Site icon Vistara News

Rohit Sharma : ಟೆಸ್ಟ್ ಕ್ರಿಕೆಟ್​ನ ಪ್ರಾಮುಖ್ಯತೆ ಕುರಿತು ಕೊಹ್ಲಿ, ರೋಹಿತ್ ಮಾತನಾಡಿದ ವಿಡಿಯೊ ಇಲ್ಲಿದೆ

Rohit Sharma

ಬೆಂಗಳೂರು: 2023ರ ಏಕದಿನ ವಿಶ್ವಕಪ್ ಫೈನಲ್​​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಆಘಾತಕಾರಿ ಸೋಲು ಕಂಡಿತ್ತು. ಇದು ಭಾರತೀ ಕ್ರಿಕೆಟ್​ ಕ್ಷೇತ್ರಕ್ಕೆ ಅತ್ಯಂತ ಬೇಸರದ ದಿನ. ಪ್ರಮುಖವಾಗಿ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಅವರಂಥ ಹಿರಿಯ ಆಟಗಾರರಿಗೆ ಹೃದಯ ವಿದ್ರಾವಕ ಸಂದರ್ಭವಾಗಿದೆ. ಅದಾದ ಬಳಿಕ ಅವರಿಬ್ಬರು ಕ್ರಿಕೆಟ್​ನಿಂದ ಬಹುತೇಕ ವಿಶ್ರಾಂತಿ ಪಡೆದಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ.

2023 ರ ಡಿಸೆಂಬರ್ 26 ರಿಂದ ಪ್ರಾರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಉತ್ತಮವಾಗಿ ತಯಾರಿ ನಡೆಸಲು ನಾಯಕ ರೋಹಿತ್ ಶರ್ಮಾ ಮತ್ತು ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್ ಬಾಲ್ ಲೆಗ್ ಅನ್ನು ತಪ್ಪಿಸಿಕೊಂಡಿದ್ದರು. ಈ ಅವಧಿಯಲ್ಲಿ ಅವರು ಕುಟುಂಬದೊಂದಿಗೆ ಸಮಯ ಕಳೆದಿದ್ದರು ಕೂಡ. ಈ ಮೂಲಕ ವಿಶ್ವ ಕಪ್​ ಫೈನಲ್ ಸೋಲಿನ ಬಳಿಕ ಚೇತರಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಬಿಳಿ ಚೆಂಡಿನ ಚರಣ ಈ ವಾರದ ಆರಂಭದಲ್ಲಿ ಕೊನೆಗೊಂಡಿದೆ. ರಾಹುಲ್​ ನೇತೃತ್ವದ ಭಾರತವು ಏಕದಿನ ಸರಣಿಯನ್ನು ಗೆದ್ದರೆ, ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡ ಟಿ20 ಕ್ರಿಕೆಟ್​ನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇದೀಗ ಟೀಂ ಇಂಡಿಯಾ ಮುಂದೆ ದೊಡ್ಡ ಸವಾಲು ಕಾದಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯು ಬಾಕ್ಸಿಂಗ್ ದಿನದಂದು ಅಂದರೆ ಡಿಸೆಂಬರ್ 26, 2023 ರಿಂದ ಪ್ರಾರಂಭವಾಗಲಿದೆ.

ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಅವರು ಇಂಟ್ರಾ ಸ್ಕ್ವಾಡ್​ ಪಂದ್ಯದಲ್ಲಿ ಭಾಗಿಯಾಗಿದ್ದಾರೆ.

ರೋಹಿತ್ ಶರ್ಮಾ ಸಿದ್ಧ

ದಕ್ಷಿಣ ಆಫ್ರಿಕಾದ ನೆಲದಲ್ಲಿ ಎದುರಿಸಬಹುದಾದ ಪ್ರಬಲ ಸವಾಲಿನ ಬಗ್ಗೆ ತಮ್ಮ ಆಲೋಚನೆಗಳನ್ನು ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಹಂಚಿಕೊಂಡಿದ್ದಾರೆ. ಅವರು ಸ್ಟಾರ್ ಸ್ಪೋರ್ಟ್ಸ್ ಪ್ರಕಟಿಸಿರುವ ವಿಡಿಯೊದಲ್ಲಿ ಅವರು ಟೆಸ್ಟ್ ಸ್ವರೂಪದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ ಎಂದರೆ ಏನು ಎಂದು ವಿವರಿಸಲು ರೋಹಿತ್ ಅವರನ್ನು ಕೇಳಿಕೊಂಡಾಗ, ಇದು ವಿಶಿಷ್ಟ ಸ್ವರೂಪ. ಟೆಸ್ಟ್ ಕ್ರಿಕೆಟ್ ಅವರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಅವರು ಹೇಳಿದರು.

