Rohit Sharma : ರೋಹಿತ್ ಶರ್ಮಾ ಪಾಲಿನ ಭಯಾನಕ ಬೌಲರ್ ಯಾರು ಗೊತ್ತೇ? ಅವರೇ ಹೇಳಿದ್ದಾರೆ ಕೇಳಿ Vistara News

ಕ್ರಿಕೆಟ್

Rohit Sharma : ರೋಹಿತ್ ಶರ್ಮಾ ಪಾಲಿನ ಭಯಾನಕ ಬೌಲರ್ ಯಾರು ಗೊತ್ತೇ? ಅವರೇ ಹೇಳಿದ್ದಾರೆ ಕೇಳಿ

VISTARANEWS.COM


on

Dale stain
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜ್​ಕೋಟ್​: ಸೆಪ್ಟೆಂಬರ್ 27ರಂದು ರಾಜ್​ಕೋಟ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಆಡಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ಅವರಿಗೆ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಅವರೀಗ ತಂಡ ಸೇರಿಕೊಳ್ಳಲಿದ್ದಾರೆ.

ಮುಂಬೈ ಮೂಲದ ರೋಹಿತ್​ ಶರ್ಮಾ ಕ್ರಿಕೆಟ್​ ಇತಿಹಾಸದ ಸಾರ್ವಕಾಲಿಕ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ, ವಿಶೇಷವಾಗಿ ವೈಟ್-ಬಾಲ್ ಕ್ರಿಕೆಟ್​ಗಳಾದ ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಅವರು ಬಾರಿಸಿರುವ ರನ್​ಗಳೇ ಅದಕ್ಕೆ ಸಾಕ್ಷಿ. 36 ವರ್ಷದ ಮುಂಬೈಕರ್ ಏಕದಿನ ಪಂದ್ಯಗಳಲ್ಲಿ ವೇಗವಾಗಿ 10,000 ರನ್ ಗಳಿಸಿದ ಎರಡನೇ ಬ್ಯಾಟರ್​ ಮತ್ತು ಟಿ 20ಐನಲ್ಲಿ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ.

ಏಕದಿನ ಪಂದ್ಯಗಳಲ್ಲಿ ಮೂರು ದ್ವಿಶತಕಗಳು ಮತ್ತು ಟಿ 20ಐನಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ಏಕೈಕ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಕಠಿಣ ಬೌಲರ್ ಬಗ್ಗೆ ವಿವರಣೆ ನೀಡಿದ್ದಾರೆ. ಟ್ರೆಂಟ್ ಬೌಲ್ಟ್, ಮೊಹಮ್ಮದ್ ಅಮೀರ್ ಮತ್ತು ಶಾಹೀನ್ ಅಫ್ರಿದಿ ಸೇರಿದಂತೆ ಎಡಗೈ ಬೌಲರ್​ಗಳೆಂದರೆ ರೋಹಿತ್​ಗೆ ಸ್ವಲ್ಪ ಭಯ. ಆದರೆ ಅವರನ್ನು ಹೆಚ್ಚು ಭಯಭೀತರನ್ನಾಗಿ ಮಾಡಿದ್ದು ಬಲಗೈ ಬೌಲರ್​.

ದಕ್ಷಿಣ ಆಫ್ರಿಕಾದ ವೇಗಿ

ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಅವರನ್ನು ರೋಹಿತ್ ಶರ್ಮಾ ಅವರು ಎದುರಿಸಿದ ಕಠಿಣ ಬೌಲರ್ ಎಂದು ಕರೆದಿದ್ದಾರೆ. ಸ್ಟೇನ್ ಅವರ ಶಿಸ್ತು, ಕೆಲಸದ ನೀತಿ ಮತ್ತು ಹೊಸ ಚೆಂಡಿನೊಂದಿಗಿನ ಅವರ ಸಾಮರ್ಥ್ಯವನ್ನು ಎದುರಿಸುವುದು ಸವಾಲಿನ ಕೆಲಸ ಎಂದು ರೋಹಿತ್ ಬಣ್ಣಿಸಿದ್ದಾರೆ. ಆದರೂ ಅವರ ವಿರುದ್ಧ ಆಡಲು ಅವರು ಯಾವಾಗಲೂ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

“ಡೇಲ್ ಸ್ಟೇನ್ ನನ್ನ ಪಾಲಿಗೆ ಎದುರಿಸಲು ಅತ್ಯಂತ ಕಠಣ ಬೌಲರ್​. ಅವರ ಕೆಲಸದ ನೀತಿ, ಶಿಸ್ತು ಮತ್ತು ಹೊಸ ಚೆಂಡಿನೊಂದಿಗಿನ ಅವರ ಸಾಮರ್ಥ್ಯವು ಯಾವಾಗಲೂ ಸವಾಲುಗಳಾಗಿದ್ದವು, ಮತ್ತು ನಾನು ಅವರ ವಿರುದ್ಧ ಆಡಲು ಇಷ್ಟಪಡುತ್ತೇನೆ”ಎಂದು ರೋಹಿತ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ ವ: Rohit Sharma : ಏರ್​ಪೋರ್ಟ್​ಗೆ ಹೊರಡುವಾಗ ಪಾಸ್​​​ಪೋರ್ಟ್​​ ಮರೆತು ಬಂದ ರೋಹಿತ್​! ಎಲ್ಲರಿಗೂ ಪೀಕಲಾಟ

ರೋಹಿತ್​ ಶರ್ಮಾ ವಿಶ್ವಕಪ್ 2023 ರಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ, ಭಾರತದಲ್ಲಿ ತಮ್ಮ ನೆಚ್ಚಿನ ಮೈದಾನವನ್ನು ಆಯ್ಕೆ ಮಾಡಲು ಕೇಳಿದಾಗ ತಮ್ಮ ತವರು ಮೈದಾನ ವಾಂಖೆಡೆ ಅಲ್ಲ ಎಂದು ಹೇಳಿದರು. ಬದಲಾಗಿ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್​ ಅತ್ಯುತ್ತಮ ಕ್ರಿಕೆಟ್​ ಸ್ಟೇಡಿಯಮ್ ಎಂದು ಹೇಳಿದರು.

