ಬೆಂಗಳೂರು: ಮೊಹಾಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆದ್ದಿರುವ ಭಾರತ ತಂಡದ ಆಟಗಾರರು (Team India) ಎರಡನೇ ಪಂದ್ಯಕ್ಕಾಗಿ ಶನಿವಾರ ಇಂದೋರ್ಗೆ ಬಂದಿದ್ದಾರೆ. ಭಾನುವಾರ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡನೇ ಟಿ 20 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಲಿದ್ದು, ಭಾರತ ಗೆದ್ದರೆ ಸರಣಿ ಕೈವಶವಾಗಿದೆ. ಅಫಘಾನಿಸ್ತಾನ ಗೆದ್ದರೆ ಸರಣಿ ನಿರ್ಣಯ ಮೂರನೇ ಪಂದ್ಯದಲ್ಲಿ ಆಗಲಿದೆ.
Rohit Sharma and Virat Kohli arrived Indore along with Team India for 2nd T20I.#RohitSharma #ViratKohli #T20 #RahulDravid #TeamIndia #BCCI #INDvAFG #INDvsAFG #AFGvIND #AFGvsIND #T20I #T20ISeries #Indore pic.twitter.com/DIsMNoHpqh
— sdn (@sdn7_) January 13, 2024
ಬಹುನಿರೀಕ್ಷಿತ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಇಂದೋರ್ಗೆ ಬಂದಿಳಿದಿದೆ. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿರುವ ವಿಡಿಯೊ ವೈರಲ್ ಆಗಿದೆ. ನಿಷ್ಠಾವಂತ ಅಭಿಮಾನಿಯೊಬ್ಬರು ತಂಡದ ಆಗಮನದ ಬಗ್ಗೆ ವಿಶೇಷ ನೋಟ ಹಂಚಿಕೊಂಡಿದ್ದಾರೆ. ಕೊಹ್ಲಿ ಮತ್ತು ಶರ್ಮಾ ಅವರ ಆಗಮನದ ಖುಷಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Sachin Tendulkar : ಮುದ್ದೇನಹಳ್ಳಿಯಲ್ಲಿ ಕ್ರಿಕೆಟ್ ಆಡಲಿದ್ದಾರೆ ಸಚಿನ್, ಯುವರಾಜ್ ಸಿಂಗ್
ರೋಹಿತ್ ಶರ್ಮಾ ಎಳನೀರು ಕುಡಿದುಕೊಂಡು ಹೊರಗೆ ಬರುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ವಿರಾಟ್ ಕೊಹ್ಲಿ ತಮ್ಮ ಐಷಾರಾಮಿ ಮರ್ಸಿಡಿಸ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ರೋಹಿತ್ ಮಾತ್ರವಲ್ಲದೆ ತಂಡದ ಇತರ ಆಟಗಾರರೂ ಎಳೆ ನೀರು ಕುಡಿದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಯಾಕೆಂದರೆ ಟೀಮ್ ಇಂಡಿಯಾದ ಆಟಗಾರರನ್ನು ಸ್ವಾಗತಿಸಿದ ಹೋಟೆಲ್ ಸಿಬ್ಬಂದಿ ಎಲ್ಲರಿಗೂ ತಿಲಕವನ್ನಿಟ್ಟು ಎಳನೀರನ್ನು ನೀಡಿದ್ದಾರೆ. ಹೀಗಾಗಿ ಅವರೆಲ್ಲರೂ ಎಳನೀರು ಕುಡಿದಿದ್ದಾರೆ.
ಅಭಿಮಾನದ ಸ್ವಾಗತ
ವಿಮಾನ ನಿಲ್ದಾಣದಲ್ಲಿ ನಡೆದ ಆಟಗಾರರಿಗೆ ಆತ್ಮೀಯ ಸ್ವಾಗತ ದೊರಕಿದೆ. ಸುತ್ತುವರೆದಿದ್ದ ಅಭಿಮಾನಿಗಳು ಆಟಗಾರರ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಹಬ್ಬದ ವಾತಾವರಣವು ಇಂದೋರ್ ನಲ್ಲಿ ಹೆಚ್ಚಿತ್ತು. ಎರಡನೇ ಟಿ20 ಪಂದ್ಯ ಜನವರಿ 14ರಂದು ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ, ರೋಹಿತ್ ಶರ್ಮಾ ಮತ್ತು ಟೀಮ್ ಇಂಡಿಯಾ 2024 ರಲ್ಲಿ ಮೊದಲ ಸರಣಿ ಗೆಲುವು ಸಾಧಿಸಲಿದೆ.
