Site icon Vistara News

Rohit Sharma: ಮರಾಠಿಯಲ್ಲೇ ಮಾತನಾಡಿದ ರೋಹಿತ್​, ಸೂರ್ಯಕುಮಾರ್​; ವಿಡಿಯೊ ವೈರಲ್​

Rohit Sharma

Rohit Sharma: "Would've Dropped Suryakumar Yadav...": Rohit Sharma's Hilarious Take On World Cup Final Catch

ಮುಂಬಯಿ: ಟಿ20 ವಿಶ್ವಕಪ್(T20 World Cup) ವಿಜೇತ ತಂಡದ ಮುಂಬೈಯ ನಾಲ್ವರು ಆಟಗಾರರಾದ ಕಪ್ತಾನ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರನ್ನು ಶುಕ್ರವಾರ ಮಾಹಾರಾಷ್ಟ್ರ ವಿಧಾನ ಭವನದಲ್ಲಿ ಅಭಿನಂದಿಸಲಾಗಿತ್ತು. ಈ ವೇಳೆ ಸೂರ್ಯಕುಮಾರ್(Suryakumar Yadav)​ ಮತ್ತು ರೋಹಿತ್(Rohit Sharma)​ ಮರಾಠಿಯಲ್ಲಿ ಮಾತನಾಡಿದ ವಿಡಿಯೊ ವೈರಲ್​ ಆಗಿದೆ. ಅದರಲ್ಲೂ ರೋಹಿತ್​ ಅವರು ಸೂರ್ಯ ಹಿಡಿದ ಕ್ಯಾಚ್​ ಬಗ್ಗೆ ಹೇಳಿದ ಮಾತುಗಳನ್ನು ಕೇಳಿ ಮುಖ್ಯಮಂತ್ರಿ ಏಕನಾಥ್ ಶಿಂಧೆ(Maharashtra CM Eknath Shinde) ಸೇರಿ ವಿಧಾನ ಭವನದಲ್ಲಿ ಸೇರಿದ ಸದ್ಯಸ್ಯರೆಲ್ಲ ಜೋರಾಗಿ ನಕ್ಕ ಪ್ರಸಂಗ ಕೂಡ ನಡೆಯಿತು.

ಸನ್ಮಾನ ಸ್ವೀಕರಿಸಿದ ಬಳಿಕ ಮರಾಠಿಯಲ್ಲೇ ಮಾತನಾಡಿದ ರೋಹಿತ್​, 13 ವರ್ಷಗಳ ಬಳಿಕ ಭಾರತಕ್ಕೆ ಐಸಿಸಿ ಟ್ರೋಫಿಯೊಂದನ್ನು ಗೆದ್ದು ತಂದಿರುವುದು ನಮಗೆಲ್ಲ ಸಂತಸದ ವಿಚಾರ. 2013ರಲ್ಲಿ ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೆವು. ನನ್ನ ಸಹ ಆಟಗಾರರಾದ ಶಿವಂ ದುಬೆ, ಸೂರ್ಯ ಮತ್ತು ಯಶಸ್ವಿ ಜೈಸ್ವಾಲ್ ಮಾತ್ರವಲ್ಲದೆ ಭಾರತದ ಯಶಸ್ಸಿಗೆ ಕೊಡುಗೆ ನೀಡಿದ ಎಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಂತಹ ತಂಡ ಸಿಕ್ಕಿದ್ದು ನನ್ನ ಅದೃಷ್ಟ ಎಂದರು. ಇದಾದ ಬಳಿಕ ಸೂರ್ಯಕುಮಾರ್​ ಕ್ಯಾಚ್​ ಬಗ್ಗೆ ಮಾತನಾಡಿ, ‘ಚೆಂಡು ಸೂರ್ಯಕುಮಾರ್​ ಕೈಯಲ್ಲಿ ಕುಳಿತದ್ದು ಒಳ್ಳೆಯದಾಯಿತು. ಕ್ಯಾಚ್​ ಹಿಡಿಯದೇ ಇದಿದ್ದರೆ ನಾನು ಅವನನ್ನು ತಂಡದಿಂದ ಹೊರಗೆ ಕೂರಿಸುತ್ತಿದ್ದೆ’ ಎಂದು ಹೇಳಿದಾಗ ಸಂಪೂರ್ಣ ಸದನ ನಗೆಗಡಲಲ್ಲಿ ತೇಲಿತು. ಈ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ Suryakumar Yadav: ದಿಲ್ಲಿಯಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಸೂರ್ಯಕುಮಾರ್​ ಯಾದವ್​; ವಿಡಿಯೊ ವೈರಲ್​

ರೋಹಿತ್​ ಬಳಿಕ ಸೂರ್ಯಕುಮಾರ್​ ಯಾದವ್ ಕೂಡ ಮರಾಠಿಯಲ್ಲೇ ಮಾತನಾಡಿದರು. ಮಾತು ಶುರು ಮಾಡುವ ಮೊದಲೇ ಸಚಿವರು, ಶಾಸಕರು ಸೇರಿದಂತೆ ಸೆಂಟ್ರಲ್ ಹಾಲ್‌ನಲ್ಲಿದ್ದವರು ಕ್ಯಾಚ್​ ಬಗ್ಗೆ ಹೇಳಿ ಎಂದು ಜೋರಾಗಿ ಕೂಗಿದರು. ಈ ವೇಳೆ ಕ್ಯಾಚ್ ಬಸ್ಲಾ ಹತಾತ್ (ಕ್ಯಾಚ್ ನನ್ನ ಕೈಗೆ ಬಂದು ಕೂತಿತು) ಎಂದು ನಗುತ್ತಲೇ ತಾವು ಯಾವ ರೀತಿ ಕ್ಯಾಚ್​ ಹಿಡಿದೆ ಎನ್ನುವುದನ್ನು ನಟನೆಯ ಮೂಲಕ ತೋರಿಸಿದರು. ಬಳಿಕ ತಮ್ಮ ವಿಶ್ವಕಪ್​ ಅನುಭವ ಹಂಚಿಕೊಂಡು ಸನ್ಮಾನ ಮಾಡಿದ ಮುಖ್ಯಮಂತ್ರಿಗಳಿಗೆ ಹಾಗೂ ನೆರದಿದ್ದ ಎಲ್ಲ ಸಚಿವರಿಗೂ ಧನ್ಯವಾದ ತಿಳಿಸಿದರು.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಸೂರ್ಯ ಈ ಕ್ಯಾಚ್​ ಪಡೆಯದೇ ಹೋಗಿದ್ದರೆ ಭಾರತ ಪಂದ್ಯ ಸೋಲುವ ಸಾಧ್ಯತೆ ಇತ್ತು.

Exit mobile version