ಮುಂಬಯಿ: ರೋಹಿತ್ ಶರ್ಮ(Rohit Sharma) ಅವರನ್ನು ಮುಂಬೈ ಇಂಡಿಯನ್ಸ್(Mumbai Indians) ನಾಯಕತ್ವದಿಂದ ಕೆಳಗಿಳಿಸಿದ ವಿಚಾರದಲ್ಲಿ ಸಮರ್ಥನೆ ನೀಡಿದ ತಂಡದ ಕೋಚ್ ಮಾರ್ಕ್ ಬೌಚರ್ಗೆ(Mark Boucher) ರೋಹಿತ್ ಪತ್ನಿ ರಿತಿಕಾ(Ritika ) ಟಾಂಗ್ ನೀಡಿದ್ದಾರೆ. ಇದರಲ್ಲಿ ಹಲವು ತಪ್ಪುಗಳಿವೆ ಎಂದು ಹೇಳುವ ಮೂಲಕ ರಿತಿಕಾ(Rohit Sharma’s Wife Ritika ) ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.
17ನೇ ಆವೃತ್ತಿಯ ಐಪಿಎಲ್ ಟೂರ್ನಿಯ(IPL 2024) ಆಟಗಾರರ ಮಿನಿ ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿತ್ತು. ಐದು ಪ್ರಶಸ್ತಿ ಗೆದ್ದಿದ್ದ ರೋಹಿತ್ ಶರ್ಮ ಅವರನ್ನು ಹಠಾತ್ ಆಗಿ ನಾಯಕ್ವದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ಗುಜರಾತ್ ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿಸಿ ನಾಯಕನ ಪಟ್ಟ ನೀಡಲಾಯಿತು. ಮುಂಬೈ ಇಂಡಿಯನ್ಸ್ ತಂಡದ ಈ ನಿರ್ಧಾರ ಕಂಡು ಕ್ರಿಕೆಟ್ ಅಭಿಮಾನಿಗಳು ಸೇರಿ ಸ್ವತಃ ತಂಡದ ಆಟಗಾರರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಜತೆಗೆ ರೋಹಿತ್ ಅಭಿಮಾನಿಗಳಿಂದ ವಿರೋಧ ಕೂಡ ವ್ಯಕ್ತವಾಗಿತ್ತು.
ರೋಹಿತ್ ಶರ್ಮ ಅವರನ್ನು ನಾಯಯಕ್ವದಿಂದ ಕೆಳಗಿಳಿಸಿದ ಬಳಿಕ ಅವರು ಬೇರೆ ಫ್ರಾಂಚೈಸಿ ಸೇರಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು. ಆದರೆ, ಅವರನ್ನು ನಾಯಕ್ವದಿಂದ ಕೆಳಗಿಳಿಸಿದ ವಿಚಾರವಾಗಿ ಫ್ರಾಂಚೈಸಿ ಇದುವರೆಗೆ ಯಾವುದೇ ಹೇಳಿಕೆ ಕೂಡ ನೀಡಿರಲಿಲ್ಲ. ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದು ಮುಖ್ಯ ಕೋಚ್ ಮಾರ್ಕ್ ಬೌಚರ್, ಪಾಡ್ ಕಾಸ್ಟ್ ಒಂದರಲ್ಲಿ ಮಾತನಾಡಿದ ಬೌಚರ್, ನಾಯಕತ್ವ ಬದಲಾವಣೆಯು ಸಂಪೂರ್ಣವಾಗಿ ಕ್ರಿಕೆಟಿಂಗ್ ನಿರ್ಧಾರ ಎಂದಿದ್ದರು.
ಇದನ್ನೂ ಓದಿ IPL 2024 : ಎರಡು ಹಂತಗಳಲ್ಲಿ ಐಪಿಎಲ್ 2024ರ ವೇಳಾಪಟ್ಟಿ ಬಿಡುಗಡೆ?
“ಭಾರತದಲ್ಲಿ ಕ್ರಿಕೆಟ್ ಎನ್ನುವುದು ತುಂಬಾ ಭಾವನಾತ್ಮಕವಾಗಿರುತ್ತಾರೆ. ಈ ಭಾವನೆಗಳನ್ನು ದೂರವಿಡಿ. ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಕ್ರಿಕೆಟಿಂಗ್ ನಿರ್ಧಾರ. ಬೇರೇನೂ ಇಲ್ಲ. ಬಹಳಷ್ಟು ಮಂದಿಗೆ ಇದು ಅರ್ಥವಾಗಿಲ್ಲ” ಎಂದು ಬೌಚರ್ ಹೇಳಿದ್ದರು.
ಮಾರ್ಕ್ ಬೌಚರ್ ಅವರ ಸಂದರ್ಶನಕ್ಕೆ ಇನ್ಸ್ಟಾಗ್ರಾಂನಲ್ಲಿ ಕಾಮೆಂಟ್ ಮಾಡಿದ ರೋಹಿತ್ ಶರ್ಮ ಪತ್ನಿ ರಿತಿಕಾ, ‘ಇದರಲ್ಲಿ ಹಲವು ತಪ್ಪುಗಳಿವೆ’ ಎಂದು ಹೇಳುವ ಮೂಲಕ ಪತಿಯನ್ನು ನಾಯಕತ್ವದಿಂದ ಕಿತ್ತು ಹಾಕಿದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Ritika Sajdeh's comment on Mark Boucher's interview talking about Hardik Pandya taking over MI captaincy. (Smash Sports Podcast). pic.twitter.com/5sAAVa5xVu
— Mufaddal Vohra (@mufaddal_vohra) February 6, 2024
ಲಕ್ಷಾನುಗಟ್ಟಲೇ ಫಾಲೋವರ್ಸ್ ನಷ್ಟ
ರೋಹಿತ್ ಶರ್ಮ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಟ್ಟು ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಮಂಬೈ ಇಂಡಿಯನ್ಸ್ ಫ್ರಾಂಚೈಸಿಯು ಟ್ವಿಟರ್‌ನಲ್ಲಿ (ಎಕ್ಸ್) ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕಳೆದುಕೊಂಡಿತ್ತು.
“ಮುಂಬೈ ತಂಡ ಎಂದಿಗೂ ಅಸಾಧಾರಣ ನಾಯಕತ್ವ ಕಂಡ ತಂಡ. ಸಚಿನ್ ತೆಂಡೂಲ್ಕರ್ ಅವರಿಂದ ಹರ್ಭಜನ್ ತನಕ, ಪಾಂಟಿಂಗ್ ಅವರಿಂದ ರೋಹಿತ್ ತನಕ ಉತ್ತಮ ನಾಯಕರನ್ನು ಕಂಡಿದೆ. ಇವರಲ್ಲಿ ರೋಹಿತ್ ಅವರದು ಅತ್ಯಂತ ದೊಡ್ಡ ಕೊಡುಗೆ ಇದೆ. 5 ಬಾರಿ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. ಫ್ರಾಂಚೈಸಿ ಎಂದಿಗೂ ರೋಹಿತ್‌ಗೆ ಕೃತಜ್ಞವಾಗಿದೆ” ಎಂದು ಮುಂಬೈ ಇಂಡಿಯನ್ಸ್ ತನ್ನ ವೆಬ್‌ಸೈಟ್‌ನಲ್ಲಿ ಬರೆದು ರೋಹಿತ್ ಅವರನ್ನು ನಾಯಕ್ವದಿಂದ ಕೆಳಗಿಳಿಸಿದ ನಿರ್ಧಾರವನ್ನು ಪ್ರಕಟಿಸಿತ್ತು.