ನವದೆಹಲಿ: ಇಂಗ್ಲೆಂಡ್ ವಿರುದ್ಧದ ರಾಜ್ಕೋಟ್ ಟೆಸ್ಟ್ನಲ್ಲಿ (IND vs ENg) ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಐತಿಹಾಸಿಕ ಶತಕದ (Test Century) ನಂತರ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಡಗ್ಔಟ್ನಲ್ಲಿ ಕುಳಿತು ಜೈಸ್ವಾಲ್ ರೀತಿಯಲ್ಲೇ ಸಂಭ್ರಮಾಚರಣೆ ಮಾಡಿದರು. ಜೈಸ್ವಾಲ್ ಅವರ ಇನ್ನಿಂಗ್ಸ್ ಅದ್ಭುತವಾಗಿತ್ತು, ಇದು ಅವರ ಮೂರನೇ ಟೆಸ್ಟ್ ಶತಕವಾಗಿದೆ.
A leap of joy to celebrate his second century of the series 🙌
— BCCI (@BCCI) February 17, 2024
Well played, Yashasvi Jaiswal 👏👏#TeamIndia | #INDvENG | @ybj_19 | @IDFCFIRSTBank pic.twitter.com/pdlPhn5e3N
ಯಶಸ್ವಿ ಜೈಸ್ವಾಲ್ ಶತಕ ಬಾರಿಸಿದ ಬಲಿಕ ಎರಡೂ ಕೈಗಳನ್ನು ಮೇಲತ್ತಿ ಬಳಿಕ ಎರಡೂ ಕೈಗಳಿಗೆ ಮುತ್ತಿಡುತ್ತಾರೆ. ಅದು ಅವರ ವಿಶೇಷ ಸಂಭ್ರಮದ ಶೈಲಿ. ಅಂತೆಯೇ ಅವರು ಈ ಬಾರಿಯೂ ಶತಕ ಬಾರಿಸಿದಾಗ ಅದೇ ರೀತಿ ಮಾಡಿದರು. ಈ ವೇಳೆ ರೋಹಿತ್ ಕೂಡ ಅದೇ ರೀತಿ ಸಂಭ್ರಮಿಸಿದರು.
ಯುವ ಆರಂಭಿಕ ಆಟಗಾರ ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿಯ ವಿರುದ್ಧ ಗಮನಾರ್ಹಪ್ರಾಬಲ್ಯ ಸಾಧಿಸಿದರು. ಕೇವಲ 122 ಎಸೆತಗಳಲ್ಲಿ ಮೂರಂಕಿ ರನ್ ತಲುಪಿದರು. ಈ ಶತಕವು ಸರಣಿಯಲ್ಲಿ ಅವರ ಎರಡನೇ ಶತಕವಾಗಿದ್ದು, ವಿಶಾಖಪಟ್ಟಣಂನಲ್ಲಿ ನಡೆದ ಹಿಂದಿನ ಟೆಸ್ಟ್ನಲ್ಲಿ ಅಸಾಧಾರಣ ದ್ವಿಶತಕ ಬಾರಿಸಿದ್ದರು.
ಆರಂಭದಲ್ಲಿ, ಜೈಸ್ವಾಲ್ ತಮ್ಮ ಇನ್ನಿಂಗ್ಸ್ ಅನ್ನು ಎಚ್ಚರಿಕೆಯಿಂದ ಆರಂಭಿಸಿದರು. ಆದರೆ ರೋಹಿತ್ ಶರ್ಮಾ ಔಟಾದ ನಂತರ ಅವರು ಕ್ರಮೇಣ ಆಟದ ಮೇಲೆ ಹಿಡಿತ ಸಾಧಿಸಿದರು. ಅನುಭವಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನು ಗುರಿಯಾಗಿಸಿಕೊಂಡು ಸತತ ಬೌಂಡರಿ ಹಾಗೂ ಸಿಕ್ಸಿರ್ ಬಾರಿಸಿ ತಮ್ಮ ಪ್ರಾಬಲ್ಯ ತೋರಿದರು.