ನಾನು ಈಡನ್ ಗಾರ್ಡನ್ಸ್ನಲ್ಲಿ (ಟೆಸ್ಟ್ ಕ್ರಿಕೆಟ್​​ಗೆ) ಭಾರತಕ್ಕೆ ಪಾದಾರ್ಪಣೆ ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ಧ 177 ರನ್ ಗಳಿಸಿದೆ, ನಂತರ ಅತಿ ಹೆಚ್ಚು ಏಕದಿನ ಸ್ಕೋರ್ 264. ಅದೂ ಕೋಲ್ಕೊತಾದಲ್ಲಿ. ನನ್ನ ಐಪಿಎಲ್ ಶತಕವೂ ಅಲ್ಲಿತ್ತು. ನಾನು ಅಲ್ಲಿ ರಣಜಿ ಟ್ರೋಫಿ 200ರನ್ ಗಳಿಸಿದ್ದೇನೆ. ಸ್ಕೋರ್​ಗಳನ್ನು ಮೀರಿ, ಐಪಿಎಲ್ ನಾಯಕನಾಗಿ ನನ್ನ ಮೊದಲ ಟ್ರೋಫಿ ಅಲ್ಲಿಯೇ ಬಂದಿತು. ಮತ್ತೊಂದು ಪ್ರಶಸ್ತಿಯೂ ಅಲ್ಲಿಯೂ ಬಂದಿತು. ಹೀಗಾಗಿ ಆ ಕ್ರೀಡಾಂಗಣವನ್ನು ಪ್ರೀತಿಸುತ್ತೇನೆ ಎಂದು ಅವರು ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

David Warner: ಮೋಸಗಾರನಿಗೆ ವಿದಾಯ ಪಂದ್ಯದ ಅಗತ್ಯವಿಲ್ಲ; ಮಿಚೆಲ್​ ಜಾನ್ಸನ್

ಮೋಸದಾಟದಲ್ಲಿ ಭಾಗಿಯಾಗಿದ್ದ ವಾರ್ನರ್‌ ಅವರಿಗೆ ವಿದಾಯ ಪಂದ್ಯವೊಂದನ್ನು ಆಯೋಜಿಸುವುದು ಎಷ್ಟು ಸರಿ ಎಂದು ಮಿಚೆಲ್​ ಜಾನ್ಸನ್ ಪ್ರಶ್ನೆ ಮಾಡಿದ್ದಾರೆ.

VISTARANEWS.COM


on

David Warner
Koo

ಸಿಡ್ನಿ: ಪ್ರವಾಸಿ ಪಾಕಿಸ್ತಾನ ವಿರುದ್ಧದ ಟೆಸ್ಟ್​ ಸರಣಿಯ ಬಳಿಕ ಆಸ್ಟ್ರೇಲಿಯಾದ ಹಿರಿಯ ಆಟಗಾರ ಡೇವಿಡ್​ ವಾರ್ನರ್(David Warner)​ ಅವರು ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳುವುದು ಬಹುತೇಕ ಖಚಿತವಾಗಿದೆ. ಇದೇ ಕಾರಣಕ್ಕೆ ವಾರ್ನರ್​ ಅವರನ್ನು ಮೊದಲ ಟೆಸ್ಟ್​ ಪಂದ್ಯಕ್ಕೇ ಮಾತ್ರ ಆಯ್ಕೆ ಮಾಡಲಾಗಿದೆ. ಈ ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ.

2023ರಲ್ಲಿಯೇ ವಾರ್ನರ್​ ಅವರು ಮುಂದಿನ ವರ್ಷ ತವರಿನಲ್ಲಿ ಕೊನೆಯ ಟೆಸ್ಟ್‌ ಆಡಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಪಾಕ್​ ವಿರುದ್ಧ ನಡೆಯುವ ಮೊದಲ ಟೆಸ್ಟ್​ ಪಂದ್ಯ ಅವರಿಗೆ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ. ವಾರ್ನರ್​ ಅವರಿಗೆ ವಿದಾಯ ಪಂದ್ಯವನ್ನು ಏರ್ಪಡಿಸಲಾಗಿದೆ ಎನ್ನುವ ಸುದ್ದಿ ಹೊರಬಿದ್ದದ್ದೇ ತಡ ತನ್ನದೇ ದೇಶದ ಆಟಗಾರ ಮಿಚೆಲ್​ ಜಾನ್ಸನ್​ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮೋಸದಾಟದಲ್ಲಿ ಭಾಗಿಯಾಗಿದ್ದ ವಾರ್ನರ್‌ ಅವರಿಗೆ ವಿದಾಯ ಪಂದ್ಯವೊಂದನ್ನು ಆಯೋಜಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಡೇವಿಡ್​ ವಾರ್ನರ್​ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಸ್ಯಾಂಡ್‌ಪೇಪರ್‌ ಗೇಟ್‌ ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೊಳಗಾಗಿದ್ದರು. ಇದು ಆಸ್ಟ್ರೇಲಿಯಾದ ಕ್ರಿಕೆಟ್‌ ಇತಿಹಾಸ ದಲ್ಲೇ ಅತೀ ದೊಡ್ಡ ಹಗರಣ ಎಂಬ ಕುಖ್ಯಾತಿ ಪಡೆದಿತ್ತು. ಇದೇ ಕಾರಣಕ್ಕೆ ಮಿಚೆಲ್​ ಜಾನ್ಸನ್ ಅವರು ಮೋಸಗಾರನಿಗೆ ವಿದಾಯ ಪಂದ್ಯ ಏರ್ಪಡಿಸುವುದು ಕ್ರಿಕೆಟ್​ ಆಸ್ಟ್ರೇಲಿಯಾದ ವಿಪರ್ಯಾಸ ಎಂದಿದ್ದಾರೆ.

