ವಿಸ್ತಾರ ನ್ಯೂಸ್ ಬೆಂಗಳೂರು: ಇಂದೋರ್ನಲ್ಲಿ ಭಾನುವಾರ (ಜನವರಿ 14) ನಡೆಯಲಿರುವ ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಗೆದ್ದರೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಭಾರತ ತಂಡದ ಪರ ನೂತನ ದಾಖಲೆ ಸೃಷ್ಟಿಸಲಿದ್ದಾರೆ. ಅವರು ಈ ವೇಳೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ದಾಖಲೆ ಸರಿಗಟ್ಟಲಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ 52 ಪಂದ್ಯಗಳಲ್ಲಿ 40 ಟಿ20 ಪಂದ್ಯಗಳನ್ನು ಗೆದ್ದಿದೆ. 2007ರಲ್ಲಿ ಉದ್ಘಾಟನಾ ಐಸಿಸಿ ಟಿ20 ವಿಶ್ವಕಪ್ ಸೇರಿದಂತೆ ಧೋನಿ ನೇತೃತ್ವದಲ್ಲಿ ಭಾರತ ತಂಡ 72 ಪಂದ್ಯಗಳಲ್ಲಿ 41 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಆಫ್ಘನ್ ವಿರುದ್ಧದ ಗೆಲುವಿನ ಮೂಲಕ ರೋಹಿತ್ ಶರ್ಮಾ ಧೋನಿಯ ಸಮ ಸಾಧನೆ ಮಾಡಲಿದ್ದಾರೆ. ಕೊನೇ ಪಂದ್ಯದಲ್ಲಿ ಗೆದ್ದರೆ ಭಾರತ ತಂಡದ ಪಾಲಿಗೆ ಚುಟುಕು ಕ್ರಿಕೆಟ್ನಲ್ಲಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ವೇಳೆ ರೋಹಿತ್ ತಮ್ಮ ಸಹ ಆಟಗಾರ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದರು. ಕೊಹ್ಲಿ 50 ಟಿ20 ಪಂದ್ಯಗಳಲ್ಲಿ 30 ಗೆಲುವುಗಳನ್ನು ದಾಖಲಿಸಿದ್ದರು.
ಭಾರತದ ಎಲ್ಲ ನಾಯಕರ ಪೈಕಿ ರೋಹಿತ್ ನಾಯಕನಾಗಿ ಅತ್ಯುತ್ತಮ ಗೆಲುವು – ಸೋಲಿನ ಅನುಪಾತ ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ಪ್ರತಿ ಸೋಲಿಗೆ ಸುಮಾರು 3:5 ಪಂದ್ಯಗಳ ಗೆಲುವು ಕಂಡಿದೆ ಭಾರತ. ಅನುಭವಿ ಆರಂಭಿಕ ಆಟಗಾರನ ಅಡಿಯಲ್ಲಿ ಟೀಮ್ ಇಂಡಿಯಾ ತನ್ನ 52 ಪಂದ್ಯಗಳಲ್ಲಿ ಕೇವಲ 12 ಪಂದ್ಯಗಳಲ್ಲಿ ಮಾತ್ರ ಸೋತಿದೆ. ದುರದೃಷ್ಟವಶಾತ್ ಅವುಗಳಲ್ಲಿ ಒಂದು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲು.
ಸರಣಿಯ ಅಂತ್ಯದ ವೇಳೆಗೆ ಧೋನಿಯನ್ನು ಮೀರಿಸುವ ಅವಕಾಶ ರೋಹಿತ್ಗೆ ಇದೆ. ಜತೆಗೆ ಮುಂಬರುವ ಟಿ20 ವಿಶ್ವಕಪ್ 2024ರ ಮೂಲಕ 15 ತಿಂಗಳ ಹಿಂದೆ ಅಡಿಲೇಡ್ನಲ್ಲಿ ಆಗಿರುವ ವಿಶ್ವ ಕಪ್ ಸೆಮಿಫೈನಲ್ ಮುಖಭಂಗಕ್ಕೆ ಉತ್ತರ ಹೇಳುವ ಅವಕಾಶವಿದೆ.