ಹೋಳ್ಕರ್ ಸ್ಟೇಡಿಯಂನ ಪಿಚ್ ರಿಪೋರ್ಟ್
ಹೋಳ್ಕರ್ ಸ್ಟೇಡಿಯಂನ(Holkar Stadium) ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್ ಸ್ನೇಹಿಯಾಗಿದ್ದು ಬ್ಯಾಟರ್ಗಳಿಗೆ ಇದು ಸ್ವರ್ಗವಾಗಿದೆ. ಹೀಗಾಗಿ ಬೃಹತ್ ಮೊತ್ತದ ಪಂದ್ಯ ಎಂದು ನಿರೀಕ್ಷೆ ಮಾಡಬಹುದು. ಔಟ್‌ಫೀಲ್ಡ್ ಸಾಕಷ್ಟು ವೇಗವಾಗಿದೆ. ಆದ್ದರಿಂದ ಬ್ಯಾಟರ್‌ಗಳು ತಮ್ಮ ಹೊಡೆತಗಳಿಗೆ ಸಂಪೂರ್ಣ ಪ್ರತಿಫಲವನ್ನು ಪಡೆಯಲಿದ್ದಾರೆ. ಗೆಲುವು ಸಾಧಿಸಬೇಕೆಂದರೆ 200 ರನ್ ಅತ್ಯಗತ್ಯ. ಈ ಮೈದಾನದಲ್ಲಿ ಸರಾಸರಿ ಮೊದಲ ಇನಿಂಗ್ಸ್ ಒಟ್ಟು 209 ಆಗಿದೆ.
ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೆ 3 ಟಿ20 ಪಂದ್ಯಗಳು ನಡೆದಿವೆ. ಮೊದಲು ಬ್ಯಾಟ್ ಮಾಡಿದ ತಂಡ ಎರಡು ಬಾರಿ ಗೆದ್ದರೆ, ಚೇಸಿಂಗ್ ನಡೆಸಿದ ತಂಡ ಒಮ್ಮೆ ಮಾತ್ರ ಗೆದ್ದಿದೆ. ಹೀಗಾಗಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹಚ್ಚು ಎನ್ನಲಡ್ಡಿಯಿಲ್ಲ.
ಹವಾಮಾನ ವರದಿ
ಪಂದ್ಯ ನಡೆಯುವ ಭಾನುವಾರದಂದು (ಜನವರಿ 14) ಇಂದೋರ್‌ನಲ್ಲಿ ಮಳೆ ಸಾಧ್ಯತೆ ಇಲ್ಲ. ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾತ್ರಿಯ ವೇಳೆ ಕೊಂಚ ಇಬ್ಬನಿ ಕಾಡ ಇರಲಿದೆ.
ಉಭಯ ತಂಡಗಳು ಇದುವರೆಗೆ ಟಿ20 ಕ್ರಿಕೆಟ್ನಲ್ಲಿ ಒಟ್ಟು 6 ಬಾರಿ ಮುಖಾಮುಖಿಯಾಗಿವೆ. ಭಾರತ 5 ಪಂದ್ಯಗಳನ್ನು ಗೆದ್ದು ಅಜೇಯ ದಾಖಲೆ ಹೊಂದಿದೆ. ಇದರಲ್ಲಿ ಒಂದು ಗೆಲುವು ಈ ಸರಣಿಯಲ್ಲಿ ದಾಖಲಾದದ್ದು. ಒಂದು ಪಂದ್ಯ ರದ್ದುಗೊಂಡಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠ ಎನ್ನಲಡ್ಡಿಯಿಲ್ಲ.