ವಿಶ್ವಕಪ್​ನಲ್ಲಿ ಅಮೋಘ ಬ್ಯಾಟಿಂಗ್​

37 ವರ್ಷದ ಡೇವಿಡ್‌ ವಾರ್ನರ್‌ ಈ ಬಾರಿಯ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ ರನ್‌ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. 11 ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್​ ವಿರುದ್ಧ ಶತಕ ಬಾರಿಸಿದ್ದರು. ಉಳಿದಂತೆ ಎರಡು ಅರ್ಧಶತಕ ಸಹಿತ ಒಟ್ಟಾರೆ 535 ರನ್ ಬಾರಿಸಿದ್ದರು. ಆಸ್ಟ್ರೇಲಿಯಾ ಪರ ಒಟ್ಟು 29 ಏಕದಿನ ವಿಶ್ವಕಪ್‌ ಪಂದ್ಯಗಳನ್ನು ಆಡಿರುವ ವಾರ್ನರ್‌, 6 ಶತಕ ಮತ್ತು 5 ಅರ್ಧಶತಕ ಸಹಿತ 1,527 ರನ್‌ ಗಳಿಸಿದ್ದಾರೆ.

ಆಸ್ಟ್ರೇಲಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ 109 ಪಂದ್ಯಗಳನ್ನು ಆಡಿರುವ ವಾರ್ನರ್​, 199 ಇನಿಂಗ್ಸ್‌ಗಳಲ್ಲಿ 8,487 ರನ್‌ ಗಳಿಸಿದ್ದಾರೆ. ಇದರಲ್ಲಿ 3 ದ್ವಿಶತಕ, 25 ಶತಕ ಮತ್ತು 36 ಅರ್ಧಶತಗಳು ಒಳಗೊಂಡಿದೆ. ಏಕದಿನ ಮಾದರಿಯಲ್ಲಿ 161 ಪಂದ್ಯಗಳಲ್ಲಿ ಆಡಿ, 22 ಶತಕ ಹಾಗೂ 33 ಅರ್ಧಶತಕ ಸಹಿತ 6,932 ರನ್‌ ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 99 ಪಂದ್ಯ ಆಡಿ, 1 ಶತಕ ಹಾಗೂ 24 ಅರ್ಧಶತಕದ ನರೆವಿನಿಂದ 2,894 ರನ್‌ ಕಲೆಹಾಕಿದ್ದಾರೆ.

ಇದನ್ನೂ ಓದಿ David Warner: ನಿವೃತ್ತಿ ಎಂದವರಿಗೆ ತಕ್ಕ ಉತ್ತರ ನೀಡಿದ ಡೇವಿಡ್​ ವಾರ್ನರ್​

“2024 ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್​ನ ಕೊನೇ ವರ್ಷವಾಗಿದೆ. ಅಮೆರಿಕ ಹಾಗೂ ವೆಸ್ಟ್​ ಇಂಡೀಸ್ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವ ಕಪ್​ನಲ್ಲಿ ಚಾಂಪಿಯನ್​ ಆಗುವುದೇ ನನ್ನ ಕನಸು. ಆದರೆ, ನಾನು ತಂಡದಲ್ಲಿ ಉಳಿಯುವುದು ಆಯ್ಕೆ ಮಂಡಳಿಯ ನಿರ್ಧಾರದ ಮೇಲೆ ನಿಂತಿದೆ” ಎಂಬುದಾಗಿ ವಾರ್ನರ್​ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಪಾಕ್​ ಮೊದಲ ಟೆಸ್ಟ್​ಗೆ ಆಸ್ಟ್ರೇಲಿಯಾ ತಂಡ

ಪ್ಯಾಟ್‌ ಕಮಿನ್ಸ್‌ (ನಾಯಕ), ಸ್ಕಾಟ್‌ ಬೋಲ್ಯಾಂಡ್‌, ಅಲೆಕ್ಸ್‌ ಕ್ಯಾರಿ, ಕ್ಯಾಮರಾನ್‌ ಗ್ರೀನ್‌, ಜೋಶ್‌ ಹೇಝಲ್‌ವುಡ್‌, ಟ್ರ್ಯಾವಿಸ್‌ ಹೆಡ್‌, ಉಸ್ಮಾನ್‌ ಖ್ವಾಜಾ, ಮಾರ್ನಸ್‌ ಲಬುಶೇನ್‌, ನಥನ್‌ ಲಿಯಾನ್‌, ಮಿಚೆಲ್‌ ಮಾರ್ಷ್‌, ಲ್ಯಾನ್ಸ್‌ ಮಾರಿಸ್‌, ಸ್ಟೀವನ್‌ ಸ್ಮಿತ್‌, ಮಿಚೆಲ್‌ ಸ್ಟಾರ್ಕ್‌, ಡೇವಿಡ್‌ ವಾರ್ನರ್‌.

Continue Reading

ಕ್ರಿಕೆಟ್

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Virat Kohli : ವಿರಾಟ್​ ಕೊಹ್ಲಿ 2021ರ ಟಿ20 ವಿಶ್ವ ಕಪ್ ಬಳಿಕ ನಾಯಕತ್ವ ತೊರೆದ ವೇಳೆ ದೊಡ್ಡ ಮಟ್ಟಿನ ಸಂಚಲನ ಉಂಟಾಗಿತ್ತು.

