Site icon Vistara News

Rohit Sharma: ವಿಶ್ವಕಪ್​ ಗೆದ್ದು ಬಂದ ರೋಹಿತ್​ಗೆ ಸರ್​ಪ್ರೈಸ್​ ಕೊಟ್ಟ ಬಾಲ್ಯದ ಗೆಳೆಯರು; ವಿಡಿಯೊ ವೈರಲ್​

Rohit Sharma

Rohit Sharma: Rohit Sharma's childhood friends salute India captain upon home welcome

ಮುಂಬಯಿ: ಟಿ20 ವಿಶ್ವಕಪ್(T20 World Cup 2024)​ ಗೆದ್ದು ತವರಿಗೆ ಮರಳಿದ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮಗೆ(Rohit Sharma) ತಮ್ಮ ಬಾಲ್ಯದ ಗೆಳೆಯರು(Rohit Sharma’s childhood friends) ವಿಶೇಷವಾಗಿ ವೆಲ್​ಕಮ್​ ಮಾಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ. ಗುರುವಾರ  ಮುಂಬೈಯಲ್ಲಿ ಟಿ20 ವಿಶ್ವಕಪ್(T20 World Cup) ಗೆದ್ದ ಭಾರತ ತಂಡದ ಆಟಗಾರರಿಗೆ ಭರ್ಜರಿಯಾಗಿ ಅಭಿನಂದಿಸಲಾಗಿತ್ತು. ಎಲ್ಲ ಕಾರ್ಯಕ್ರಮ ಮುಗಿದ ಬಳಿಕ ರೋಹಿತ್​ ಅವರು ಬಾಲ್ಯದ ಗೆಳೆಯರನ್ನು ಭೇಟಿ ಮಾಡಿದರು. ಈ ವೇಳೆ ಗೆಳೆಯರು ಸೆಲ್ಯೂಟ್​ ಹೊಡೆದು, ರೋಹಿತ್​ ಅವರನ್ನು ಭುಜದ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಈ ವೇಳೆ​ ಟೀಮ್​ ಇಂಡಿಯಾ ಆಟಗಾರ, ರೋಹಿತ್​ ಅವರ ಆಪ್ತರಾಗಿರುವ ತಿಲಕ್​ ವರ್ಮಾ ಕೂಡ ಜತೆಗಿದ್ದರು. ಇವರು ಕೂಡ ಸೆಲ್ಯೂಟ್​ ಹೊಡೆದು ರೋಹಿತ್​ಗೆ ಗೌರವಿಸಿದ್ದಾರೆ.

ಬಾರ್ಬಡೋಸ್‌ನಿಂದ ಬುಧವಾರ ಬೆಳಿಗ್ಗೆ ಪ್ರಯಾಣ ಆರಂಭಿಸಿದ್ದ ಭಾರತ ತಂಡವು ಗುರುವಾರ ಬೆಳಗ್ಗೆ ನವದೆಹಲಿಗೆ ಬಂದಿಳಿದಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯ ಸ್ವೀಕರಿಸಿದ ನಂತರ ಮಧ್ಯಾಹ್ನ 3.42ಕ್ಕೆ ಮುಂಬೈಗೆ ಪ್ರಯಾಣ ಬೆಳೆಸಿತ್ತು. ಸಂಜೆ ಐದು ಗಂಟೆಯ ನಂತರ ವಿಮಾನವು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಸಾಗರೋಪಾದಿಯಲ್ಲಿ ಸೇರಿದ್ದ ಅಭಿಮಾನಿಗಳ ಗುಂಪಿನಲ್ಲಿ ಆಟಗಾರರು ತೆರೆದ ಬಸ್​ನಲ್ಲಿ ವಿಶ್ವಕಪ್​ ಟ್ರೋಫಿಯೊಂದಿಗೆ ರೋಡ್ ಶೋ ನಡೆಸಿದ್ದರು. ದಕ್ಷಿಣ ಮುಂಬೈನ ಮರೀನ್ ಡ್ರೈವ್‌ ಪ್ರದೇಶ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ಹೋಗಿತ್ತು.

ಇದನ್ನೂ ಓದಿ Team India’s Victory Parade: ಟೀಮ್ ಇಂಡಿಯಾದ ವಿಕ್ಟರಿ ಪೆರೇಡ್​ನಲ್ಲಿ ಹಲವು ಅಭಿಮಾನಿಗಳಿಗೆ ಗಾಯ; ಆಸ್ಪತ್ರೆಗೆ ದಾಖಲು

ಐತಿಹಾಸಿಕ ಗೆಲುವಿನ ಬಳಿಕ ನಾಯಕ ರೋಹಿತ್​ ಶರ್ಮ(Rohit Sharma) ಅವರು ಬಾರ್ಬಡೋಸ್​ ಕ್ರೀಡಾಂಗಣದ ಪಿಚ್​ನಲ್ಲಿನ ಮಣ್ಣನ್ನು ತಿಂದು ಧನ್ಯತಾ ಭಾವ ವ್ಯಕ್ತಪಡಿಸಿದ್ದರು. ‘ಆ ವಿಷಯಗಳನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಏಕೆಂದರೆ, ಯಾವುದನ್ನೂ ನಾನು ಸ್ಕ್ರಿಪ್ಟ್ ಮಾಡಿಲ್ಲ. ನಾನು ಮೈದಾನಕ್ಕೆ ಇಳಿದಾಗ ಆ ಕ್ಷಣವನ್ನು ಅನುಭವಿಸುತ್ತಿದ್ದೆ. ಗೆಲುವು ತಂದು ಕೊಟ್ಟ ಈ ಪಿಚ್​ನ ಋಣವನ್ನು ಮರೆಯಲು ಸಾಧ್ಯವಿಲ್ಲ. ನನ್ನ ಜೀವನದುದ್ದಕ್ಕೂ ಈ ಪಿಚ್​ನ ಮಣ್ಣಿನ ನೆನಪನ್ನು ಇಟ್ಟು ಕೊಳ್ಳುವ ಸಲುವಾಗಿ ನಾನು ಪಿಚ್​ನ ಮಣ್ಣು ತಿಂದೆ” ಎಂದು ಹೇಳಿದ್ದರು.

ವಿದಾಯ ಹೇಳಿದ ರೋಹಿತ್​


ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

Exit mobile version