ಇದನ್ನೂ ಓದಿ : KL Rahul : ಅದೃಷ್ಟಶಾಲಿ ಅಭಿಮಾನಿಯ ಮದುವೆಯಲ್ಲಿ ಸೆಲ್ಫಿ ತೆಗೆದುಕೊಂಡ ಕೆ. ಎಲ್ ರಾಹುಲ್
ಇತ್ತೀಚಿನ ಏಕದಿನ ವಿಶ್ವಕಪ್ 2023ರಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ರನ್ನರ್ ಅಪ್ ಪ್ರಶಸ್ತಿ ಗೆದ್ದಿತ್ತು. ಆದರೆ, ಚಾಂಪಿಯನ್ ಆಗುವ ಅವಕಾಶ ಕಳೆದುಕೊಂಡ ಅನುಭವಿ ಮುಂಬೈಕರ್ ಬೇಸರಕ್ಕೆ ಒಳಗಾಗಿದ್ದರು. ಇದೀಗ ಕೆರಿಬಿಯನ್ ಮತ್ತು ಯುಎಸ್ಎಯಲ್ಲಿ ಆ ಸೋಲನ್ನು ಮರೆಯುವ ಅವಕಾಶವಿದೆ. ಟಿ20 ಐ ನಾಯಕನಾಗಿ, ರೋಹಿತ್ 147.10 ರ ಅತ್ಯುತ್ತಮ ಸ್ಟ್ರೈಕ್ ರೇಟ್ನಲ್ಲಿ 1,527 ರನ್ ಗಳಿಸಿದ್ದಾರೆ. ಎರಡು ಶತಕಗಳನ್ನು ಮತ್ತು 10 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಟಾಸ್ ವೇಳೆಯೇ ಹೊಸ ಇತಿಹಾಸ ಬರೆಯಲಿದ್ದಾರೆ ಹಿಟ್ಮ್ಯಾನ್
ಇಂದೋರ್: ಅಫಘಾನಿಸ್ತಾನ ವಿರುದ್ಧ ಇಂದು ನಡೆಯುವ ದ್ವಿತೀಯ ಟಿ20(India vs Afghanistan, 2nd T20I) ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರು ವಿಶೇಷ ದಾಖಲೆ ಬರೆಯಲಿದ್ದಾರೆ. ರೋಹಿತ್ ಟಾಸ್ಗೆ ಮೈದಾನಕ್ಕಿಳಿಯುತ್ತಿದಂತೆ ಈ ದಾಖಲೆ ನಿರ್ಮಾಣವಾಗಲಿದೆ.
Rohit Sharma in T20I:
— Johns. (@CricCrazyJohns) January 14, 2024
Matches – 149
Runs – 3853
Average – 30.58
Strike Rate – 139.15
Hundreds – 4
Fifties – 29
– Hitman will become the first Men's cricketer to play 150 T20I, A legend. 🫡 pic.twitter.com/eNdAX5AWFA
ಹೌದು, ರೋಹಿತ್ ಶರ್ಮ ಅವರಿಗೆ ಇಂದಿನ ಪಂದ್ಯ 150ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ರೋಹಿತ್ ಇದುವರೆಗೆ 149 ಟಿ20 ಪಂದ್ಯಗಳನ್ನು ಆಡಿ 3853 ರನ್ಗಳನ್ನು ಬಾರಿಸಿದ್ದಾರೆ. ಅಲ್ಲದೆ 20 ವಿಕೆಟ್ ಕಿತ್ತ ಸಾಧನೆಯೂ ಅವರದ್ದಾಗಿದೆ. ರೋಹಿತ್ ಬಳಿಕ ಅತ್ಯಧಿಕ ಟಿ20 ಪಂದ್ಯ ಆಡಿದ ಮತೋರ್ವ ಆಟಗಾರನೆಂದರೆ ಐರ್ಲೆಂಡ್ನ ಪೌಲ್ ಸ್ಟೀರ್ಲಿಂಗ್. ಅವರು ಒಟ್ಟು 134 ಟಿ20 ಪಂದ್ಯಗಳನ್ನಾಡಿ 3,438 ರನ್ ಹಾಗೂ 20 ವಿಕೆಟ್ ಪಡೆದಿದ್ದಾರೆ.
ಕಳೆದ ಪಂದ್ಯದಲ್ಲಿ ರೋಹಿತ್ ಅವರು ಶುಭಮನ್ ಗಿಲ್ ಅವರ ಬೇಜವಾಬ್ದಾರಿಯಿಂದ ಶೂನ್ಯಕ್ಕೆ ರನೌಟ್ ಆಗಿದ್ದರು. ಆ ಪಂದ್ಯ ರೋಹಿತ್ 14 ತಿಂಗಳ ಬಳಿಕ ಆಡಿದ ಪಂದ್ಯವಾಗಿತ್ತು. ಉತ್ತಮ ಆಟ ಪ್ರದರ್ಶಿಸುವ ಯೋಜನೆಯಲ್ಲಿದ್ದ ಅವರಿಗೆ ಗಿಲ್ ಅಡ್ಡಗಾಲು ಹಾಕಿದ್ದರು. ಔಟಾದ ಸಿಟ್ಟಿನಲ್ಲಿ ರೋಹಿತ್ ಮೈದಾನದಲ್ಲೇ ತಮ್ಮ ಸಿಟ್ಟನ್ನು ಹೊರಹಾಕಿದ್ದರು. ಇದೀಗ ದ್ವಿತೀಯ ಪಂದ್ಯದಲ್ಲಿ ಸಿಡಿಯುವ ಸಾಧ್ಯತೆ ಇದೆ.