VISTARANEWS.COM


on

Saurav Gangly
Koo

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ವಿರಾಟ್ ಕೊಹ್ಲಿಯನ್ನು ಭಾರತದ ನಾಯಕತ್ವದಿಂದ ತೆಗೆದುಹಾಕಲಿಲ್ಲ ಎಂದು ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ವಿಶೇಷವೆಂದರೆ 2021 ರ ಟಿ 20 ವಿಶ್ವಕಪ್​​ನಲ್ಲಿ ಭಾರತದ ಗುಂಪು ಹಂತದಲ್ಲಿಲ ನಿರ್ಗಮಿಸಿದ ಬಳಿಕ ಕೊಹ್ಲಿ ಟಿ 20 ಐ ನಾಯಕತ್ವವನ್ನು ತ್ಯಜಿಸಿದ್ದರ. ಆದರೆ ಏಕದಿನ ಮತ್ತು ಟೆಸ್ಟ್​ನಲ್ಲಿ ತಂಡವನ್ನು ಮುನ್ನಡೆಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದಾಗ್ಯೂ, ಏಕದಿನ ಪಂದ್ಯಗಳಲ್ಲಿ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು. ಈ ಪ್ರಸಂಗ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು.

2022ರ ಜನವರಿಯಲ್ಲಿ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಈ ಘಟನೆಯ ನಂತರ ಆಗಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಗಂಗೂಲಿ ಅವರು ಕೊಹ್ಲಿಯ ನಿರ್ಧಾರದಲ್ಲಿ ಅವರ ಪಾತ್ರವಿದೆ ಎಂದು ಹಲವರು ಆರೋಪಿಸಿದ್ದ ಕಾರಣ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗಳಿಗೆ ಗುರಿಯಾದ್ದರು. ನಂತರ ರೋಹಿತ್ ಶರ್ಮಾ ಅವರನ್ನು ಭಾರತದ ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕನನ್ನಾಗಿ ಮಾಡಲಾಗಿತ್ತು.

ಗಂಗೂಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, ಕೊಹ್ಲಿಯನ್ನು ಭಾರತದ ನಾಯಕ ಸ್ಥಾನದಿಂದ ಕೆಳಗಿಳಿಸಿ ರೋಹಿತ್ ಅವರನ್ನು ನೇಮಿಸಿದ ಕೀರ್ತಿ ಬಂಗಾಳದ ರಾಜಕುಮಾರನಿಗೆ ಸಲ್ಲುತ್ತದೆ ಎಂಬ ವೀಡಿಯೊವನ್ನು ಪ್ರದರ್ಶಿಸಲಾಯಿತು. ವೀಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಮಾಜಿ ನಾಯಕ, ಅದರ ಒಂದು ಭಾಗ ಮಾತ್ರ ಸರಿಯಾಗಿದೆ ಎಂದು ಹೇಳಿದರು. ಕೊಹ್ಲಿಯನ್ನು ವಜಾ ಮಾಡುವಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಕೊಹ್ಲಿ ಟಿ 20 ಐ ನಾಯಕತ್ವವನ್ನು ಮಾತ್ರ ಬಿಡಲು ಬಯಸಿದ್ದರು. ಆದರೆ, ಸೀಮಿತ ಓವರ್​ಗಳ ಮಾದರಿ ಹಾಗೂ ಟೆಸ್ಟ್​ ಮಾದರಿಗೆ ಪ್ರತ್ಯೇಕ ನಾಯಕರನ್ನು ಹೊಂದುವುದು ಹೆಚ್ಚು ಅನುಕೂಲ ಎಂದು ಕೊಹ್ಲಿಗೆ ಸಲಹೆ ಎಂದು ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

“ನಾನು ವಿರಾಟ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಿಲ್ಲ. ನಾನು ಇದನ್ನು ಸಾಕಷ್ಟು ಬಾರಿ ಹೇಳಿದ್ದೇನೆ. ಅವರು ಟಿ 20 ಪಂದ್ಯಗಳಲ್ಲಿ ನಾಯಕತ್ವ ವಹಿಸಲು ಆಸಕ್ತಿ ಹೊಂದಿರಲಿಲ್ಲ. ಆದ್ದರಿಂದ, ಅವರು ಆ ನಿರ್ಧಾರವನ್ನು ತೆಗೆದುಕೊಂಡ ನಂತರ, ಟಿ 20 ಪಂದ್ಯಗಳಲ್ಲಿ ಮುನ್ನಡೆಸಲು ಆಸಕ್ತಿ ಹೊಂದಿಲ್ಲದಿದ್ದರೆ, ಸಂಪೂರ್ಣ ವೈಟ್-ಬಾಲ್ ಕ್ರಿಕೆಟ್​ ನಾಯಕತ್ವದಿಂದ ಕೆಳಗಿಳಿಯುವುದು ಉತ್ತ ಎಂದು ನಾನು ಹೇಳಿದ್ದೆ. ವೈಟ್ ಬಾಲ್ ಕ್ರಿಕೆಟ್​ಗೆ ಮತ್ತು ಕೆಂಪು ಚೆಂಡಿನ ತಂಡಕ್ಕೆ ಪ್ರತ್ಯೇಕ ನಾಯಕ ಇರಲಿ ಎಂಬುದೇ ನನ್ನ ಆಶಯವಾಗಿತ್ತು “ಎಂದು ಗಂಗೂಲಿ ರಿಯಾಲಿಟಿ ಶೋ ದಾದಾಗಿರಿ ಅನ್ಲಿಮಿಟೆಡ್ ಸೀಸನ್ 10 ರಲ್ಲಿ ಹೇಳಿದ್ದಾರೆ.

