ಬೆಂಗಳೂರು: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 14) ನಡೆಯಲಿರುವ ಸಿಎಸ್ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ (Rohit Sharma) ಮುಂಬೈ ಇಂಡಿಯನ್ಸ್ ತಂಡದ ಬಸ್ ಡ್ರೈವರ್ ಆಗಿ ಮಾರ್ಪಟ್ಟರು. ಐಪಿಎಲ್ನಲ್ಲಿ ಅತ್ಯಂತ ಜಿದ್ದಾಜಿದ್ದಿನ ಸ್ಪರ್ಧೆ ಎಂದೂ ಕರೆಯಲ್ಪಡುವ ಋತುವಿನ ಅತಿದೊಡ್ಡ ಮುಖಾಮುಖಿಗೆ ಸಜ್ಜಾಗುತ್ತಿರುವ ನಡುವೆಯೂ ಮುಂಬಯಿ ಆಟಗಾರರು ಹೆಚ್ಚು ತಮಾಷೆಯಲ್ಲಿದ್ದಂತೆ ಕಂಡು ಬಂತು. ಅಂತೆಯೇ ಮಾಜಿ ನಾಯಕ ರೋಹಿತ್ ಶರ್ಮಾ ಟೀಮ್ ಬಸ್ ಅನ್ನೇ ಚಲಾಯಿಸಿದ ಪ್ರಸಂಗ ನಡೆಯಿತು. ಈ ಮೂಲಕ ಅವರು, ನಾ ಡ್ರೈವರ ಎಂಬ ಹಾಡನ್ನು ನೆನಪಿಸಿಕೊಟ್ಟರು.
Aaj gaadi tera bhai chalayega vibes 😂pic.twitter.com/g7YSF8JuLA
— R A T N I S H (@LoyalSachinFan) April 13, 2024
ವೈರಲ್ ಆಗಿರುವ ವೀಡಿಯೊದಲ್ಲಿ, ರೋಹಿತ್ ತಂಡದ ಬಸ್ಸಿನ ಚಾಲಕ ನ ಸೀಟಿನಲ್ಲಿ ಕುಳಿತಿರುವುದು ಕಂಡು ಬಂತು. ಮುಂಬಯಿ ತಂಡದ ಬಸ್ ಕಡೆಗೆ ಕೈ ಬೀಸುತ್ತಿದ್ದ ಅಭಿಮಾನಿಗಳು ರೋಹಿತ್ ಡ್ರೈವರ್ ಸೀಟಿನಲ್ಲಿ ಕುಳಿತಿರುವ ಅಪರೂಪದ ದೃಶ್ಯವನ್ನು ನೋಡಿದರು. ಅವರು ಹುಚ್ಚರಾದರು ಮತ್ತು ಸಂತೋಷದಿಂದ ಕೂಗಿದರು. ರೋಹಿತ್ ಕೂಡ ಅವರೆಲ್ಲರ ಚಿತ್ರವನ್ನು ಕ್ಲಿಕ್ ಮಾಡಿದರು. ರೋಹಿತ್ ಅವರನ್ನು ಬಸ್ ಚಾಲಕನಾಗಿ ನೋಡಿದ ನಂತರ ಅವರ ತಂಡದ ಸದಸ್ಯರು ಸಹ ಖಷಿಯಲ್ಲಿ ಭಾಗಿಯಾದರು. ಉಳಿದ ಆಟಗಾರರು ನಕ್ಕು ರೋಹಿತ್ ಅವರ ವೀಡಿಯೊವನ್ನು ಸೆರೆಹಿಡಿದರು. ತಂಡವು ಅಭ್ಯಾಸದಿಂದ ಹೋಟೆಲ್ಗೆ ಹೊರಡುವ ಮೊದಲು ಈ ದೃಶ್ಯ ಕಂಡು ಬಂದಿದೆ.
ಡ್ರೈವಿಂಗ್ ಇಷ್ಟ
ಇದಕ್ಕೂ ಮುನ್ನ ರೋಹಿತ್ ತಮ್ಮ ರೇಂಜ್ ರೋವರ್ ಕಾರಿನಲ್ಲಿ ವಾಂಖೆಡೆ ಕ್ರೀಡಾಂಗಣಕ್ಕೆ ಹಲವು ಬಾರಿ ಬಂದಿದ್ದರು. ಅದಕ್ಕಾಗಿ ಅವರು ತಂಡದ ಬಸ್ ಅನ್ನು ತ್ಯಜಿಸಿದ್ದರು. ಐಷಾರಾಮಿ ಕಾರಿನ ಅತ್ಯುತ್ತಮ ಭಾಗವೆಂದರೆ ನಂಬರ್ ಪ್ಲೇಟ್, ಅದು 0264 ಅನ್ನು ಸಂಖ್ಯೆಯಾಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ದ್ವಿಶತಕ ಬಾರಿಸಿದ್ದ ವೇಳೆ ಅವರ ಸ್ಕೋರ್ 264. ಅದೇ ಸಂಖ್ಯೆಯನ್ನು ಕಾರಿಗೂ ಇಟ್ಟಿದ್ದಾರೆ.
ಇದನ್ನೂ ಓದಿ: Dipendra Singh Airee : ಒಂದು ಓವರ್ನ ಆರು ಎಸೆತಕ್ಕೆ 6 ಸಿಕ್ಸರ್ ಬಾರಿಸಿದ ನೇಪಾಳದ ಬ್ಯಾಟರ್; ಇಲ್ಲಿದೆ ವಿಡಿಯೊ
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಸಹ ಮಾಲೀಕ ಆಕಾಶ್ ಅಂಬಾನಿ ವಾಂಖೆಡೆ ಕ್ರೀಡಾಂಗಣದ ಬಳಿ ರೋಹಿತ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆಕಾಶ್ ಅಲ್ಟ್ರಾ-ಐಷಾರಾಮಿ ಕಾರನ್ನು ಓಡಿಸುತ್ತಿದ್ದಾಗ ಮತ್ತು ರೋಹಿತ್ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದರು. ಅವರಿಬ್ಬರೂ ಮುಂಬೈನ ಬೀದಿಗಳಲ್ಲಿ ತಿರುಗಾಡಿದರು.
ಈ ಬಾರಿಯೂ ರೋಹಿತ್ ಇನ್ನೂ ತಂಡದ ಬಸ್ ನಲ್ಲಿ ಕುಳಿತುಕೊಳ್ಳಲು ಮುಂದಾಗಲಿಲ್ಲ. ಅವಉ ಬಸ್ ಓಡಿಸಲು ಮುಂದಾದರು.