Site icon Vistara News

Rohit Sharma : ಟಿ20 ನಾಯಕತ್ವದ ಗೊಂದಲದ ನಡುವೆಯೇ ವಿದೇಶದಲ್ಲಿ ಪತ್ತೆಯಾದ್ರು ರೋಹಿತ್ ಶರ್ಮಾ

Rohit Sharma

ಬೆಂಗಳೂರು : 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಅವರು ಸೆಪ್ಟೆಂಬರ್ ನಿಂದ ಆಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇದೀಗ ಅವರು ಬ್ರೇಕ್​ ಪಡೆದುಕೊಂಡು ಫ್ಯಾಮಿಲಿ ಜತೆ ಪ್ರವಾಸ ಹೊರಟಿದ್ದಾರೆ. ಅವರೀಗ ತಮ್ಮ ಪತ್ನಿ ರಿತಿಕಾ ಸಜ್ದೆ ಮತ್ತು ಮಗಳು ಸಮೈರಾ ಅವರೊಂದಿಗೆ ಬ್ರಿಟನ್​ನಲ್ಲಿದ್ದಾರೆ.

ಭಾರತ ವೈಟ್-ಬಾಲ್ ಕ್ರಿಕೆಟ್​ ತಂಡದ ನಾಯಕನಾಗಿ ಅವರ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಬ್ರಿಟನ್​ನಲ್ಲಿ ಫ್ಯಾಮಿಲಿ ಜತೆ ಸಮಯ ಕಳೆಯುತ್ತಿದ್ದಾರೆ. ರೋಹಿತ್ ಶರ್ಮಾ ಇತ್ತೀಚೆಗೆ ತಮ್ಮ ಇನ್​​​ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಮಗಳೊಂದಿಗಿನ ಮುದ್ದಾದ ಚಿತ್ರವನ್ನು ಪೋಸ್ಟ್ ಮಾಡಿದ್ದರು.

ಐಸಿಸಿ ಟಿ 20 ವಿಶ್ವಕಪ್ 2024 ಸಮೀಪಿಸುತ್ತಿದ್ದಂತೆ, ಬಿಸಿಸಿಐ ಮತ್ತು ಆಯ್ಕೆದಾರರು ರೋಹಿತ್ ಶರ್ಮಾ ಅವರ ಟಿ 20 ಐ ಭವಿಷ್ಯದ ಬಗ್ಗೆ ಚರ್ಚಿಸಲು ತಯಾರಿ ನಡೆಸುತ್ತಿದ್ದಾರೆ. ಅವರನ್ನು ಕರೆದು ನಾಯಕತ್ವವನ್ನು ಮುಂದುವರಿಸುವ ಇಚ್ಛೆಯಿದೆಯೇ ಎಂಬುದನ್ನು ಪ್ರಶ್ನಿಸಲಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಅವರ ಗುತ್ತಿಗೆ ವಿಸ್ತರಣೆಯೊಂದಿಗೆ, ನಾಯಕ ಮತ್ತು ಬ್ಯಾಟ್ಸ್ಮನ್ ಆಗಿ 2023 ರ ವಿಶ್ವಕಪ್​ನಲ್ಲಿ ಅವರ ಶ್ಲಾಘನೀಯ ಪ್ರದರ್ಶನ ಪರಿಗಣಿಸಿ ಶರ್ಮಾಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಅವರು ಇನ್ನೂ ಸ್ಪಷ್ಟನೆ ನೀಡಿಲ್ಲ.

2023ರ ವಿಶ್ವಕಪ್​​ನಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ

ರೋಹಿತ್ ನಾಯಕತ್ವದಲ್ಲಿ ಭಾರತ ತಂಡ 2023ರಲ್ಲಿ ಭಾರತದಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಅಜೇಯ 10 ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿತ್ತು. ರೋಹಿತ್ ಶರ್ಮಾ 11 ಪಂದ್ಯಗಳಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿದಂತೆ 597 ರನ್ ಬಾರಿಸಿದ್ದರು ಅವರ ಪ್ರಭಾವಶಾಲಿ ಅಂಕಿಅಂಶಗಳನ್ನು ಗಮನಿಸಿದರೆ, ಬಿಸಿಸಿಐ ಶರ್ಮಾ ಅವರಿಗೆ ಟಿ 20 ಪಂದ್ಯಗಳಲ್ಲಿ ನಾಯಕತ್ವ ನೀಡುವುದು ಬಹುತೇಕ ಖಚಿತ.

ಇದನ್ನೂ ಓದಿ : Virat kohli : ಸಿಹಿ ಮಾವಿನ ಹಣ್ಣಿನ ಕತೆ ಕೆದಕಿದ ನವಿನ್ ಉಲ್ ಹಕ್​

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೆಸ್ಟ್ ಪಂದ್ಯಗಳಿಗೆ ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ. ಟಿ 20 ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ಕೆಎಲ್ ರಾಹುಲ್ ಏಕದಿನ ಪಂದ್ಯಗಳಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ವೈಟ್ ಬಾಲ್ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಕೊಹ್ಲಿಯೂ ಅವರ ದಾರಿಯನ್ನೇ ಹಿಡಿದಿದ್ದಾರೆ. ಡಿಸೆಂಬರ್ 10ರಿಂದ ಆರಂಭವಾಗಲಿರುವ ಈ ಪ್ರವಾಸದಲ್ಲಿ 3 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳು ನಡೆಯಲಿವೆ.

Exit mobile version