ಒಬ್ಬ ಕ್ರೀಡಾಪಟುವಾಗಿ ಯಾವಾಗಲೂ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಆಟಗಾರರು ಸತತ ಐದು ದಿನಗಳ ಕಾಲ ಒಂದೇ ರೀತಿಯ ಒತ್ತಡವನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ತಪ್ಪುಗಳನ್ನು ಮಾಡುವುದಕ್ಕೆ ಅವಕಾಶಗಳು ಕಡಿಮೆ ಎಂಬುದಾಗಿ ಅವರು ನುಡಿದಿದ್ದಾರೆ.

ಕೆಂಪು ಚೆಂಡಿನ ಪಂದ್ಯಗಳು ಒಬ್ಬ ವ್ಯಕ್ತಿಯಾಗಿ, ಕ್ರಿಕೆಟಿಗನಾಗಿ ಮತ್ತು ಕ್ರೀಡಾಪಟುವಾಗಿ ನಿಜವಾದ ಪರೀಕ್ಷೆಯಾಗಿದೆ ಎಂಬುದಾಗಿ ರೋಹಿತ್​ ಶರ್ಮಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: IPL 2024 Auction : ವಿಂಡೀಸ್ ಬೌಲರ್​ಗಾಗಿ 11.50 ಕೋಟಿ ರೂ. ಖರ್ಚು ಮಾಡಿದ ಆರ್​ಸಿಬಿ!

ವಿರಾಟ್​ ಕೊಹ್ಲಿ ಮಾತನಾಡಿ, ಟೆಸ್ಟ್​ ಮಾದರಿ ಕ್ರಿಕೆಟ್​ನ ಅಡಿಪಾಯ. ಇದು ಕ್ರಿಕೆಟ್​ನ ಇತಿಹಾಸ, ಸಂಸ್ಕೃತಿ ಹಾಗೂ ವೈಭವ ಎಂದು ಹೇಳಿದ್ದಾರೆ. ನಾಲ್ಕು ಅಥವಾ ಐದು ದಿನ ನಡೆಯುವ ಸ್ಪರ್ಧೆಯಲ್ಲಿ ವೈಯುಕ್ತಿಕವಾಗಿ ಹಾಗೂ ತಂಡವಾಗಿ ಸಂತೃಪ್ತಿ ಹೊಂದಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ಟೆಸ್ಟ್ ಸ್ವರೂಪವು ಕ್ರಿಕೆಟ್ ಕ್ರೀಡೆಯ ಉತ್ತುಂಗವಾಗಿದೆ. ಪ್ರತಿ ವೃತ್ತಿಪರ ತಂಡವು ಕೆಂಪು ಚೆಂಡಿನ ಸ್ವರೂಪದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ಕನಸು ಕಾಣುತ್ತದೆ. ಭಾರತ ತಂಡವು ಇಲ್ಲಿಯವರೆಗೆ ನಡೆದ ಪ್ರತಿಯೊಂದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್​​ ಪ್ರವೇಶಿಸಿದೆ. ತಂಡವು ಈ ಮಾದರಿಯಲ್ಲಿ ಅತ್ಯುತ್ತಮ ಶ್ರೇಯಾಂಕವನ್ನು ಪಡೆದುಕೊಂಡಿದೆ.

ಮೆನ್ ಇನ್ ಬ್ಲೂ ತಂಡದ ಟ್ರ್ಯಾಕ್ ರೆಕಾರ್ಡ್ ದಕ್ಷಿಣ ಆಫ್ರಿಕಾದಲ್ಲಿ ಅಷ್ಟು ಉತ್ತಮವಾಗಿಲ್ಲ. ಹೀಗಾಗಿ ಹಿರಿಯ ಗುಂಪು ಈ ಚಳಿಗಾಲದಲ್ಲಿ ಇತಿಹಾಸವನ್ನು ಬದಲಾಯಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗಿದೆ.

Exit mobile version