ಚಂಡೀಗಢ: ಮುಂಬೈ ಇಂಡಿಯನ್ಸ್(Mumbai Indians) ತಂಡ ಇಂದು ನಡೆಯುವ ಐಪಿಎಲ್(IPL 2024) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ಆಡಲಿದೆ. ಈ ಪಂದ್ಯ ರೋಹಿತ್ ಶರ್ಮ(Rohit Sharma) ಅವರಿಗೆ ಸ್ಮರಣೀಯ ಪಂದ್ಯವಾಗಿದೆ. ಪಂಜಾಬ್ ವಿರುದ್ಧ ಕಣಕ್ಕಿಳಿಯುವ ಮೂಲಕ ರೋಹಿತ್ ಐಪಿಎಲ್ನಲ್ಲಿ 250ನೇ ಪಂದ್ಯವನ್ನಾಡಿದ 2ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅತ್ಯಧಿಕ ಐಪಿಎಲ್ ಪಂದ್ಯಗಳನ್ನಾಡಿದ ಆಟಗಾರ. ಧೋನಿ ಇದುವರೆಗೆ 256* ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಆರ್ಸಿಬಿ ತಂಡದ ದಿನೇಶ್ ಕಾರ್ತಿಕ್ 249 ಪಂದ್ಯ ಆಡಿ ಮೂರನೇ ಸ್ಥಾನದಲ್ಲಿದ್ದಾರೆ. ಮುಂದಿನ ಪಂದ್ಯ ಅವರಿಗೂ 250ನೇ ಪಂದ್ಯವಾಗಲಿದೆ. ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಒಟ್ಟು 244 ಪಂದ್ಯಗಳನ್ನಾಡಿದ್ದಾರೆ. ಇನ್ನು 6 ಪಂದ್ಯ ಆಡಿದರೆ ಅವರು ಕೂಡ 250 ಪಂದ್ಯಗಳ ಕ್ಲಬ್ಗೆ ಸೇರ್ಪಡೆಗೊಳ್ಳಲಿದ್ದಾರೆ.
Rohit Sharma will be playing his 250th match today in IPL, he becomes the 2nd player to achieve the milestone, An icon in the league, changed the legacy of Mumbai Indians ⭐
— Johns. (@CricCrazyJohns) April 18, 2024
– The Rohit Sharma Day in IPL….!!!! pic.twitter.com/DAFV5OpKV0
ರೋಹಿತ್ ಅವರು ಡೆಕ್ಕನ್ ಚಾರ್ಜಸ್ ಪರ ಆಡುವ ಮೂಲಕ ಐಪಿಎಲ್ ಪದಾರ್ಪಣೆ ಮಾಡಿದರು. ಈ ತಂಡ ತೊರೆದ ವಳಿಕ ಇದುವರೆಗೂ ಮುಂಬೈ ಇಂಡಿಯನ್ಸ್ ಪರವೇ ಆಡುತ್ತಿದ್ದಾರೆ. ಇವರ ನಾಯಕತ್ವದಲ್ಲಿ ಮುಂಬೈ ಒಟ್ಟು 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಒಟ್ಟು 6 ಐಪಿಎಲ್ ಟ್ರೋಫಿ ಗೆದ್ದ ಆಟಗಾರನಾಗಿದ್ದಾರೆ. ಡೆಕ್ಕನ್ ಪರವೂ ಆಟಗಾರನಾಗಿ ಒಂದು ಕಪ್ ಗೆದ್ದಿದ್ದಾರೆ. 249 ಐಪಿಎಲ್ ಪಂದ್ಯಗಳಲ್ಲಿ 6472 ರನ್, 15 ವಿಕೆಟ್ ಕಡೆವಿದ್ದಾರೆ. ಒಂದು ಬಾರಿ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದಾರೆ. 2 ಶತಕ ಹಾಗೂ 42 ಅರ್ಧಶತಕ ಕೂಡ ಬಾರಿಸಿದ್ದಾರೆ.
ಇದನ್ನೂ ಓದಿ IPL 2024 POINTS TABLE: ಗುಜರಾತ್ ಮಣಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಜಿಗಿತ ಕಂಡ ಡೆಲ್ಲಿ
ಪಂಜಾಬ್ vs ಮುಂಬೈ
ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Maharaja Yadavindra Singh International Cricket Stadium) ಮುಲ್ಲನ್ಪುರ್ನಲ್ಲಿ(Mullanpur) ಇಂದು ಮುಂಬೈ ಮತ್ತು ಪಂಜಾಬ್ ಮುಖಾಮುಖಿಯಾಗಲಿವೆ. ಅದೃಷ್ಟದ ವಿಚಾರದಲ್ಲಿ ಉಭಯ ತಂಡಗಳು ಒಂದೇ ದೋಣಿಯ ಪಯಣಿಗರು. ಪಂಜಾಬ್ 7 ನೇ ಸ್ಥಾನದಲ್ಲಿದ್ದರೆ, ಮುಂಬೈ 8 ನೇ ಸ್ಥಾನದಲ್ಲಿದೆ. ಉಭಯ ತಂಡಗಳು 6 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆದ್ದು 4ರಲ್ಲಿ ಸೋಲು ಕಂಡಿವೆ. ಎರಡೂ ತಂಡಗಳು ತಲಾ 4 ಅಂಕಗಳನ್ನು ಹೊಂದಿದೆ. ನಿವ್ವಳ ರನ್ ರೇಟ್ ಆಧಾರದಲ್ಲಿ ಮುಂದಿರುವ ಕಾರಣ ಪಂಜಾಬ್ ತಂಡ ಮುಂಬೈಗಿಂತ ಒಂದು ಸ್ಥಾನ ಮೇಲಿದೆ. ಅಂಕಪಟ್ಟಿಯಲ್ಲಿ ಮೇಲೇರಬೇಕಾದರೆ ನಾಳಿನ ಪಂದ್ಯದಲ್ಲಿ ದೊಡ್ಡ ಗೆಲುವು ಅತ್ಯಗತ್ಯ. ದೊಡ್ಡ ಅಂತರದಿಂದ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆರುವ ಅವಕಾಶವಿದೆ.
🎵 𝐵ℎ𝑜𝑙𝑖 𝑠𝑖 𝑠𝑢𝑟𝑎𝑡, 𝑎𝑎𝑛𝑘ℎ𝑜𝑛 𝑚𝑒𝑖𝑛 𝑚𝑎𝑠𝑡𝑖… 🎵
— Mumbai Indians (@mipaltan) April 17, 2024
Jab Hitman met 20-year-old Ro today 👀#MumbaiMeriJaan #MumbaiIndians | @ImRo45 pic.twitter.com/cFH4cf2tJK
ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ತಮ್ಮ ತವರು ಅಂಗಳದಲ್ಲಿ ಸೋತಿದ್ದವು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಹಾರ್ದಿಕ್ ಪಡೆ ತನ್ನ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20 ರನ್‌ಗಳಿಂದ ಸೋತಿತ್ತು. ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್ ವಿರುದ್ಧ ಥ್ರಿಲ್ಲರ್ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಸೋತಿತ್ತು.