ನಾಗ್ಪುರ : ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಶುಕ್ರವಾರ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯದಲ್ಲಿ ಹೊಸ ವಿಶ್ವ ದಾಖಲೆ ಮಾಡಿದ್ದಾರೆ. ಅವರೀಗ ಟಿ೨೦ ಮಾದರಿಯಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಅವರನ್ನು ಹಿಂದಿಕ್ಕಿ ರೋಹಿತ್ ಈ ಸಾಧನೆ ಮಾಡಿದ್ದಾರೆ.
ರೋಹಿರ್ ಶರ್ಮ ಅವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಜೇಯ ೪೬ ರನ್ ಬಾರಿಸಿದ್ದರು. ಜೋಶ್ ಹೇಜಲ್‌ವುಡ್ ಎಸೆದ ಮೊದಲ ಓವರ್‌ನಲ್ಲಿ ಅವರು ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ವೇಳೆ ಟಿ೨೦ ಮಾದರಿಯಲ್ಲಿ ಅವರ ಒಟ್ಟಾರೆ ಸಿಕ್ಸರ್‌ಗಳ ಸಂಖ್ಯೆ ೧೭೪ ಆಯಿತು. ಅದಕ್ಕಿಂತ ಮೊದಲೇ ಅವರು ೧೭೩ ಸಿಕ್ಸರ್‌ಗಳನ್ನು ಬಾರಿಸಿದ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಅವರನ್ನು ಹಿಂದಿಕ್ಕಿದರು. ನ್ಯೂಜಿಲೆಂಡ್ ಆಟಗಾರನಿಗೆ ಈಗ ಎರಡನೇ ಸ್ಥಾನವಾದರೆ, ವಿಂಡೀಸ್ ದೈತ್ಯ ಕ್ರಿಸ್ ಗೇಲ್ (೧೨೪) ಮೂರನೇ ಸ್ಥಾನವಿದೆ. ರೋಹಿತ್ ಖಾತೆಯಲ್ಲೀಗ ೧೭೬ ಸಿಕ್ಸರ್‌ಗಳಿವೆ.
೧೦೪ ಸಿಕ್ಸರ್‌ಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ೧೦೦ ಪ್ಲಸ್ ಸಿಕ್ಸರ್‌ಗಳನ್ನು ಬಾರಿಸಿರುವ ಭಾರತದ ಇನ್ನೊಬ್ಬ ಬ್ಯಾಟರ್. ರೋಹಿತ್ ಶರ್ಮ ಅವರು ಟಿ೨೦ ಮಾದರಿಯಲ್ಲಿ ಒಟ್ಟಾರೆ ೩೫೦೦ಕ್ಕೂ ಅಧಿಕ ರನ್ ಬಾರಿಸಿದ್ದಾರೆ.
ಇದನ್ನು ಓದಿ | IND vs AUS | ರೋಹಿತ್ ಶರ್ಮ ಅಬ್ಬರ; ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ 6 ವಿಕೆಟ್ ಜಯ