ತಿರುವನಂತಪುರ : ದಕ್ಷಿಣ ಆಫ್ರಿಕಾ ವಿರುದ್ಧ ಟಿ೨೦ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ವಿಶ್ವ ಕಪ್‌ಗಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಮಾಡುವ ಮೊದಲು ಭಾರತ ತಂಡಕ್ಕೆ ಇದು ಕೊನೇ ಟಿ೨೦ ಸರಣಿಯಾಗಿದೆ. ಹೀಗಾಗಿ ಮೊದಲ ಪಂದ್ಯವನ್ನು ಗೆದ್ದ ಸರಣಿಯನ್ನು ವಶಪಡಿಸಿಕೊಳ್ಳುವುದು ರೋಹಿತ್ ಶರ್ಮ ಬಳಗದ ಗುರಿಯಾಗಿದೆ.
ಭಾರತ ತಂಡದಲ್ಲಿ ಗೆಲುವು ಬದಲಾವಣೆ ಮಾಡಲಾಗಿದ್ದು, ಜಸ್‌ಪ್ರಿತ್ ಬುಮ್ರಾ ಬದಲಿಗೆ ದೀಪಕ್ ಚಾಹರ್ ಅವಕಾಶ ಪಡೆದುಕೊಂಡಿದ್ದಾರೆ. ಚಹಲ್ ಬದಲಿಗೆ ಆರ್. ಅಶ್ವಿನ್ ತಂಡ ಪ್ರವೇಶಿಸಿದರೆ, ಅರ್ಶ್‌ದೀಪ್ ಸಿಂಗ್ ಆಡುವ ಬಳಗ ಸೇರಿಕೊಂಡಿದ್ದಾರೆ. ಜಸ್‌ಪ್ರಿತ್ ಬುಮ್ರಾ ಅವರು ಸ್ವಲ್ಪ ಪ್ರಮಾಣದ ನೋವಿನ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ರೋಹಿತ್ ಶರ್ಮ ಹೇಳಿದ್ದಾರೆ.
ಇಬ್ಬನಿ ಪರಿಣಾಮ ಪಂದ್ಯದ ಜಯವನ್ನು ನಿರ್ಧರಿಸುತ್ತದೆ. ಅರಂಭಿಕ ೫ರಿಂದ೬ ಓವರ್‌ಗಳಷ್ಟು ಸಮಯ ಪಿಚ್ ಬೌಲಿಂಗ್‌ಗೆ ನೆರವಾಗುತ್ತದೆ ಎಂದು ಟಾಸ್ ಗೆದ್ದ ರೋಹಿತ್ ಶರ್ಮ ಹೇಳಿದ್ದಾರೆ.
ಭಾರತ ಟಿ20 ತಂಡ:
ರೋಹಿತ್ ಶರ್ಮ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್ , ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಾಹರ್.
ದಕ್ಷಿಣ ಆಫ್ರಿಕಾ:
ತೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಚ್ ನೋರ್ಜೆ, ವೇಯ್ನ್ ಪರ್ನೆಲ್,ಡ್ವೇನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಿಲಿ ರೊಸೊ, ತಬ್ರೇಜ್ ಶಂಸಿ, ಟ್ರಿಸ್ಟಾನ್ ಸ್ಟಬ್ಸ್.