Site icon Vistara News

Rohit Sharma: ಮುಂಬೈ ಸ್ಟ್ರೀಟ್​ನಲ್ಲಿ ಜಾಲಿ ರೈಡ್‌ ಮಾಡಿದ ರೋಹಿತ್​; ವಿಡಿಯೊ ವೈರಲ್​

Rohit Sharma

Rohit Sharma: Rohit Sharma goes out for a drive in his Lamborghini

ಮುಂಬಯಿ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ತವರಾದ ಮುಂಬೈನಲ್ಲಿ ಜಾಲಿ ಮೂಡ್​ನಲ್ಲಿದ್ದಾರೆ. ಮುಂಬೈಯ ಸ್ಟ್ರೀಟ್​ ಒಂದರಲ್ಲಿ ರೋಹಿತ್​ ನೀಲಿ ಬಣ್ಣದ ಲ್ಯಾಂಬೋರ್ಗಿನಿ(Lamborghini) ಕಾರಿನಲ್ಲಿ ಜಾಲಿ ರೈಡ್​ ಮಾಡಿರುವ ವಿಡಿಯೊ ವೈರಲ್​ ಆಗಿದೆ.

ರೋಹಿತ್​ ಅವರು ಲ್ಯಾಂಬೋರ್ಗಿನಿ ಕಾರಿನಲ್ಲಿ ಬರುತ್ತಿರುವ ವಿಡಿಯೊವನ್ನು ನೆಟ್ಟಿಗರೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೋಹಿತ್​ ರಸ್ತೆ ಬದಿಯಲ್ಲಿ ನಿಂತಿದ್ದ ಅಭಿಮಾನಿಗಳನ್ನು ಕಂಡು ಥಮ್ಸ್ ಅಪ್‌ ಮಾಡಿ ಮುಂದೆ ಸಾಗಿದ್ದಾರೆ. ಈ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ರೋಹಿತ್​ ಏಕದಿನದಲ್ಲಿ ಲಂಕಾ ವಿರುದ್ಧ 264 ರನ್ ಬಾರಿಸಿದ್ದರು. ಇದೇ ಸಂಖ್ಯೆಯನ್ನು ತಮ್ಮ ಕಾರ್​ ನಂಬರ್​ ಆಗಿ ಬಳಸಿಕೊಂಡಿದ್ದಾರೆ.​

ಟಿ20 ವಿಶ್ವಕಪ್​ ಮುಗಿದ ಬಳಿಕ ಕುಟುಂಬ ಸಮೇತರಾಗಿ ವಿದೇಶಕ್ಕೆ ಪ್ರವಾಸ ಹೋಗಿದ್ದ ರೋಹಿತ್​ ಮುಂಬೈಗೆ ಮರಳಿದ್ದ ವೇಳೆಯೂ ಇದೇ ಕಾರಿನಲ್ಲಿ ವಿಮಾನ ನಿಲ್ದಾಣದಿಂದ ಮನೆಗೆ ತೆರಳಿದ್ದ ವಿಡಿಯೊ ಮೂರು ವಾರಗಳ ಹಿಂದೆ ವೈರಲ್​ ಆಗಿತ್ತು. ಸದ್ಯ ವಿಶ್ರಾಂತಿಯಲ್ಲಿರುವ ರೋಹಿತ್​ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿ ವೇಳೆಗೆ ತಂಡ ಸೇರಲಿದ್ದಾರೆ.

ಅತಿ ವೇಗದ ಕಾರು ಚಾಲನೆ ಮಾಡಿದ್ದ ರೋಹಿತ್​ ಶರ್ಮಗೆ ಈ ಹಿಂದೆ 3 ಬಾರಿ ಪೊಲೀಸರು ದಂಡ ವಿಧಿಸಿದ್ದರು. ​ಲಂಬೋರ್ಗಿನಿ ಕಾರಿನಲ್ಲಿ ಅವರು ಗಂಟೆಗೆ 200 ಕಿ.ಮೀ ಕಾರು ಚಲಾಯಿಸಿದ್ದರು. ಇದೇ ಕಾರಣಕ್ಕೆ ಅತಿ ವೇಗದ ಚಾಲನೆಯ ಟ್ರಾಫಿಕ್​ ನಿಯಮದ ಅಡಿಯಲ್ಲಿ ಅವರಿಗೆ ಮೂರು ಟ್ರಾಫಿಕ್ ದಂಡದ ಚಲನ್‌ಗಳನ್ನು ನೀಡಲಾಗಿತ್ತು.

ರೋಹಿತ್ ನಾಯಕತ್ವದಲ್ಲಿ, ಜೂನ್​ 29ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.

ಇದನ್ನೂ ಓದಿ Rohit Sharma: ಸೋಲಿನ ಬಳಿಕ ದೇಶೀಯ ಕ್ರಿಕೆಟ್​ನ ಮಹತ್ವ ತಿಳಿಸಿದ ರೋಹಿತ್​; ನೆಟ್ಟಿಗರಿಂದ ತೀವ್ರ ತರಾಟೆ

ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

Exit mobile version