ರೋಹಿತ್​​ಗೂ ಆಸಕ್ತಿ ಇರಲಿಲ್ಲ

ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕತ್ವ ವಹಿಸಲು ರೋಹಿತ್ ಕೂಡ ಆಸಕ್ತಿ ಹೊಂದಿರಲಿಲ್ಲ ಎಂದು 51 ವರ್ಷದ ಆಟಗಾರ ಹೇಳಿದ್ದಾರೆ. ಆದಾಗ್ಯೂ, ಮುಂಬೈ ಬ್ಯಾಟರ್​ಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದೆ ಎಂದರು. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ 2023 ರಲ್ಲಿ ಭಾರತವು ನಂಬಲಾಗದಷ್ಟು ಉತ್ತಮ ಪ್ರದರ್ಶನ ನೀಡಿತ/, ರೋಹಿತ್ ನಾಯಕತ್ವದಲ್ಲಿ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೊದಲು ಸತತ 10 ಪಂದ್ಯಗಳನ್ನು ಗೆದ್ದಿತ್ತು.

ಇದನ್ನೂ ಓದಿ : Suryakumar Yadav : ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ಸೂರ್ಯಕುಮಾರ್​

“ನಾನು ರೋಹಿತ್ ಶರ್ಮಾ ಅವರನ್ನು ನಾಯಕತ್ವದ ಪಾತ್ರವನ್ನು ತೆಗೆದುಕೊಳ್ಳಲು ಸಾಕಷ್ಟು ಒತ್ತಾಯಿಸಿದೆ. ಏಕೆಂದರೆ ಅವರು ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕತ್ವ ವಹಿಸಲು ಆಸಕ್ತಿ ಹೊಂದಿರಲಿಲ್ಲ. ಹೀಗಾಗಿ ಬಹುಶಃ ನಾನು ಅವರಿಗೆ ಸ್ವಲ್ಪ ಕೊಡುಗೆ ನೀಡಿದ್ದೇನೆ. ಯಾರೇ ಆಡಳಿತ ನಡೆಸುತ್ತಿದ್ದರೂ, ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಆದ್ಯತೆ. ಭಾರತೀಯ ಕ್ರಿಕೆಟ್​​​ ಸುಧಾರಣೆಗಾಗಿ ಕೆಲಸ ಮಾಡಲು ನನ್ನನ್ನು ಬಿಸಿಸಿಐ ಅಧ್ಯಕ್ಷರಾಗಿ ನೇಮಿಸಿದ್ದು. ಈ ಘಟನೆ ಸಣ್ಣ ಭಾಗವಾಗಿದೆ, “ಎಂದು ಅವರು ಹೇಳಿದ್ದಾರೆ.

Continue Reading

ಕ್ರಿಕೆಟ್

ind vs aus : ಆಸ್ಟ್ರೇಲಿಯಾ- ಭಾರತ ಟಿ20 ಪಂದ್ಯದ ಅಂಪೈರ್​ ಮೇಲೆ ಮೋಸದ ಅರೋಪ!

ind vs aus : ಸರಣಿಯ ಕೊನೇ ಪಂದ್ಯದಲ್ಲಿ ಭಾರತ ತಂಡ 6 ರನ್​ಗಳ ರೋಚಕ ಗೆಲುವು ಸಾಧಿಸಿ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿತ್ತು.

VISTARANEWS.COM


on

Cricket news
Koo

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ (ind vs aus) ಐದನೇ ಮತ್ತು ಅಂತಿಮ ಟಿ 20 ಪಂದ್ಯದಲ್ಲಿ ಭಾರತ ತಂಡವು ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು 4-1 ರಿಂದ ಗೆದ್ದುಕೊಂಡು ಬೀಗಿದೆ. ಭಾರತ ತಂಡಕ್ಕೆ ಇದು ಉತ್ತಮ ಫಲಿತಾಂಶವಾಗಿದ್ದು, ವಿಶ್ವಕಪ್ ಫೈನಲ್ ಸೋಲಿನ ನಂತರ ನಿರಾಶೆಗೊಂಡ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಸ್ವಲ್ಪ ಉತ್ಸಾಹ ತಂದಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಮ್ಯಾಥ್ಯೂ ವೇಡ್ ಅವರು ಮೊದಲು ಬ್ಯಾಟಿಂಗ್ ಮಾಡವಂತೆ ಭಾರತಕ್ಕೆ ಆಹ್ವಾನ ಕೊಟ್ಟಿತು/ ಶ್ರೇಯಸ್ ಅಯ್ಯರ್ 53 ರನ್ ಗಳಿಸಿದರೆ, ಅಕ್ಷರ್ ಪಟೇಲ್ 31 ರನ್ ಗಳಿಸಿದ್ದರಿಂದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಅಂತೆಯೇ ಪಂದ್ಯದ ಕೊನೇ ಹಂತದಲ್ಲಿ ಬೌಲಿಂಗ್​ನಲ್ಲಿ ಮಿಂಚಿದ ಮುಕೇಶ್ ಕುಮಾರ್ (32ಕ್ಕೆ 3) ಹಾಗೂ ಅರ್ಷ್ದೀಪ್ ಸಿಂಗ್ (40ಕ್ಕೆ 2) ಭಾರತ ತಂಡವನ್ನು ಗೆಲ್ಲಿಸಿದರು. ಅದರಲ್ಲೂ ಅರ್ಶ್​ ದೀಪ್​ ಕೊನೇ ಓವರ್​ನಲ್ಲಿ ಬೇಕಾಗಿದ್ದ 10 ರನ್ ಕಾಪಾಡಿ ಭಾರತಕ್ಕೆ 6 ರನ್ ಗಳ ಜಯ ತಂದಕೊಟ್ಟಿದ್ದರು. ಈ ಓವರ್ ಅತ್ಯಂತ ರೋಚಕವಾಗಿತ್ತು. ಇದೀಗ ಆ ಓವರ್​ನ ಎರಡು ಎಸೆತಗಳು ವಿವಾದಕ್ಕೆ ಒಳಗಾಗಿದೆ. ಆಸ್ಟ್ರೇಲಿಯಾದ ಮಾಜಿ ಆಟಗಾರರು ಇದು ಮೋಸದಾಟ ಎಂಬಂತೆ ಅದನ್ನು ಬಿಂಬಿಸಿದ್ದಾರೆ. ಅಂಪೈರ್​ಗಳ ಮೇಲೆ ಪಕ್ಷಪಾತದ ಗೂಬೆ ಕೂರಿಸಿದ್ದಾರೆ.

