ಬೆಂಗಳೂರು : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಗೆಲ್ಲುವ ಗುರಿಯನ್ನು ಹೊಂದಿದ್ದಾರೆ. ಅವರು ಮತ್ತು ಅವರ ಬಳಗ ಸರಣಿ ಗೆದ್ದು ದಾಖಲೆ ಬರೆಯಲು ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಡಿಸೆಂಬರ್ 26 ರಂದು ಸೆಂಚೂರಿಯನ್ನಲ್ಲಿ ಪ್ರಾರಂಭವಾಗುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಎಲೈಟ್ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಮೀರಿಸುವ ಅವಕಾಶವೂ ಅವರಿಗೆ ಸಿಗಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಎಂಎಸ್ ಧೋನಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರುವ ಅಂಚಿನಲ್ಲಿದ್ದಾರೆ ರೋಹಿತ್ ಶರ್ಮಾ.
88 ಇನ್ನಿಂಗ್ಸ್ಗಳಲ್ಲಿ 77 ಸಿಕ್ಸರ್ಗಳನ್ನು ಬಾರಿಸಿರುವ ರೋಹಿತ್, ಎಂಎಸ್ ಧೋನಿ ಅವರನ್ನು ಹಿಂದಿಕ್ಕಲು ಕೇವಲ 2 ಸಿಕ್ಸರ್ಗಳ ಅಗತ್ಯವಿದೆ. ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ 178 ಇನ್ನಿಂಗ್ಸ್ಗಳಲ್ಲಿ 90 ಸಿಕ್ಸರ್ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರು
- ವೀರೇಂದ್ರ ಸೆಹ್ವಾಗ್ – 90 ಸಿಕ್ಸರ್ (178 ಇನ್ನಿಂಗ್ಸ್)
- ಎಂಎಸ್ ಧೋನಿ – 78 ಸಿಕ್ಸರ್ (144 ಇನ್ನಿಂಗ್ಸ್)
- ರೋಹಿತ್ ಶರ್ಮಾ – 77 ಸಿಕ್ಸರ್* (88 ಇನ್ನಿಂಗ್ಸ್)
ರೋಹಿತ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಕಳೆದ ತಿಂಗಳು ವಿಶ್ವಕಪ್ ಅಭಿಯಾನದಲ್ಲಿ ಗೇಲ್ ಅವರ 85 ಸಿಕ್ಸರ್ಗಳ ದಾಖಲೆಯನ್ನು ಅವರು ಮುರಿದರು.
ಇದನ್ನೂ ಓದಿ: Year Ender 2023 : ಕ್ರಿಕೆಟ್ ಕ್ಷೇತ್ರ ಕಂಡ ಸೋಲು- ಗೆಲುವಿನ ಅವಿಸ್ಮರಣೀಯ ಕ್ಷಣಗಳು ಇವು…
ಕುಮಾರ ಸಂಗಕ್ಕರ ವಿಶ್ವ ದಾಖಲೆಯ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ
ಕೊಹ್ಲಿ(Virat Kohli) ಅವರು ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕುಮಾರ ಸಂಗಕ್ಕರ(Kumar Sangakkara) ಅವರ ವಿಶ್ವ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಅವರು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದ ಕುಮಾರ ಸಂಗಕ್ಕರ ಅವರ ವಿಶ್ವ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದಾರೆ. ಈ ದಾಖಲೆ ಮುರಿಯಲು ಕೊಹ್ಲಿಗೆ ಬೇಕಿರುವುದು ಕೇವಲ 66 ರನ್. ಸದ್ಯ ಕೊಹ್ಲಿ ಎಲ್ಲ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರು ಬಾರಿ 2000-ಪ್ಲಸ್ ರನ್‌ಗಳನ್ನು ಬಾರಿಸಿ ಪ್ರಸ್ತುತ ಈ ದಾಖಲೆಯ ಪಟ್ಟಿಯಲ್ಲಿ ಸಂಗಕ್ಕಾರ ಅವರೊಂದಿಗೆ ಜಂಟಿಯಾಗಿದ್ದಾರೆ.
ಕೊಹ್ಲಿ 2012, 2014, 2016, 2017, 2018 ಮತ್ತು 2019 ರಲ್ಲಿ 2000 ರನ್ ಗಳಿಸಿದ್ದಾರೆ. ಸಂಗಕ್ಕರ ಅವರು 2004, 2006, 2009, 2011, 2012 ಮತ್ತು 2013 ರಲ್ಲಿ 2000 ರನ್ ಗಳಿಸಿದ್ದರು.