Site icon Vistara News

Rohit Sharma : ರೋಹಿತ್ ಶರ್ಮಾ ಪಾಲಿನ ಭಯಾನಕ ಬೌಲರ್ ಯಾರು ಗೊತ್ತೇ? ಅವರೇ ಹೇಳಿದ್ದಾರೆ ಕೇಳಿ

Dale stain

ರಾಜ್​ಕೋಟ್​: ಸೆಪ್ಟೆಂಬರ್ 27ರಂದು ರಾಜ್​ಕೋಟ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಆಡಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ಅವರಿಗೆ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಅವರೀಗ ತಂಡ ಸೇರಿಕೊಳ್ಳಲಿದ್ದಾರೆ.

ಮುಂಬೈ ಮೂಲದ ರೋಹಿತ್​ ಶರ್ಮಾ ಕ್ರಿಕೆಟ್​ ಇತಿಹಾಸದ ಸಾರ್ವಕಾಲಿಕ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ, ವಿಶೇಷವಾಗಿ ವೈಟ್-ಬಾಲ್ ಕ್ರಿಕೆಟ್​ಗಳಾದ ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಅವರು ಬಾರಿಸಿರುವ ರನ್​ಗಳೇ ಅದಕ್ಕೆ ಸಾಕ್ಷಿ. 36 ವರ್ಷದ ಮುಂಬೈಕರ್ ಏಕದಿನ ಪಂದ್ಯಗಳಲ್ಲಿ ವೇಗವಾಗಿ 10,000 ರನ್ ಗಳಿಸಿದ ಎರಡನೇ ಬ್ಯಾಟರ್​ ಮತ್ತು ಟಿ 20ಐನಲ್ಲಿ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ.

ಏಕದಿನ ಪಂದ್ಯಗಳಲ್ಲಿ ಮೂರು ದ್ವಿಶತಕಗಳು ಮತ್ತು ಟಿ 20ಐನಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ಏಕೈಕ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಕಠಿಣ ಬೌಲರ್ ಬಗ್ಗೆ ವಿವರಣೆ ನೀಡಿದ್ದಾರೆ. ಟ್ರೆಂಟ್ ಬೌಲ್ಟ್, ಮೊಹಮ್ಮದ್ ಅಮೀರ್ ಮತ್ತು ಶಾಹೀನ್ ಅಫ್ರಿದಿ ಸೇರಿದಂತೆ ಎಡಗೈ ಬೌಲರ್​ಗಳೆಂದರೆ ರೋಹಿತ್​ಗೆ ಸ್ವಲ್ಪ ಭಯ. ಆದರೆ ಅವರನ್ನು ಹೆಚ್ಚು ಭಯಭೀತರನ್ನಾಗಿ ಮಾಡಿದ್ದು ಬಲಗೈ ಬೌಲರ್​.

ದಕ್ಷಿಣ ಆಫ್ರಿಕಾದ ವೇಗಿ

ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಅವರನ್ನು ರೋಹಿತ್ ಶರ್ಮಾ ಅವರು ಎದುರಿಸಿದ ಕಠಿಣ ಬೌಲರ್ ಎಂದು ಕರೆದಿದ್ದಾರೆ. ಸ್ಟೇನ್ ಅವರ ಶಿಸ್ತು, ಕೆಲಸದ ನೀತಿ ಮತ್ತು ಹೊಸ ಚೆಂಡಿನೊಂದಿಗಿನ ಅವರ ಸಾಮರ್ಥ್ಯವನ್ನು ಎದುರಿಸುವುದು ಸವಾಲಿನ ಕೆಲಸ ಎಂದು ರೋಹಿತ್ ಬಣ್ಣಿಸಿದ್ದಾರೆ. ಆದರೂ ಅವರ ವಿರುದ್ಧ ಆಡಲು ಅವರು ಯಾವಾಗಲೂ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

“ಡೇಲ್ ಸ್ಟೇನ್ ನನ್ನ ಪಾಲಿಗೆ ಎದುರಿಸಲು ಅತ್ಯಂತ ಕಠಣ ಬೌಲರ್​. ಅವರ ಕೆಲಸದ ನೀತಿ, ಶಿಸ್ತು ಮತ್ತು ಹೊಸ ಚೆಂಡಿನೊಂದಿಗಿನ ಅವರ ಸಾಮರ್ಥ್ಯವು ಯಾವಾಗಲೂ ಸವಾಲುಗಳಾಗಿದ್ದವು, ಮತ್ತು ನಾನು ಅವರ ವಿರುದ್ಧ ಆಡಲು ಇಷ್ಟಪಡುತ್ತೇನೆ”ಎಂದು ರೋಹಿತ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ ವ: Rohit Sharma : ಏರ್​ಪೋರ್ಟ್​ಗೆ ಹೊರಡುವಾಗ ಪಾಸ್​​​ಪೋರ್ಟ್​​ ಮರೆತು ಬಂದ ರೋಹಿತ್​! ಎಲ್ಲರಿಗೂ ಪೀಕಲಾಟ

ರೋಹಿತ್​ ಶರ್ಮಾ ವಿಶ್ವಕಪ್ 2023 ರಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ, ಭಾರತದಲ್ಲಿ ತಮ್ಮ ನೆಚ್ಚಿನ ಮೈದಾನವನ್ನು ಆಯ್ಕೆ ಮಾಡಲು ಕೇಳಿದಾಗ ತಮ್ಮ ತವರು ಮೈದಾನ ವಾಂಖೆಡೆ ಅಲ್ಲ ಎಂದು ಹೇಳಿದರು. ಬದಲಾಗಿ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್​ ಅತ್ಯುತ್ತಮ ಕ್ರಿಕೆಟ್​ ಸ್ಟೇಡಿಯಮ್ ಎಂದು ಹೇಳಿದರು.

ನಾನು ಈಡನ್ ಗಾರ್ಡನ್ಸ್ನಲ್ಲಿ (ಟೆಸ್ಟ್ ಕ್ರಿಕೆಟ್​​ಗೆ) ಭಾರತಕ್ಕೆ ಪಾದಾರ್ಪಣೆ ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ಧ 177 ರನ್ ಗಳಿಸಿದೆ, ನಂತರ ಅತಿ ಹೆಚ್ಚು ಏಕದಿನ ಸ್ಕೋರ್ 264. ಅದೂ ಕೋಲ್ಕೊತಾದಲ್ಲಿ. ನನ್ನ ಐಪಿಎಲ್ ಶತಕವೂ ಅಲ್ಲಿತ್ತು. ನಾನು ಅಲ್ಲಿ ರಣಜಿ ಟ್ರೋಫಿ 200ರನ್ ಗಳಿಸಿದ್ದೇನೆ. ಸ್ಕೋರ್​ಗಳನ್ನು ಮೀರಿ, ಐಪಿಎಲ್ ನಾಯಕನಾಗಿ ನನ್ನ ಮೊದಲ ಟ್ರೋಫಿ ಅಲ್ಲಿಯೇ ಬಂದಿತು. ಮತ್ತೊಂದು ಪ್ರಶಸ್ತಿಯೂ ಅಲ್ಲಿಯೂ ಬಂದಿತು. ಹೀಗಾಗಿ ಆ ಕ್ರೀಡಾಂಗಣವನ್ನು ಪ್ರೀತಿಸುತ್ತೇನೆ ಎಂದು ಅವರು ಹೇಳಿದರು.

Exit mobile version