ನ್ಯೂಯಾರ್ಕ್: ಬಾಂಗ್ಲಾದೇಶ(IND vs BAN) ವಿರುದ್ಧ ನಿನ್ನೆ(ಶನಿವಾರ) ನಡೆದ ಟಿ20 ವಿಶ್ವಕಪ್(T20 World Cup 2024) ಟೂರ್ನಿಯ ಅಭ್ಯಾಸ ಪಂದ್ಯದ ವೇಳೆ ರೋಹಿತ್ ಶರ್ಮ(Rohit Sharma) ಅವರ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ರೋಹಿತ್ ಅವರನ್ನು ಅಪ್ಪಿಕೊಂಡಿದ್ದಾನೆ. ಈ ವೇಳೆ ನ್ಯೂಯಾರ್ಕ್ನ ಪೊಲೀಸ್ ಪಡೆ ಶರವೇಗದಲ್ಲಿ ಓಡಿ ಒಂದು ಈ ಅಭಿಮಾನಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಈ ವಿಡಿಯೊ ವೈರಲ್(viral video) ಆಗಿದೆ.
ಭಾರತ ತಂಡ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಅಭಿಮಾನಿಯೊಬ್ಬ ಟೀಮ್ ಇಂಡಿಯಾದ ಜೆರ್ಸಿ ತೊಟ್ಟು ನೇರವಾಗಿ ಮೈದಾನಕ್ಕೆ ಓಡಿ ಬಂದು ರೋಹಿತ್ ಅವರನ್ನು ಅಪ್ಪಿಕೊಂಡು ಕಾಲಿಗೆ ಬಿದ್ದಿದ್ದಾನೆ. ಇದೇ ವೇಳೆ ಇಲ್ಲಿನ ಪೊಲೀಸ್ ಪಡೆ ಆತನನ್ನು ಮೈದಾನದಲ್ಲೇ ಕೈಗೆ ಕೋಳ ಹಾಕಿ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ರೋಹಿತ್ ಮತ್ತು ಟೂರ್ನಿಯ ಸಂಘಟಕರು ಆತನಿಗೆ ಏನು ಮಾಡಬೇಡಿ ಎಂದು ಹೇಳಿದರೂ ಕೂಡ ಕೆಳದೆ 2 ಪೊಲೀಸರು ಆತನ್ನು ಉಗ್ರಮಾಮಿಯನ್ನು ಬಂಧಿಸಿದಂತೆ ಎಳೆದುಕೊಂಡು ಹೋಗಿದ್ದಾರೆ. ಈತನಿಗೆ ಜೈಲು ಶಿಕ್ಷೆ ಖಚಿತ ಎನ್ನಲಾಗಿದೆ.
ಬೇರೆ ದೇಶದಲ್ಲಿ ಈ ರೀತಿ ಮೈದಾನಕ್ಕೆ ನುಗ್ಗಿದರೆ ಎಚ್ಚರಿಕೆ ನೀಡಿ ಕಳಿಸಲಾಗುತ್ತದೆ. ಆದರೆ ಅಮೆರಿಕದಲ್ಲಿ ಮಾತ್ರ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಯಾರು ಏನೇ ಹೇಳಿದರು ಕೂಡ ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹಂಚಿಕೊಂಡು ಜಾಗ್ರತೆ ವಹಿಸಿ. ಇಲ್ಲಿ ಹುಚ್ಚಾಟ ನಡೆಸಿದರೆ ಜೈಲು ಕಂಬಿ ಎಣಿಸುವುದು ನಿಶ್ಚಿತ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ರಿಷಭ್ ಪಂತ್ ಅವರ ಅರ್ಧಶತಕ ಮತ್ತು ಪಾಂಡ್ಯ ಅವರ ಅಜೇಯ 40 ರನ್ಗಳ ನೆರವಿನಿಂದ 5 ವಿಕೆಟಿಗೆ 182 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾ 8 ವಿಕೆಟ್ ಕಳೆದುಕೊಂಡು 121 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಬಾಂಗ್ಲಾ ತಂಡ ಇದಕ್ಕೂ ಮುನ್ನ ಆಡಿದ ಅಭ್ಯಾಸ ಪಂದ್ಯದಲ್ಲಿ ಅಮೆರಿಕ ವಿರುದ್ಧವೂ ಸೋಲು ಕಂಡಿತ್ತು.
ಇದನ್ನೂ ಓದಿ IND vs BAN: ಪಾಂಡ್ಯ ಬಲಿಷ್ಠ ಹೊಡೆತಕ್ಕೆ ನೆತ್ತರು ಚೆಲ್ಲಿದ ಬಾಂಗ್ಲಾ ಬೌಲರ್; ವಿಡಿಯೊ ವೈರಲ್
ಐಪಿಎಲ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲವಾಗಿದ್ದ ಹಾರ್ದಿಕ್ ಪಾಂಡ್ಯ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆದಿದ ಪಾಂಡ್ಯ ಬಿರುಸಿನ ಬ್ಯಾಟಿಂಗ್ ಮೂಲಕ ಕೇವಲ 23 ಎಸೆತಗಳಿಂದ 2 ಬೌಂಡರಿ ಮತ್ತು 4 ಸಿಕ್ಸರ್ ಸಹಿತ ಅಜೇಯ 40 ರನ್ ಚಚ್ಚಿದರು. ಒಂದು ವಿಕೆಟ್ ಕೂಡ ಕಿತ್ತರು.ಕಾರು ಅಪಘಾತದ ಬಳಿಕ ಮೊದಲ ಬಾರಿ ಟೀಮ್ ಇಂಡಿಯಾ ಪರ ಆಡಿದ ರಿಷಭ್ ಪಂತ್ ಪ್ರಚಂಡ ಬ್ಯಾಟಿಂಗ್ ನಡೆಸುವ ಮೂಲಕ ಗಮನಸೆಳೆದರು. ತಮ್ಮ ನೆಚ್ಚಿನ ಒನ್ ಹ್ಯಾಂಡ್ ಸಿಕ್ಸರ್ ಕೂಡ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ಪಂತ್ ಬರೋಬ್ಬರಿ 4 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿ 53 ರನ್ ಗಳಿಸಿದರು.