Site icon Vistara News

Rohit Sharma : ಅಪಾಯದಲ್ಲಿದೆ ರೋಹಿತ್ ಶರ್ಮಾ ವಿಶ್ವ ಕಪ್​ ದಾಖಲೆ!

Rohit Sharma 10

ಮುಂಬಯಿ: ದಕ್ಷಿಣ ಆಫ್ರಿಕಾದ ಅನುಭವಿ ವಿಕೆಟ್​ ಕೀಪರ್ ಬ್ಯಾಟರ್​ ಕ್ವಿಂಟನ್ ಡಿ ಕಾಕ್ ಹಾಲಿ ವಿಶ್ವಕಪ್​ನಲ್ಲಿ ತಮ್ಮ ಮೂರನೇ ಶತಕವನ್ನು ಬಾರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಡಿ ಕಾಕ್ ಕೇವಲ 102 ಎಸೆತಗಳಲ್ಲಿ ಶತಕ ಗಳಿಸಿದರು. ಬಳಿಕ ಅವರು ಅದನ್ನು 174 ರನ್​ಗಳಿಗೆ ವಿಸ್ತರಿಸಿದ್ದಾರೆ. ಕ್ವಿಂಟನ್ ಡಿ ಕಾಕ್ ಈಗ ಪ್ರಸ್ತುತ ವಿಶ್ವಕಪ್ ಆವೃತ್ತಿಯಲ್ಲಿ ಮೂರು ಶತಕಗಳನ್ನು ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡಕ್ಕೆ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ. ಹೀಗಾಗಿ ಉತ್ತಮ ಫಾರ್ಮ್​ನಲ್ಲಿರುವ ಕ್ವಿಂಟನ್​ ಇನ್ನೂ ಮೂರು ಶತಕಗಳನ್ನು ಬಾರಿಸಿದರೆ ರೋಹಿತ್​ ಶರ್ಮಾ (Rohit Sharma ) ದಾಖಲೆ ಮುರಿಯಲಿದೆ.

2019ರ ವಿಶ್ವ ಕಪ್ ಇಂಗ್ಲೆಂಡ್​ನಲ್ಲಿ ನಡೆದಿತ್ತು. ಅಲ್ಲಿ ರೋಹಿತ್ ಶರ್ಮಾ 5 ಶತಕಗಳನ್ನು ಬಾರಿಸಿದ್ದರು. ಇದು ಏಕ ದಿನ ಕ್ರಿಕೆಟ್ ವಿಶ್ವ ಕಪ್ ಆವೃತ್ತಿಯೊಂದರಲ್ಲಿ ಬ್ಯಾಟರ್ ಒಬ್ಬರು ಬಾರಿಸಿದ ಗರಿಷ್ಠ ಶತಕಗಳ ಸಾಧನೆ. ಈ ರೆಕಾರ್ಡ್​ ಅನ್ನು ಮುರಿಯುವ ಅವಕಾಶ ಕ್ವಿಂಟನ್ ಡಿ ಕಾಕ್ ಅವರಿಗೆ ಇದೆ.

ವಿಶ್ವ ಕಪ್​ನ ಕೊನೆಯಲ್ಲಿ 50 ಓವರ್​ಗಳ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸುವುದಾಗಿ ಕ್ವಿಂಟನ್ ಡಿ ಕಾಕ್ ಘೋಷಿಸಿದ್ದಾರೆ. ಆದರೂಗ ಅಗ್ರ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾಕ್ಕಾಗಿ ತಮ್ಮ ಸರ್ವಸ್ವವನ್ನೂ ನೀಡುತ್ತಿದ್ದಾರೆ ಎಡಗೈ ಬ್ಯಾಟರ್​. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತೊಂದು ದೊಡ್ಡ ಮೊತ್ತಕ್ಕೆ ಬಲವಾದ ಬುನಾದಿ ಸ್ಥಾಪಿಸಲು ಸಹಾಯ ಮಾಡಿದ ಡಿ ಕಾಕ್ ಕೇವಲ 101 ಎಸೆತಗಳಲ್ಲಿ ಶತಕ ಗಳಿಸಿದ್ದರು.

