ವಿಶಾಖಪಟ್ಟಣಂ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರು ಹಲವು ಬಾರಿ ಕುಲ್ದೀಪ್ ಯಾದವ್(Kuldeep Yadav) ಮೇಲೆ ಮೈದಾನದಲ್ಲೇ ರೇಗಾಡಿದ್ದ ವಿಡಿಯೊ ವೈರಲ್(viral video) ಆಗಿತ್ತು. ಇದೀಗ ಮತ್ತೆ ಕುಲ್ದೀಪ್ಗೆ ಗುರಾಯಿಸಿದ ವಿಡಿಯೊ ವೈರಲ್ ಆಗಿದೆ. ಇಂಗ್ಲೆಂಡ್(India vs England 2nd Test) ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್ನ ಮೂರನೇ ದಿನ ಈ ಘಟನೆ ನಡೆದಿದೆ.
ಭಾರತ ನೀಡಿದ 399 ರನ್ಗಳ ಗುರಿ ಬೆನ್ನಟ್ಟುತ್ತಿರುವ ಇಂಗ್ಲೆಂಡ್ ಸದ್ಯ 1 ವಿಕೆಟ್ ಕಳೆದುಕೊಂಡು 67 ರನ್ಗಳಿಸಿದೆ. ಜಾಕ್ ಕ್ರಾಲಿ 29 ಮತ್ತು ರೆಹಾನ್ ಅಹ್ಮದ್ 9 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಓವರ್ನಲ್ಲಿ ಜಾಕ್ ಕ್ರಾಲಿ ಅವರು ಡಿಫೆನ್ಸ್ ಮಾಡಲು ಹೋದ ವೇಳೆ ಚೆಂಡು ಬ್ಯಾಟ್ನ ಅಂಚಿನಲ್ಲಿ ಸಾಗಿ ಕೀಪರ್ ಕೈ ಸೇರಿತು. ಈ ವೇಳೆ ಟಿಪ್ ಕ್ಯಾಚ್ಗಾಗಿ ವಿಕೆಟ್ ಕೀಪರ್ ಭರತ್ ಮತ್ತು ಸ್ಲಿಪ್ನಲ್ಲಿದ್ದ ಶುಭಮನ್ ಗಿಲ್ ಜೋರಾಗಿ ಮನವಿ ಮಾಡಿದರು.
ಇದೇ ವೇಳೆ ಕುಲ್ದೀಪ್ ಯಾದವ್ ಅವರು ನಾಯಕ ರೋಹಿತ್ ಶರ್ಮ ಬಳಿ ಬಂದು ಚೆಂಡು ಬ್ಯಾಟ್ಗೆ ಬಡಿದಿದೆ ಎಂದು ರಿವ್ಯೂ ಪಡೆಯುವಂತೆ ಒತ್ತಾಯಿಸಿದ್ದಾರೆ. ಆದರೆ ಚೆಂಡು ಬ್ಯಾಟ್ಗೆ ಬಡಿಯದಿರುವುದು ರೋಹಿತ್ ಮತ್ತು ಬೌಲರ್ ಜಸ್ಪ್ರೀತ್ ಬುಮ್ರಾಗೂ ತಿಳಿದಿತ್ತು. ಆದ್ಯಾಗೂ ಕುಲ್ದೀಪ್ ರಿವ್ಯೂ ಪಡೆಯುವಂತೆ ಒತ್ತಾಯಿಸುತ್ತಿರುವುದನ್ನು ಕಂಡು ಚಿತ್ತ ನೇತ್ತಿಗೇರಿದ ರೋಹಿತ್, ಅರೇ ನಿನಗೆ ತಲೆ ಕೆಟ್ಟಿದೆಯಾ ಎನ್ನುವ ಅರ್ಥದಲ್ಲಿ ಗುರಾಯಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ಒಂದು ಕ್ಷಣ ಕೋಪಗೊಂಡ ರೋಹಿತ್ ತಕ್ಷಣ ಕೂಲ್ ಆಗಿ ನಗುತ್ತಲೇ ಎರಡು ಕೈಗಳಿಂದ ಥಂಬ್ಸ್ ಪ್ ಮಾಡಿ ಮಾಡಿದರು. ಇದು ಪಂದ್ಯದ ಕ್ಯಾಮೆರದಲ್ಲಿ ಸೆರೆಯಾಗಿದೆ.
Rohit Sharma is a complete entertainer in the field. 👌😄pic.twitter.com/jMh9s0yPtB
— Johns. (@CricCrazyJohns) February 4, 2024
ಕುಲ್ದೀಪ್ ಯಾದವ್ಗೆ ರೋಹಿತ್ ಶರ್ಮ ಇದಕ್ಕೂ ಮುನ್ನ ಹಲವು ಬಾರಿ ಅನಗತ್ಯ ರಿವ್ಯೂ ಪಡೆದ ವಿಚಾರದಲ್ಲಿ ಮೈದಾನದಲ್ಲೇ ಚಳಿ ಬಿಡಿಸಿದ್ದರು. ಆದರೂ ಕೂಡ ಕುಲ್ದೀಪ್ಗೆ ಇನ್ನು ಬುದ್ಧಿ ಬಂದಂತೆ ತೋರುತ್ತಿಲ್ಲ.
ಶನಿವಾರದ ದ್ವಿತೀಯ ದಿನದ ಆಟದಲ್ಲಿಯೂ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ನ ಬ್ಯಾಟಿಂಗ್ ವೇಳೆ ಕಳಪೆ ಫೀಲ್ಡಿಂಗ್ ಮಾಡಿದ ಕುರಿತು ರೋಹಿತ್ ಸಹ ಆಟಗಾರನ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಫೀಲ್ಡಿಂಗ್ ಮೇಲೆ ಗಮನ ಹರಿಸದೆ ಮೈದಾನದಲ್ಲಿ ಸುಮ್ಮಸುಮ್ಮನೆ ತಿರುಗಾಡಿದರೆ ಅಷ್ಟೇ…. ಎಂದು ಕೆಲ ಅವಾಚ್ಯ ಪದಗಳಿಂದ ಬೈದಿದ್ದರು. ಇದು ಮೈಕ್ ಸ್ಟಂಪ್ನಲ್ಲಿ ರೆಕಾರ್ಡ್ ಆಗಿತ್ತು. ಅಲ್ಲದೆ ಈ ವಿಡಿಯೊ ವೈರಲ್ ಕೂಡ ಆಗಿತ್ತು.
ಇದನ್ನೂ ಓದಿ IND vs ENG: ಉಳಿದ ಮೂರು ಟೆಸ್ಟ್ ಪಂದ್ಯಗಳಿಗೂ ಕೊಹ್ಲಿ, ಜಡೇಜಾ, ಶಮಿ ಅಲಭ್ಯ!
— Sanju Here 🤞| Alter EGO| (@me_sanjureddy) February 3, 2024
ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿ ದ್ವಿತೀಯ ದಿನದಾಟ ಮುಗಿಸಿದ್ದ ಭಾರತ, ಮೂರನೇ ದಿನವಾದ ಭಾನುವಾರ ಬ್ಯಾಟಿಂಗ್ ಮುಂದುವರಿಸಿ 255ಕ್ಕೆ ಆಲೌಟ್ ಆಯಿತು. ಭಾರತ ಪರ ಶುಭಮನ್ ಗಿಲ್ ಶತಕ ಬಾರಿಸಿ ಸಂಭ್ರಮಿಸಿದರು. 399 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ಒಂದು ವಿಕೆಟ್ ಕಳೆದುಕೊಂಡರೂ ಉತ್ತಮ ರನ್ ಗಳಿಸಿದೆ. ಜಾಕ್ ಕ್ರಾಲಿ(29) ಮತ್ತು ನೇಟ್ ವಾಚ್ಮನ್ ಆಗಿ ಆಡಲಿಳಿದ 19 ವರ್ಷದ ಸ್ಪಿನ್ನರ್ ರೆಹಾನ್ ಅಹ್ಮದ್ 9 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಲ್ಕನೇ ದಿನದಾಟದಲ್ಲಿ ಭಾರತೀಯ ಬೌಲರ್ಗಳು ಹಿಡಿತ ಸಾಧಿಸದೇ ಹೋದರೆ ಮೊದಲ ಟೆಸ್ಟ್ನಂತೆ ಈ ಪಂದ್ಯಲ್ಲಿಯೂ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಹೀಗಾಗಿ ಘಾತಕ ಸ್ಪೆಲ್ ನಡೆಸಿ ಯಾರನ್ನೂ ಹೆಚ್ಚು ಹೊತ್ತು ಕ್ರೀಸ್ ಆಕಮಿಸದಂತೆ ನೋಡಿಕೊಳ್ಳಬೇಕು. ಇಲ್ಲವಾದ