ.