Site icon Vistara News

Rohit Sharma: ಅಭಿಮಾನಿಯ ಹುಚ್ಚಾಟಕ್ಕೆ ಹೆದರಿ ಕಂಗಾಲಾದ ರೋಹಿತ್​; ವಿಡಿಯೊ ವೈರಲ್​

Rohit Sharma

ಮುಂಬಯಿ: ಪ್ರಸಕ್ತ ಸಾಗುತ್ತಿರುವ ಐಪಿಎಲ್(IPL 2024)​ ಟೂರ್ನಿಯಲ್ಲಿ ಪಂದ್ಯದ ವೇಳೆ ಭಾರೀ ಭದ್ರತಾ ವೈಫಲ್ಯ ಕಂಡು ಬರುತ್ತಿದೆ. ಪ್ರೇಕ್ಷಕರ ಗ್ಯಾಲರಿಂದ ಮೈದಾನಕ್ಕೆ ಓಡಿ ಬಂದು ಆಡಗಾರರನ್ನು ತಪ್ಪಿಕೊಳ್ಳುತ್ತಿರುವ ಘಟನೆಗಳು ಪದೇಪದೆ ಮರುಕಳಿಸುತ್ತಿವೆ. ಕೆಲವು ದಿನಗಳ ಹಿಂದೆ ಆರ್​ಸಿಬಿ ಪಂದ್ಯದ ವೇಳೆ ಅಭಿಮಾನಿಯೊಬ್ಬ ವಿರಾಟ್​ ಕೊಹ್ಲಿಯ(virat kohli) ಕಾಲಿಗೆ ಬಿದ್ದು ಅವರನ್ನು ತಪ್ಪಿಕೊಂಡ ಘಟನೆ ನಡೆದಿತ್ತು. ಇದೀಗ ಸೋಮವಾರದ ಮುಂಬೈ ಮತ್ತು ರಾಜಸ್ಥಾನ್​ ನಡುವಿನ ಪಂದ್ಯದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ.

ಮುಂಬಯಿ ತಂಡ ಫೀಲ್ಡಿಂಗ್​ ನಡೆಸಲು ಸಿದ್ಧತೆ ನಡೆಸುತ್ತಿದ್ದ ನಡೆಸುತ್ತಿತ್ತು. ರೋಹಿತ್​ ಶರ್ಮ(Rohit Sharma) ಅವರು ಸ್ಲಿಪ್​ನಲ್ಲಿ ಫೀಲ್ಡಿಂಗ್​ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಏಕಾಏಕಿ ಮೈದಾನಕ್ಕೆ ನುಗ್ಗಿ ರೋಹಿತ್​ ಅವರನ್ನು ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಹಿಂದಿನಿಂದ ಓಡಿ ಬಂದ ಈತನನ್ನು ಕಂಡು ರೋಹಿತ್​ ಒಂದು ಕ್ಷಣ ಭಯಭೀತರಾಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​(viral video) ಆಗಿದೆ.

ಅಭಿಮಾನಿ ರೋಹಿತ್​ ಅವರನ್ನು ತಬ್ಬಿಕೊಂಡ ಬಳಿಕ ಪಕ್ಕದಲ್ಲೇ ನಿಂತಿದ್ದ ಇಶಾನ್​ ಕಿಶನ್​ ಅವರಿಗೂ ಕೈ ಕುಲುಕಿ ತಬ್ಬಿಕೊಂಡು ಮತ್ತೆ ಗ್ಯಾಲರಿಯತ್ತ ಓಡಿದ್ದಾನೆ. ಈ ಘಟನೆಯನ್ನು ಕಂಡ ಅನೇಕ ನೆಟ್ಟಿಗರು ಸ್ಟೇಡಿಯಂ ಭದ್ರತಾ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟಗಾರರ ಜೀವಕ್ಕೆ ಕುತ್ತು ತರುವ ಘಟನೆ ಪದೇಪದೆ ನಡೆಯುತ್ತಿದ್ದರೂ ಸಿಬ್ಬಂದಿಗಳಿಗೆ ಯಾವುದೇ ಚಿಂತೆಯಿಲ್ಲ. ಇನ್ನಾದರೂ ಮುಂದಿನ ಪಂದ್ಯಗಳಲ್ಲಿ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ರೋಹಿತ್ ಶರ್ಮಾ (Rohit Sharma) ಅವರು ಈ ಪಂದ್ಯದಲ್ಲಿ ಶೂನ್ಯ ಸುತ್ತಿ ಅನಗತ್ಯ ಸಾಧನೆ ಮಾಡಿರು. ಐಪಿಎಲ್​ ಟೂರ್ನಿಯಲ್ಲಿ ಅತ್ಯಧಿಕ ಶೂನ್ಯ ಸಂಪಾದಿಸಿದ ಆಟಗಾರರ ಪಟ್ಟಿಯಲ್ಲಿ ದಿನೇಶ್​ ಕಾರ್ತಿಕ್​ ಅವರೊಂದಿಗೆ ಜಂಟಿಯಾಗಿ ಅಗ್ರಸ್ಥಾನ ಪಡೆದರು. ಉಭಯ ಆಟಗಾರರು 17 ಬಾರಿ ಐಪಿಎಲ್​ನಲ್ಲಿ ಡಕೌಟ್​ ಆಗಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 15.3 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 127 ರನ್ ಬಾರಿಸಿ ಭರ್ಜರಿ ವಿಜಯ ಸಾಧಿಸಿತು. ಮುಂಬೈ ತವರಿನಲ್ಲಿ ಸೋಲುದರ ಜತೆಗೆ ಹ್ಯಾಟ್ರಿಕ್​ ಸೋಲಿನ ಅವಮಾನಕ್ಕೆ ಸಿಲುಕಿತು.

ಇದನ್ನೂ ಓದಿ Rohit Sharma : ‘ಶೂನ್ಯ’ದಲ್ಲಿ ಸಾಧನೆ ಮಾಡಿದ ರೋಹಿತ್ ಶರ್ಮಾ! 

ಮಾರ್ಚ್​ 25ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ಆರಂಭಿಸಲು ಸಿದ್ಧತೆ ನಡೆಸುತ್ತಿತ್ತು. ಈ ವೇಳೆ ಕೊಹ್ಲಿ ಕ್ರೀಸ್‌ನಲ್ಲಿದ್ದರು. ಇದೇ ಸಂದರ್ಭ ರಾಯಚೂರು ಮೂಲದ ಕುರುಮಪ್ಪ‌ ಎನ್ನುವ ಅಭಿಮಾನಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಪಿಚ್‌ ಕಡೆ ಬಂದು ಕೊಹ್ಲಿ ಕಾಲಿಗೆ ಬಿದ್ದು, ಆಲಿಂಗನ ಮಾಡಿದ್ದ. ಇದಾದ ಬಳಿಕ ಸೆಲ್ಲಾರ್​ಗೆ ಕರೆತಂದ ಭದ್ರತಾ ಸಿಬ್ಬಂದಿ ಆತನಿಗೆ ಸರಿಯಾಗಿ ಥಳಿಸಿದ್ದರು. ಇದರ ವಿಡಿಯೊ ಕೂಡ ವೈರಲ್​ ಆಗಿತ್ತು.

Exit mobile version