ಹೇಡನ್ ವಿವಾದಾತ್ಮಕ ಹೇಳಿಕೆ

ಪಂದ್ಯದ ವೀಕ್ಷಕ ವಿವರಣೆಯ ಸಮಯದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ನೀಡಿದ ಹೇಳಿಕೆ ಸ್ವಲ್ಪ ಕೋಲಾಹಲಕ್ಕೆ ಕಾರಣವಾಯಿತು. ಅರ್ಶ್​ದೀಪ್​ ಅವರು ಎಸೆದ ಬೌನ್ಸರ್ ಮ್ಯಾಥ್ಯೂ ವೇಡ್ ಅವರ ತಲೆಯ ಮೇಲೆ ಹಾರಿ ಹೋಗಿತ್ತು. ಬ್ಯಾಟರ್​ ಮನವಿಯ ಹೊರತಾಗಿಯೂ, ಲೆಗ್-ಅಂಪೈರ್ ಅದಕ್ಕೆ ವೈಡ್​ ನೀಡಲಿಲ್ಲ. ಇದು ವೇಡ್ ಅವರ ಕೋಪಕ್ಕೆ ಕಾರಣವಾಯಿತು.

ಇದನ್ನೂ ಓದಿ : Suryakumar Yadav : ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ಸೂರ್ಯಕುಮಾರ್​

ಹೇಡನ್ ಈ ಕುರಿತು ವಿವರಣೆ ನೀಡಿ, ವೇಡ್​ ಕೋಪಗೊಂಡಿದ್ದು ಸರಿಯಾಗಿದೆ. ಅದು ಖಂಡಿತವಾಗಿಯೂ ವೈಡ್​ ಎಸೆತ. ಅವರ ತಲೆಯ ಮೇಲೆ ಹಾರಿ ಹೋಗಿದೆ. ಅವರು ತಮ್ಮ ಸ್ಥಾನದಲ್ಲಿ ನಿಂತಿದ್ದ ಹೊರತಾಗಿಯೂ ಚೆಂಡು ಮೇಲಕ್ಕೆ ಹಾರಿದೆ. ಹೀಗಾಗಿ ವೈಡ್​ ನೀಡಬೇಕಾಗಿತ್ತು ಎಂದು ವಾದಿಸಿದ್ದಾರೆ. ಇದು ಅಂಪೈರ್ ಮಾಡಿದ ಮೊದಲ ತಪ್ಪು ಎಂಬುದಾಗಿ ಹೇಡನ್ ಆರೋಪಿಸಿದ್ದಾರೆ.

ಅಂಪೈರ್​ ದೇಹಕ್ಕೆ ಬಡಿದಿತ್ತು ಚೆಂಡು

ಕೊನೆಯ 2 ಎಸೆತಗಳಲ್ಲಿ ಆಸೀಸ್​ ಬಳಗಕ್ಕೆ 8 ರನ್​ಗಳ ಅಗತ್ಯವಿತ್ತು. ನಥನ್ ಎಲ್ಲಿಸ್ ಸ್ಟ್ರೈಟ್​ ಬೌಂಡರಿಯನ್ನು ಗುರಿಯಾಗಿಸಿ ಬಾರಿಸಿದ ಚೆಂಡು ಬೌಲರ್ ಅರ್ಶ್​ದೀಪ್ ಅವರ ಕೈಸವರಿ ಅಂಪೈರ್​ನ ಮೈ ಮೇಲೆ ಬಿದ್ದಿತ್ತು. ಅಂಪೈರ್​ ಚೆಂಡಿನಿಂದ ತಪ್ಪಿಸಿಕೊಳ್ಳುವುದಕ್ಕೆ ನಾನಾ ರೀತಿ ಯತ್ನಿಸಿದರೂ ಅದು ಅವರ ತೊಡೆಗೆ ಬಡಿದಿತ್ತು. ಎಲ್ಲಿಸ್ ಸಂಭಾವ್ಯ ಬೌಂಡರಿಯನ್ನು ತಪ್ಪಿಸಿಕೊಂಡಿರುವ ಬಗ್ಗೆ ಸನ್ನೆ ಮಾಡಿದರೂ ಅಂಪೈರ್​ ಮರುತ್ತರ ಕೊಟ್ಟಿರಲಿಲ್ಲ.

ಈ ಎರಡೂ ಪ್ರಸಂಗವನ್ನು ನೋಡಿದ ಹೇಡನ್, ಅಂಪೈರ್ ಈ ಓವರ್​ನಲ್ಲಿ ಎರಡನೇ ಬಾರಿಗೆ ತಮ್ಮ ಕರ್ತವ್ಯ ಪೂರೈಸಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಮಾತು ಅಂಪೈರ್​ಗಳ ಮೋಸ ಹಾಗೂ ಸ್ವಜನಪಕ್ಷಪಾತ ಎಂಬ ಹೇಳಿಕೆಯಾಗಿತ್ತು.

