ಬೆಂಗಳೂರು: ಜೋಶ್ ಹೇಜಲ್ವುಡ್ ಹಾಗೂ ಹರ್ಷಲ್ ಪಟೇಲ್ ಅವರನ್ನು ಕೈಬಿಟ್ಟ ಬಳಿಕ ಉತ್ತಮ ಬೌಲರ್ಗಳಿಗಾಗಿ ಹೊಂಚು ಹಾಕಿದ್ದ ಆರ್ಸಿಬಿ ತಂಡ ಐಪಿಎಲ್ ಹರಾಜಿನಲ್ಲಿ (IPL 2024 Auction) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ತನ್ನದಾಗಿಸಿಕೊಂಡಿದೆ ಅದಕ್ಕಾಗಿ ಬೆಂಗಳೂರು ತಂಡ 11.5 ಕೋಟಿ ರೂಪಾಯಿ ಖರೀದಿ ಮಾಡಿದೆ.
Toe crushers like these are just what we need at the death! ❤️🔥
— Royal Challengers Bangalore (@RCBTweets) December 19, 2023
Welcome to the Red and Gold, Alzarri! 🤗#PlayBold #BidForBold #IPLAuction #ನಮ್ಮRCB #IPL2024
pic.twitter.com/PTeFoC4e2R
ಅಲ್ಜಾರಿ ಜೋಸೆಫ್ ಗಾಗಿ ತೀವ್ರ ಬಿಡ್ಡಿಂಗ್ ಯುದ್ಧ ನಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪೈಪೋಟಿಗೆ ಬಿತ್ತು. ಎರಡು ತಂಡಗಳು ಕೊನೆಯವರೆಗೂ ಮುಂದುವರಿದವು. ಅದಕ್ಕಿಂತ ಹಿಂದ ಪ್ಯಾಟ್ ಕಮಿನ್ಸ್ ಅವರನ್ನು ಕಳೆದುಕೊಂಡಿದ್ದ ಆರ್ಸಿಬಿ ಅಲ್ಜಾರಿ ಜೋಸೆಫ್ ಖರೀದಿಸಲು ಪಣತೊಟ್ಟಿತು.
Holds the IPL record for the best bowling figures ever 🔥
— Royal Challengers Bangalore (@RCBTweets) December 19, 2023
Alzarri is our first pick of the #IPL2024 auction! 👏#PlayBold #BidForBold #IPLAuction #ನಮ್ಮRCB #NowARoyalChallenger pic.twitter.com/eRTO5d1OA4
ಅಲ್ಜಾರಿ ಜೋಸೆಫ್ 19 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 32 ವಿಕೆಟ್ಗಳನ್ನು. ಪಡೆದಿದ್ದಾರೆ. 40ಕ್ಕೆ 5 ಅವರ ಉತ್ತಮ ಸಾಧನೆಯಾಗಿದೆ. ಅದೇ ರೀತಿ 101 ಟಿ20 ಪಂದ್ಯಗಳಲ್ಲಿ ಅವರು 121 ವಿಕೆಟ್ ಉರುಳಿಸಿದ್ದು 12ರನ್ಗೆ 6 ವಿಕೆಟ್ ಉತ್ತಮ ಸಾಧನೆಯಾಗಿದೆ. 2019 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಪರ ಬಂದ 12 ರನ್ಗೆ 6 ವಿಕೆಟ್ ಬೌಲಿಂಗ್ ಸಾಧನೆ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಅಂಕಿಅಂಶಗಳಾಗಿವೆ. ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿರುವ ಅವರು 19 ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ.
24.75 ಕೋಟಿ ರೂ. ಪಡೆದು ಸಾರ್ವಕಾಲಿಕ ದಾಖಲೆ ಬರೆದ ಸ್ಟಾರ್ಕ್
2024ನೇ ಆವೃತ್ತಿಯ ಐಪಿಎಲ್ನ ಹರಾಜಿನಲ್ಲಿ (IPL 2024 Auction) ಸಾರ್ವಕಾಲಿಕ ದಾಖಲೆಯೊಂದು ಸೃಷ್ಟಿಯಾಗಿದೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಐಪಿಎಲ್ ಹರಾಜಿನ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಅವರು 24.75 ಕೋಟಿ ರೂಪಾಯಿಗೆ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಸೇರಿಕೊಂಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅವರು ತಮ್ಮದೇ ದೇಶದ ಆಟಗಾರ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೆಲವೇ ಕ್ಷಣದ ಹಿಂದೆ ಸೃಷ್ಟಿ ಮಾಡಿದ್ದ 20.50 ಕೋಟಿ ರೂಪಾಯಿಯ ದಾಖಲೆ ಮುರಿದ್ದಾರೆ.
ಇದನ್ನೂ ಓದಿ : IPL 2024 Auction : 24.75 ಕೋಟಿ ರೂ. ಪಡೆದು ಸಾರ್ವಕಾಲಿಕ ದಾಖಲೆ ಬರೆದ ಸ್ಟಾರ್ಕ್
ಪ್ಯಾಟ್ ಕಮಿನ್ಸ್ 2 ಕೋಟಿ ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದರು. ಆರಂಭದಲ್ಲಿ ಅವರಿಗೆ ಮುಂಬಯಿ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟನ್ಸ್ ತಂಡ ಜಿದ್ದಿಗೆ ಬಿದ್ದು ಬಿಡ್ ಮಾಡಿತು. ಆದರೆ, ಒಂದು ಬಾರಿ 10 ಕೋಟಿ ಗಡಿ ದಾಟುತ್ತಿದ್ದಂತೆ ಕೋಲ್ಕೊತಾ ಹಾಗೂ ಗುಜರಾತ್ ಜೈಂಟ್ಸ್ ತಂಡ ಎಡಗೈ ಬೌಲರ್ಗಾಗಿ ಸತತವಾಗಿ ಬಿಡ್ ಮಾಡಿತು. ವೇಗದ ಬೌಲರ್ ಗರಿಷ್ಠ 20 ಕೋಟಿ ರೂಪಾಯಿ ಪಡೆಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಹೊರತಾಗಿಯೂ ಎರಡೂ ತಂಡಗಳು ಎಲ್ಲರ ನಿರೀಕ್ಷೆಯನ್ನ ಮೀರಿ 24.75 ಕೋಟಿ ರೂಪಾಯಿ ಪಡೆದ ಕೆಕೆಆರ್ ತಂಡ ಸೇರಿಕೊಂಡರು.
20 ಕೋಟಿ ಗಡಿ ದಾಟಿಸಿದ ಪ್ಯಾಟ್ ಕಮಿನ್ಸ್
ಪ್ರಸಕ್ತ ಸಾಗುತ್ತಿರುವ ಐಪಿಎಲ್ 2024 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಅವರು 20.50 ಕೋಟಿ ರೂಪಾಯಿ ಪಡೆದಿದ್ದಾರೆ. ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರ್ರನ್ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರ ಎನಿಸಿಕೊಂಡಿದ್ದರು. 2023ರಲ್ಲಿ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ ನೀಡಿ ಖರೀದಿ ಮಾಡಿತ್ತು.