ದಕ್ಷಿಣ ಆಫ್ರಿಕಾ ತಂಡ ಪರ ವಿಶೇಷ ದಾಖಲೆ

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ಬಾಂಗ್ಲಾದೇಶ ತಂಡದ ವಿರುದ್ಧದ ದಕ್ಷಿಣ ಆಫ್ರಿಕಾದ ಗ್ರೂಪ್ ಹಂತದ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ (ICC World Cup 2023) ಶತಕ ಬಾರಿಸಿದ್ದಾರೆ. ಇದು ಹಾಲಿ ವಿಶ್ವ ಕಪ್​ನಲ್ಲಿ ಅವರ ಮೂರನೇ ಶತಕವಾಗಿದೆ. ಡಿ ಕಾಕ್ ಆಕ್ರಮಣಶೀಲತೆ ಹಾಗೂ ಎಚ್ಚರಿಕೆಯ ಆಟದೊಂದಿಗೆ ತಮ್ಮ 20 ನೇ ಏಕದಿನ ಶತಕವನ್ನು ತಂದರು.

ಇದನ್ನೂ ಓದಿ : ICC World Cup 2023 : ಅಂಕಪಟ್ಟಿಯಲ್ಲಿ ದ. ಆಫ್ರಿಕಾ ಎರಡನೇ ಸ್ಥಾನಕ್ಕೇರಿದ್ದು ಹೇಗೆ ಎಂಬ ವಿವರ ಇಲ್ಲಿದೆ

ವಿಶ್ವ ಕಪ್ ಬಳಿಕ 50 ಓವರ್​ಗಳ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದ ಕ್ವಿಂಟನ್ ಡಿ ಕಾಕ್ ಅಗ್ರ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅತ್ಯುತ್ತಮ ಕೊಡುಗೆ ಕೊಡುತ್ತಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಮತ್ತೊಂದು ದೊಡ್ಡ ಬಾರಿಸುವಲ್ಲಿ ಸಹಾಯ ಮಾಡಿದ ಡಿ ಕಾಕ್ ಕೇವಲ 101 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಕ್ವಿಂಟನ್ ಡಿ ಕಾಕ್ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಕನಿಷ್ಠ 3 ಶತಕಗಳನ್ನು ಗಳಿಸಿದ 7 ನೇ ಬ್ಯಾಟ್ಸ್ಮನ್ ಮತ್ತು ಭಾರತದಲ್ಲಿ ಈ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆ ಮಾಡಿದ ರೋಹಿತ್ ಶರ್ಮಾ, ಕುಮಾರ ಸಂಗಕ್ಕಾರ ಮತ್ತು ಸೌರವ್ ಗಂಗೂಲಿ ಸೇರಿದಂತೆ ಎಲೈಟ್ ಬ್ಯಾಟರ್​​ಗಳ ಪಟ್ಟಿಗೆ ಡಿ ಕಾಕ್ ಸೇರಿದ್ದಾರೆ.

2015 ಮತ್ತು 2019ರ ವಿಶ್ವ ಕಪ್​ನಲ್ಲಿ ಒಂದೇ ಒಂದು ಶತಕ ಗಳಿಸದ ಡಿ ಕಾಕ್, ದಿಲ್ಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 84 ಎಸೆತಗಳಲ್ಲಿ 100 ರನ್ ಬಾರಿಸಿದ್ದರು. ನಂತರ ಅವರು ಕಠಿಣ ಲಕ್ನೋ ಪಿಚ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 110 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್​​ನ 35 ನೇ ಓವರ್​ನಲ್ಲಿ ಡಿ ಕಾಕ್ 4 ಸಿಕ್ಸರ್ ಮತ್ತು 6 ಫೋರ್​ ಸೇಮತ ಮೂರಂಕಿ ಮೊತ್ತ ದಾಟಿದ್ದರು.

Exit mobile version