ಹೇಡನ್ ಅವರ ಹೇಳಿಕೆಗಳು ಅನಗತ್ಯ ಎಂದು ನೆಟ್ಟಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಲಾಂಗ್ ಆನ್ ನಲ್ಲಿ ಫೀಲ್ಡರ್​ಗಳಿದ್ದರು. ಇದರಿಂದ ಯಾವುದೇ ವ್ಯತ್ಯಾಸ ಉಂಟಾಗುತ್ತಿರಲಿಲ್ಲ ಎಂದ ಹೇಳಿದ್ದಾರೆ. ಮೊದಲ ಎಸೆತವನ್ನು ವೈಡ್ ಕೊಟ್ಟಿದ್ದರೆ ಆಸ್ಟ್ರೇಲಿಯಾ ಐದು ರನ್​ನಿಂದ ಸೋಲುತ್ತಿತ್ತು ಎಂಬುದಾಗಿಯೂ ಅವರು ಹೇಳಿದ್ದಾರೆ.

Continue Reading

ಕ್ರಿಕೆಟ್

Rohit Sharma : ಫಾರಿನ್ ಟೂರ್​ ಮುಗಿಸಿ ಮರಳಿದ ರೋಹಿತ್​ ಶರ್ಮಾ ಫ್ಯಾಮಿಲಿ

Rohit Sharma: ರೋಹಿತ್ ಶರ್ಮಾ ಅವರು ಪತ್ನಿ ಮತ್ತು ಪುತ್ರಿಯೊಂದಿಗೆ ಬ್ರಿಟನ್​ಗೆ ಹೋಗಿ ಅಲ್ಲಿ ಸುತ್ತಾಡಿದ್ದರು.

VISTARANEWS.COM


on

Rohit Sharma
Koo

ಮುಂಬಯಿ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಪತ್ನಿ ರಿತಿಕಾ ಸಜ್ದೇ ಮತ್ತು ಮಗಳು ಸಮೈರಾ ಜತೆಗೆ ಸೋಮವಾರ ಮುಂಬೈಗೆ ಮರಳಿದರು. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ನಾಯಕ ತನ್ನ ಕುಟುಂಬದೊಂದಿಗೆ ಕಾಣಿಸಿಕೊಂಡರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್​ನಲ್ಲಿ ಭಾರತ ತಂಡದ ಸೋಲಿನ ಬಳಿಕ ರೋಹಿತ್ ಮತ್ತು ಇತರ ಹಿರಿಯ ಆಟಗಾರರು ವಿರಾಮ ತೆಗೆದುಕೊಂಡಿದ್ದರು. ಈ ಅವಧಿಯಲ್ಲಿ ಅವರು ಬ್ರಿಟನ್​ಗೆ ಪ್ರವಾಸ ಹೋಗಿದ್ದರು ಎಂದು ಹೇಳಲಾಗಿದೆ. ಪ್ರವಾಸದಲ್ಲಿದ್ದ ಕಾರಣ ರೋಹಿತ್ ಶರ್ಮಾ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ 20 ಪಂದ್ಯಗಳಲ್ಲಿ ಪಾಲ್ಗೊಂಡಿರಲಿಲ್ಲ.

ಭಾರತದ ವಿಶ್ವಕಪ್ ಫೈನಲ್ ಸೋಲಿನ ನಂತರ ಭಾರತೀಯ ನಾಯಕ ಸಾರ್ವಜನಿಕ ದೃಷ್ಟಿಯಿಂದ ದೂರ ಉಳಿದಿದ್ದರು. ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪತ್ನಿಯೊಂದಿಗೆ ರಜಾದಿನಗಳನ್ನು ಕಳೆಯುವ ಚಿತ್ರವನ್ನು ಹಂಚಿಕೊಂಡಿದ್ದರು. ಹೀಗಾಗಿ ಅವರು ಬ್ರಿಟನ್​ನಲ್ಲಿ ತಿರುಗಾಟ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿತ್ತು.

ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ತಂಡವನ್ನು ಮುಂಚೂಣಿ ಸ್ಥಾನದಲ್ಲಿ ನಿಂತು ಮುನ್ನಡೆಸಿದ್ದರು. ಒಟ್ಟು 597 ರನ್​​ಗಳೊಂದಿಗೆ 2 ನೇ ಅತಿ ಹೆಚ್ಚು ರನ್ ಬಾರಿಸಿದ ಆಟಗಾರನಾಗಿ ಪ್ರವಾಸವನ್ನು ಕೊನೆಗೊಳಿಸಿದ್ದರು. ಏಕದಿನ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವುದು ಸೇರಿದಂತೆ 11 ಪಂದ್ಯಗಳ ಅಭಿಯಾನದಲ್ಲಿ 36 ವರ್ಷದ ಬ್ಯಾಟರ್​​ ಅನೇಕ ದಾಖಲೆಗಳನ್ನು ಮುರಿದಿದ್ದಾರೆ.

ವಿಶೇಷವೆಂದರೆ, ಡಿಸೆಂಬರ್ 10 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟಿ 20 ಐ ಮತ್ತು ಏಕದಿನ ಸರಣಿಯಿಂದ ರೋಹಿತ್​ಗೆ ವಿಶ್ರಾಂತಿ ನೀಡಲಾಗಿದೆ. ಡಿಸೆಂಬರ್ 26 ರಿಂದ ಸೆಂಚೂರಿಯನ್​ನಲ್ಲಿ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲು ಭಾರತೀಯ ನಾಯಕ ಟೆಸ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಬುಮ್ರಾಗೆ ಸಲಹೆ ಕೊಟ್ಟ ನೀರಜ್​

ಭಾರತದಲ್ಲಿ ಜಾವೆಲಿನ್ ಎಸೆತವನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾಗಿರುವ ಹಾಲಿ ಒಲಿಂಪಿಕ್ ಚಾಂಪಿಯನ್ ಚಿನ್ನದ ಹುಡುಗ ನೀರಜ್ ಚೋಪ್ರಾ ತಮ್ಮ ನೆಚ್ಚಿನ ಮತ್ತು ಭಾರತದ ಸ್ಟಾರ್​ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ತಮ್ಮ ವೇಗವನ್ನು ಹೆಚ್ಚಿಸುವ ಕುರಿತು ಒಳನೋಟದ ಸಲಹೆ ನೀಡಿದ್ದಾರೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್​ ಪಂದ್ಯವನ್ನು ವೀಕ್ಷಿಸಿದ್ದ ನೀರಜ್, ಬುಮ್ರಾ ಅವರ ವಿಶಿಷ್ಟ ಬೌಲಿಂಗ್ ಶೈಲಿಯನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಅವರನ್ನು ತಮ್ಮ ಆದ್ಯತೆಯ ವೇಗದ ಬೌಲರ್ ಎಂದು ಹೇಳಿದ್ದಾರೆ.

