ದೋಹಾ : ಸಣ್ಣ ಪುಟ್ಟ ತಂಡಗಳು ದೊಡ್ಡ ದೊಡ್ಡ ತಂಡಗಳಿ ಆಘಾತ ನೀಡುವುದು ಮುಂದುವರಿದಿದೆ. ಈ ಮೂಲ ಹಾಲಿ ಆವೃತ್ತಿಯ ಫಿಫಾ ವಿಶ್ವ ಕಪ್ (FIFA World Cup) ವಿಶೇಷ ಎನಿಸಿದೆ. ಅಂತೆಯೇ ಶನಿವಾರ ನಡೆದ ಸೆಮಿಫೈನಲ್ಸ್ ಪಂದ್ಯದಲ್ಲಿ ಬಲಿಷ್ಠ ಪೋರ್ಚ್ಗಲ್ ಬಳಗವನ್ನು ಮಣಿಸಿದ ಆಫ್ರಿಕಾದ ದೇಶ ಮೊರಾಕ್ಕೊ ಉಪಾಂತ್ಯಕ್ಕೆ ಲಗ್ಗೆ ಇಟ್ಟಿದೆ. ಈ ಪಂದ್ಯದ ಫಲಿತಾಂಶದ ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ರೊನಾಲ್ಡೊ ಕಣ್ಣೀರು ಹಾಕುತ್ತಾ ಮೂಲಕ ಡ್ರೆಸಿಂಗ್ ರೂಮ್ಗೆ ತೆರಳಿದ ದೃಶ್ಯಗಳು ವೈರಲ್ ಆಗಿದೆ.
ವಿಶ್ವದ ಅತ್ಯಂತ ಜನಪ್ರಿಯ ಫುಟ್ಬಾಲ್ ಆಟಗಾರನಾಗಿರುವ ರೊನಾಲ್ಡೊ ಅವರ ನೇತೃತ್ವದ ಪೋರ್ಚುಗಲ್ ತಂಡ ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿತ್ತು. ಆದರೆ, ಆಫ್ರಿಕಾದ ದೇಶವಾಗಿರುವ ಮೊರಾಕ್ಕೊ ಮಾಜಿ ಚಾಂಪಿಯನ್ಗಳ ಆಸೆಗೆ ತಣ್ಣೀರು ಎರಚಿತ್ತು. ಅಲ್ಲದೆ ರೊನಾಲ್ಡೊ ಅವರಿಗೆ ಇದು ಕೊನೇಯ ವಿಶ್ವ ಕಪ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಕ್ವಾರ್ಟರ್ಫೈನಲ್ಸ್ ಹಂತದಲ್ಲೇ ನಿರ್ಗಮಿಸಿದ್ದು ಅವರಿಗೆ ಸಹಜವಾಗಿ ಬೇಸರ ತಂದಿತು. ಹೀಗಾಗಿ ಅವರು ಸ್ಟೇಡಿಯಮ್ನ ಸುರಂಗದ ಮೂಲಕ ಸಾಗುವಾಗ ಅಳುತ್ತಲೇ ಸಾಗಿದ್ದು ಕಂಡು ಬಂತು.
ಪಂದ್ಯದಲ್ಲಿ ರೊನಾಲ್ಡೊ ಅವರನ್ನು ಆರಂಭದಲ್ಲಿ ಬೆಂಚು ಕಾಯಿಸಲಾಗಿತ್ತು. ಆದರೆ, ಪ್ರಥಮಾರ್ಧದಲ್ಲಿ ಎದುರಾಳಿ ಮೊರಾಕ್ಕೊ 0-1 ಮುನ್ನಡೆ ಸಾಧಿಸಿದ್ದ ಕಾರಣ ಅವರನ್ನು ಕಣಕ್ಕೆ ಇಳಿಸಲಾಯಿತು. ಆದರೆ, ಅದರಿಂದ ಪೋರ್ಚುಗಲ್ ತಂಡಕ್ಕೆ ಯಾವುದೇ ಲಾಭ ಆಗಲಿಲ್ಲ.
ಇದನ್ನೂ ಓದಿ | FIFA World Cup | ರೊನಾಲ್ಡೊ ನಾಯಕತ್ವದ ಪೋರ್ಚುಗಲ್ ಮಣಿಸಿದ ಮೊರಾಕ್ಕೊ ಸೆಮೀಸ್ಗೆ