Site icon Vistara News

Romario Shepherd : ಸ್ಫೋಟಕ ಬ್ಯಾಟಿಂಗ್ ನಡೆಸಿ ವಿಭಿನ್ನ ದಾಖಲೆ ಬರೆದ ರೊಮಾರಿಯೊ ಶಫರ್ಡ್​

Romario shepherd

ಮುಂಬಯಿ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 7) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ’2024 ರ (IPL 2024) ಮುಂಬೈ ಇಂಡಿಯನ್ಸ್​ (Mumbai Indians) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ರೊಮಾರಿಯೊ ಶೆಫರ್ಡ್ (Romario Shepherd) ವಿಶಿಷ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ ಇನಿಂಗ್ಸ್​ ಒಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿ ಗರಿಷ್ಠ ಸ್ಟ್ರೈಕ್​ ರೇಟ್ ಹೊಂದಿದ ಬ್ಯಾಟರ್ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ 2022ರಲ್ಲಿ ಮುಂಬೈ ವಿರುದ್ಧ 373.33 ಸ್ಟ್ರೈಕ್ ರೇಟ್ ಹೊಂದಿದ್ದ ಪ್ಯಾಟ್ ಕಮಿನ್ಸ್ ಅವರ ದಾಖಲೆಯನ್ನು ಅವರು ಅವರು ಮುರಿದ್ದಾರೆ. 390 ಸ್ಟ್ರೈಕ್​ ರೇಟ್​ ನಲ್ಲಿ ಶೆಫರ್ಡ್​ ಬ್ಯಾಟಿಂಗ್ ಮಾಡಿದ್ದಾರೆ. ಅವರೇ ಗೆಲುವಿನ ರೂವಾರಿ ಎನಿಸಿಕೊಂಡರು.

ಭಾನುವಾರ ನಡೆದ ದೆಹಲಿ ವಿರುದ್ಧದ ಪಂದ್ಯದಲ್ಲಿ ಶೆಫರ್ಡ್ ಸಂಪೂರ್ಣವಾಗಿ ಮಿಂಚಿದರು. ಸ್ಫೋಟಕ ಇನಿಂಗ್ಸ್ ಆಡಿದ ಅವರು 10 ಎಸೆತಗಳಲ್ಲಿ 39 ರನ್ ಗಳಿಸುವ ಹಾದಿಯಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನು ಹೊಡೆದರು. ಮುಂಬೈ ಇನ್ನಿಂಗ್ಸ್​ನ ಕೊನೆಯ ಓವರ್​ನಲ್ಲಿ ಶೆಫರ್ಡ್ ಎದುರಾಳಿ ತಂಡದ ಬೌಲರ್ ಆ್ಯ ನ್ರಿಚ್ ನೋರ್ಜೆ ಅವರ ಓವರ್​ ಒಂದರಲ್ಲಿ 32 ರನ್ ಸಿಡಿಸಿದರು. ಬಲಗೈ ಬ್ಯಾಟ್ಸ್ಮನ್ ಇನ್ನಿಂಗ್ಸ್ನ ಫೈನಲ್​ ಓವರ್​ನಲ್ಲಿ 4 ಸಿಕ್ಸರ್ಗಳು ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಅವರ ಬ್ಯಾಟಿಂಗ್​ ನೆರವಿನಿಂದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು.

ಭರ್ಜರಿ ಜತೆಯಾಟ

ಡೇವಿಡ್ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್​ಗಳೊಂದಿಗೆ 45 ರನ್ ಗಳಿಸಿದರು. ಶೆಫರ್ಡ್​​ ಹಿಂದಿನ ಆವೃತ್ತಿಯಲ್ಲಿ ಎಸ್​​ಆರ್​ಎಚ್ ತಂಡದ ಪರ ಆಡಿದ್ದರು.

Exit mobile version