ಜೈಸ್ವಾಲ್ ಅವರ ಶತಕವು ಟೆಸ್ಟ್ ಕ್ರಿಕೆಟ್ನ ಸಾರವನ್ನು ಪ್ರತಿಬಿಂಬಿಸಿತು. ಅವರ ಇನ್ನಿಂಗ್ಸ್ ಅವರ ಪ್ರಬುದ್ಧತೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಿತು. ಶುಬ್ಮನ್ ಗಿಲ್ ಜೊತೆಗೂಡಿ ಜೈಸ್ವಾಲ್ ಮಹತ್ವದ ಜೊತೆಯಾಟವಾಡುವ ಮೂಲಕ ಭಾರತ ಮೇಲುಗೈ ಸಾಧಿಸುವಂತೆ ಮಾಡಿದರು.
ಶತಕ ಬಳಿಕ ಜೈಸ್ವಾಲ್ ನಿವೃತ್ತಿ ಪಡೆದಿದ್ದು ಯಾಕೆ?
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಶತಕ ಬಾರಿಸಿದ ನಂತರ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಶನಿವಾರ ಪೆವಿಲಿಯನ್ ಗೆ ಮರಳಿದರು. ಇಂಗ್ಲೆಂಡ್ ಬೌಲರ್ ಅವರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ. ಆದರೂ ಜೈಸ್ವಾಲ್ ಗಾಯಗೊಂಡು ಪೆವಿಲಿಯನ್ ಗೆ ಮರಳಿದರು. ಇದು ಜೈಸ್ವಾಲ್ ಅವರ ಉತ್ತಮ ಇನಿಂಗ್ಸ್ ಬಳಿಕ ನಡೆದ ನಾಟಕೀಯ ಬೆಳವಣಿಗೆಯಾಯಿತು. ಅವರು ಬೆನ್ನು ನೋವಿನಿಂದ ಮೈದಾನ ತೊರೆಯುವಂತಾಗಿದ್ದು ತಂಡಕ್ಕೆ ಹಿನ್ನಡೆಯಾಯಿತು.
ಇದನ್ನೂ ಓದಿ : Ravindra Jadeja : ತವರು ನೆಲದಲ್ಲಿ ಹೊಸ ಮೈಲ್ಲುಗಲ್ಲು ಸ್ಥಾಪಿಸಿದ ರವೀಂದ್ರ ಜಡೇಜಾ
ಜೈಸ್ವಾಲ್ 104 ರನ್ ಗಳಿಸಿದ್ದಾಗ ಬೆನ್ನು ನೋವಿನ ಸಮಸ್ಯೆ ಉಂಟಾಯಿತು. ದಿನದಾಟದ 8 ಓವರ್ ಗಳು ಬಾಕಿ ಇರುವಾಗ ಜೈಸ್ವಾಲ್ ಬೆನ್ನುನೋವಿನ ಸಮಸ್ಯೆ ಬಗ್ಗೆ ಹೇಳಿಕೊಂಡರು. ಎಡಗೈ ಆರಂಭಿಕ ಆಟಗಾರ ಉತ್ತಮ ಫಾರ್ಮ್ನಲ್ಲಿದ್ದರು. ಫಿಸಿಯೊ ಅವರಿಗೆ ನೋವು ನಿವಾರಕಗಳನ್ನು ನೀಡಿದರು. ಆದರೆ ಅದು ಪರಿಣಾಮಕಾರಿ ಎಂದು ತೋರಲಿಲ್ಲ.. ಮುಂದಿನ ಓವರ್ ಬಳಿಕ ವಾಪಸ್ ನಡೆದರು.
ಯಶಸ್ವಿ ರಾಜ್ಕೋಟ್ ಟೆಸ್ಟ್ನಲ್ಲಿ ತಮ್ಮ ಮೂರನೇ ಶತಕದೊಂದಿಗೆ ಭಾರತಕ್ಕೆ ಎದುರಾಳಿ ವಿರುದ್ಧ ಸಂಪೂರ್ಣ ನಿಯಂತ್ರಣ ಸಿಗುವಂತೆ ಮಾಡಿದರು. ಇನ್ನು 2 ದಿನಗಳ ಆಟ ಬಾಕಿ ಉಳಿದಿದ್ದು, ಆತಿಥೇಯರು 322 ರನ್ಗಳ ಮುನ್ನಡೆ ಸಾಧಿಸಿದ್ದಾರೆ. 3ನೇ ದಿನದಾಟದಲ್ಲಿ 133 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿರುವ ಅವರು ನಾಲ್ಕನೇ ದಿನ ಅಬ್ಬರಿಸವುದು ಖಚಿತ.