Site icon Vistara News

Rohit Sharma : ಡಕ್​ ಔಟ್ ಆದರೂ ವಿಶೇಷ ದಾಖಲೆ ಬರೆದ ರೋಹಿತ್​ ಶರ್ಮಾ

Rohit Sharma

ಮೊಹಾಲಿ : ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿರುವ ಹೊರತಾಗಿಯೂ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಅವರೀಗ 100 ಪಂದ್ಯಗಳ ಗೆಲುವಿನ ಸರದಾರ ಎನಿಸಿಕೊಂಡಿದ್ದಾರೆ. ಸುಮಾರು ಒಂದೂವರೆ ವರ್ಷದ ಬಳಿಕ ಟಿ20 ಮಾದರಿಗೆ ಆಗಮಿಸಿರುವ ಅವರು ಅನಗತ್ಯ ರನ್​ಔಟ್​ಗೆ ಒಳಗಾಗಿದ್ದರೂ ದಾಖಲೆಯನ್ನು ಮುಂದುವರಿಸಿದ್ದಾರೆ.

ಭಾರತದ ಆರಂಭಿಕ ಬ್ಯಾಟರ್​ ರೋಹಿತ್​​ 2 ಎಸೆತಗಳಲ್ಲಿ ಡಕ್ಔಟ್ ಆದ ಹೊರತಾಗಿಯೂ, ಪುರುಷರ ಟಿ20 ಐನಲ್ಲಿ 100 ಗೆಲುವಿನ ಭಾಗವಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪುರುಷರ ಟಿ20ಐನಲ್ಲಿ 100ನೇ ಗೆಲುವಿನ ಮೈಲಿಗಲ್ಲನ್ನು ತಲುಪಿದ ಮೊದಲ ಆಟಗಾರ ಹಾಗೂ ಒಟ್ಟಾರೆ ನಾಲ್ಕನೇ ಕ್ರಿಕೆಟರ್​ ಎಂಬ ಖ್ಯಾತಿ ಅವರದ್ದಾಗಿದೆ

ಇಂಗ್ಲೆಂಡ್​ ಮಹಿಳಾ ಕ್ರಿಕೆಟರ್​ ಡ್ಯಾನಿ ವ್ಯಾಟ್ (111), ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಜೋಡಿ ಅಲಿಸ್ಸಾ ಹೀಲಿ (100) ಮತ್ತು ಎಲಿಸ್ ಪೆರ್ರಿ (100) ಚುಟುಕು ಸ್ವರೂಪದಲ್ಲಿ 100 ಗೆಲುವಿನ ಭಾಗವಾಗಿದ್ದಾರೆ.

ಟಿ20 ಪಂದ್ಯ ಗೆದ್ದ ಭಾರತದ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೂ ರೋಹಿತ್ ಪಾತ್ರರಾಗಿದ್ದಾರೆ. ಭಾರತದ ಆರಂಭಿಕ ಆಟಗಾರನಿಗೆ 36 ವರ್ಷ 256 ದಿನಗಳಾಗಿವೆ.

ಹ ಆಟಗಾರನ ಹೆಸರನ್ನೇ ಮರೆತ ರೋಹಿತ್​ ಶರ್ಮಾ

ಮೊಹಾಲಿ: ಇಲ್ಲಿನ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಜನವರಿ 11 ರಂದು ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಅಫಘಾನಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ರೋಹಿತ್​ ಶರ್ಮಾ (Rohit Sharma ) ತಮ್ಮ ತಂಡದ ಸಹ ಆಟಗಾರರೊಬ್ಬರ ಹೆಸರನ್ನು ಮರೆಯುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ರೋಹಿತ್ ಶರ್ಮಾ ತಮ್ಮ ಮರೆಗುಳಿ ಸ್ವಭಾವದ ಮೂಲಕ ಆಗಾಗ ಸುದ್ದಿಯಾಗುತ್ತಾರೆ. ಇದೀಗ ಮತ್ತೊಂದು ಬಾರಿ ಆಟಗಾರನ ಹೆಸರನ್ನೇ ಮರೆತು ಸೋಶಿಯಲ್ ಮೀಡಿಯಾಗಳಲ್ಲಿ ಮೀಮ್ಸ್​ಗೆ ಕಾರಣರಾಗಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಅವರು ಪ್ಲೇಯಿಂಗ್ ಇಲೆವೆನ್ ನಿಂದ ವಂಚಿತಗೊಂಡ ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದರು. ಅವರು ಸಂಜು ಸ್ಯಾಮ್ಸನ್, ಅವೇಶ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಹೆಸರನ್ನು ಬಹಿರಂಗಪಡಿಸಿದರು. ಆದರೆ ಕೊನೆಯ ಹೆಸರನ್ನು ಮರೆತರು. ಅವರೇ ಸ್ಪಿನ್ನರ್ ಕುಲ್ದೀಪ್​ ಯಾದವ್. ಆದರೆ, ಒಟ್ಟು ಸದಸ್ಯರ ಬಗ್ಗೆ ಮಾಹಿತಿ ಹೊಂದಿದ್ದ ವೀಕ್ಷಕ ವಿವರಣೆಗಾರ ಮುರಳಿ ಕಾರ್ತಿಕ್ ಸ್ವಲ್ಪ ಸಹಾಯ ಮಾಡಿದರು. ಅವರು ಕುಲ್ದೀಪ್​ ಅವರು ಅಲ್ಲವೇ ಎಂದು ಕೇಳುವ ಮೂಲಕ ನೆರವು ಕೊಟ್ಟರು.

Exit mobile version