“ನಾನು ಜಸ್ಪ್ರೀತ್ ಬುಮ್ರಾ ಅವರನ್ನು ಸಾಕಷ್ಟು ಇಷ್ಟಪಡುತ್ತೇನೆ. ಅವರ ಬೌಲಿಂಗ್​ ಶೈಲಿಯನ್ನು ವಿಶೇಷವಾಗಿ ಆಸ್ವಾದಿಸುತ್ತೇನೆ ” ಎಂದು ನೀರಜ್ ಇಂಡಿಯನ್ ನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ವಿಶ್ವಕಪ್​​ನಲ್ಲಿ ಬುಮ್ರಾ ಅವರ ಅಸಾಧಾರಣ ಪ್ರದರ್ಶನದಿಂದಾಗಿ ಅವರಿಗೆ 20 ವಿಕೆಟ್​ಗಳನ್ನು ಗಳಿಸಲು ಸಹಾಯ ಮಾಡಿತು. ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಅವರ ಅಸಾಧಾರಣ ಸಾಮರ್ಥ್ಯವು ಭಾರತದ ಯಶಸ್ಸಿಗೆ ಕೊಡುಗೆ ನೀಡಿದೆ. ಬುಮ್ರಾ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಚೋಪ್ರಾ ಅವರ ವೇಗವನ್ನು ಹೆಚ್ಚಿಸಬೇಕು ಎಂಬ ಸಣ್ಣ ಬದಲಾವಣೆಯನ್ನೂ ಸೂಚಿಸಿದ್ದಾರೆ.

ಹೆಚ್ಚು ದೂರ ಓಡಲಿ

ತಮ್ಮ ಎಸೆತಗಳಿಗೆ ಇನ್ನಷ್ಟು ವೇಗ ನೀಡಲು ಬುಮ್ರಾ ತಮ್ಮ ರನ್-ಅಪ್ ಅನ್ನು ಹೆಚ್ಚಿಸಬೇಕು ಎಂದು ನಾನು ಭಾವಿಸುತ್ತೇನೆ. ಜಾವೆಲಿನ್ ಎಸೆತಗಾರರಾಗಿ ನಾನು ಹೇಳುವುದಾದರೆ ಬೌಲರ್​ಗಳು ತಮ್ಮ ರನ್-ಅಪ್ ಅನ್ನು ಸ್ವಲ್ಪ ಹಿಂದಿನಿಂದ ಪ್ರಾರಂಭಿಸಿದರೆ ವೇಗವನ್ನು ವೃದ್ದಿಸಲು ಸಾಧ್ಯವಿದೆ ಎಂದು ಹೇಳುತ್ತೇನೆ. ಆದರೆ, ಬುಮ್ರಾ ಅವರ ಬೌಲಿಂಗ್​ ಶೈಲಿಯನ್ನು ನಾನು ಇಷ್ಟಪಡುತ್ತೇನೆ, “ಎಂದು ಅವರು ಹೇಳಿದರು.

Continue Reading
Advertisement
David Warner
ಕ್ರಿಕೆಟ್3 mins ago

David Warner: ಮೋಸಗಾರನಿಗೆ ವಿದಾಯ ಪಂದ್ಯದ ಅಗತ್ಯವಿಲ್ಲ; ಮಿಚೆಲ್​ ಜಾನ್ಸನ್

sadghuru with students
ಅಂಕಣ46 mins ago

Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

ಕರ್ನಾಟಕ1 hour ago

ವಿಜಯಪುರ ಗೋದಾಮು ದುರಂತ: ಮೃತರ ಸಂಖ್ಯೆ 7ಕ್ಕೆ, ಇನ್ನೂ ನಾಲ್ಕು ಶವ ಸಿಕ್ಕಿಲ್ಲ

cm siddaramaih respect captain pranjal
ಕರ್ನಾಟಕ2 hours ago

CM Siddaramaiah: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ. ಪರಿಹಾರ

Canara Bank Ammembala Subbarao Pai
ಅಂಕಣ2 hours ago

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

CBSE Board Exam 2024 and many more changes proposed implemented in this year
ದೇಶ2 hours ago

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

Saurav Gangly
ಕ್ರಿಕೆಟ್2 hours ago

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Physical Education Teacher
ಉದ್ಯೋಗ2 hours ago

Teachers Recruitment : ಪ್ರಾಥಮಿಕ ಶಾಲೆಯಲ್ಲಿ 2120 ದೈಹಿಕ ಶಿಕ್ಷಕರ ಹುದ್ದೆ ಭರ್ತಿಗೆ ತೀರ್ಮಾನ

sufi
ಅಂಕಣ2 hours ago

ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

Rain in Karnataka woman listening to music with an umbrella
ಕರ್ನಾಟಕ2 hours ago

Karnataka Weather : ಇಂದು – ನಾಳೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಭಾರಿ ಮಳೆ; ಇದು ಮಿಚುಂಗ್ ಎಫೆಕ್ಟ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