ಬರ್ಮಿಂಗ್ಹಮ್ : ಭಾರತದ ಬಾಕ್ಸರ್ ರೋಹಿತ್ ಟೋಕಸ್ ಕಾಮನ್ವೆಲ್ತ್ ಗೇಮ್ಸ್‌ನ ೬೭ ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಜಾಂಜಿಯಾದ ಸ್ಟೀಫನ್ ಜಿಂಬಾ ಅವರ ವಿರುದ್ಧ ಸೋತ ರೋಹಿತ್ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕಿಂತ ಮೊದಲು ಭಾರತದ ಬಾಕ್ಸರ್‌ಗಳಾದ ಮೊಹಮ್ಮದ್ ಹಸುಮುದ್ದೀನ್ ಹಾಗೂ ಜಾಸ್ಮಿನ್ ಲಂಬೊರಿಯಾ ಕಂಚಿನ ಪದಕ ಗೆದ್ದಿದ್ದರು. ಇದರೊಂದಿಗೆ ಭಾರತದ ಬಾಕ್ಸರ್‌ಗಳು ಶನಿವಾರ ಮೂರು ಪದಕಗಳು ಗೆದ್ದಂತಾಗಿದೆ. ೧೦ನೇ ಭಾನುವಾರ ನಿಖತ್ ಜರೀನ್, ನೀತು, ಅಮಿತ್ ಪಂಘಾಲ್, ಸಾಗತ್ ಅಹ್ಲಾವತ್ ತಮ್ಮತಮ್ಮ ವಿಭಾಗಗಳ ಫೈನಲ್ ಹಣಾಹಣಿಗಳಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಕನಿಷ್ಠ ಪಕ್ಷ ನಾಲ್ಕು ಮೆಡಲ್‌ಗಳು ಖಾತರಿಯಾಗಿವೆ.
ಶನಿವಾರ ಭಾರತದ ಅಥ್ಲೀಟ್‌ಗಳು ಒಟ್ಟಾರೆ ೧೪ ಪದಕಗಳು ಭಾರತದ ಪಾಲಾಗಿವೆ. ಭಾರತ ಪ್ರಸ್ತುತ ೧೩ ಚಿನ್ನ, ೧೧ ಬೆಳ್ಳಿ, ೧೭ ಕಂಚಿನ ಪದಕಗಳೊಂದಿಗೆ ಒಟ್ಟಾರೆ ೪೦ ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ೧೧ ಮೆಡಲ್‌ಗಳನ್ನು ಬಾಕ್ಸರ್‌ಗಳು ಗೆದ್ದಿದ್ದಾರೆ. ೫೮ ಚಿನ್ನ, ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದು, ೫೦ ಚಿನ್ನದೊಂದಿಗೆ ಇಂಗ್ಲೆಂಡ್ ಎರಡನೇ ಸ್ಥಾಮ ಪಡೆದುಕೊಂಡಿದೆ.