ಮುಂಬಯಿ: ಟೀಮ್ ಇಂಡಿಯಾ(Team India) ನಾಯಕ ರೋಹಿತ್ ಶರ್ಮ ಕೊರೊನಾ ಸೋಂಕು ತಗುಲಿದೆ. ಆತಿಥೇಯ ಇಂಗ್ಲೆಂಡ್ ವಿರುದ್ಧ ಮರು ಸಂಘಟಿಸಿರುವ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್‌ಗೆ ತೆರಳಿರುವ ಅವರು ಅಭ್ಯಾಸ ಪಂದ್ಯದಲ್ಲಿ ನಿರತರಾಗಿರುವ ನಡುವೆ ಸೋಂಕಿಗೆ ಒಳಗಾಗಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (bcci) ಈ ಕುರಿತು ಟ್ವೀಟ್ ಮೂಲಕ ಪ್ರಕಟಣೆ ಹೊರಡಿಸಿದೆ. “team India ನಾಯಕ ರೋಹಿತ್ ಶರ್ಮ ಅವರಿಗೆ ಶನಿವಾರ ನಡೆಸಿದ rapid antigen test ಟೆಸ್ಟ್‌ನಲ್ಲಿ ಪಾಸಿಟಿವ್ ವರದಿ ಬಂದಿದೆ. ತಕ್ಷಣ ಅವರನ್ನು ಟೀಮ್ ಇಂಡಿಯಾದ ಹೋಟೆಲ್‌ನಲ್ಲಿ ಐಸೋಲೇಷನ್‌ನಲ್ಲಿ ಇಡಲಾಗಿದೆ. ತಂಡದ ವೈದ್ಯಕೀಯ ತಂಡ ಅವರ ಮೇಲೆ ನಿಗಾ ವಹಿಸಿದೆ,” ಎಂದು ಹೇಳಿದೆ.
ಜುಲೈ ೧ರಿಂದ ಆರಂಭವಾಗಲಿರುವ ಏಕೈಕ ಟೆಸ್ಟ್ ತಂಡದ ಭಾಗವಾದ ಲೀಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮ ಪಾಲ್ಗೊಂಡಿದ್ದರು. ಅವರು ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರೆ ಎರಡನೇ ಇನಿಂಗ್ಸ್‌ನಲ್ಲಿ ಆಡಲು ಇಳಿದಿರಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಅವರು ೨೫ ರನ್ ಬಾರಿಸಿದ್ದರು.
ಕಳೆದ ವರ್ಷ ಆರಂಭಗೊಂಡಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳು ಮುಕ್ತಾಯಗೊಂಡಿವೆ. ಆ ವೇಳೆ ಭಾರತ ತಂಡದ ಕೆಲವು ಆಟಗಾರರಿಗೆ ಸೋಂಕು ತಗುಲಿದ್ದ ಕಾರಣ ಸರಣಿ ಏಕಾಏಕಿ ಸ್ಥಗಿತಗೊಂಡಿತ್ತು. ಈ ವೇಳೆ ಭಾರತ ೨-೧ ಮುನ್ನಡೆ ಪಡೆದುಕೊಂಡಿತ್ತು. ಉಳಿದಿರುವ ಒಂದು ಪಂದ್ಯ ಜುಲೈ ೧ರಿಂದ ಆರಂಭವಾಗಲಿದೆ. ಒಂದು ವೇಳೆ ಈ ಪಂದ್ಯಕ್ಕೆ ಮುನ್ನ ರೋಹಿತ್ ಶರ್ಮ ಸೋಂಕಿನಿಂದ ಮುಕ್ತಗೊಂಡು ಆಡಿದರೆ, ವಿದೇಶಿ ನೆಲದಲ್ಲಿ ಮೊದಲ ಬಾರಿ ನಾಯಕತ್ವ ವಹಿಸಿಕೊಂಡಂತಾಗುತ್ತದೆ.
ಟೆಸ್ಟ್ ಮ್ಯಾಚ್ ಮುಗಿದ ಬಳಿಕ ಇಂಗ್ಲೆಂಡ್ ವಿರುದ್ಧ ಮೂರು ಟೆ೨೦ ಪಂದ್ಯಗಳ ಸರಣಿಯಲ್ಲಿ ಭಾರತ ಪಾಲ್ಗೊಳ್ಳಲಿದೆ.
ವಿರಾಟ್ ಕೊಹ್ಲಿಗೂ ಸೋಂಕು ತಗುಲಿತ್ತು
ಕೆಲವು ದಿನಗಳ ಹಿಂದೆ ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರು ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದರಿಂದ ಸೋಂಕು ತಗುಲಿತ್ತು ಎಂದು ಹೇಳಲಾಗಿದೆ. ಈ ವೇಳೆ ಆಟಗಾರರಿಗೆ ಬಿಸಿಸಿಐ ಅನಿಯಂತ್ರಿತ ಪ್ರವಾಸ ಕೈಗೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ ಎಂಬುದಾಗಿಯೂ ವರದಿಯಾಗಿತ್ತು.
ಇದನ್ನೂ ಓದಿ: ಟೆಸ್ಟ್ ಪಂದ್ಯಕ್ಕೆ covid-19 ಕಾಟ: ವಿರಾಟ್ ಕೊಹ್ಲಿಗೂ ಕೊರೊನಾ