Site icon Vistara News

RCB WPL 2024: ಬಲಿಷ್ಠ ತಂಡ ಕಟ್ಟಿದ ಮಹಿಳಾ ಆರ್​ಸಿಬಿ; ಆಟಗಾರ್ತಿಯರ ಫುಲ್​ ಲೀಸ್ಟ್​ ಇಲ್ಲಿದೆ 

rcb wpl

ಮುಂಬಯಿ: ಚೊಚ್ಚಲ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ಕನ್ನಡಿಗರ ನಚ್ಚಿನ ತಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB WPL 2024) ಮುಂದಿನ ಆವೃತ್ತಿಗೆ ಬಲಿಷ್ಠ ತಂಡವನ್ನು ರಚಿಸಿದೆ. ಇಂದು(ಡಿ.9 ಶನಿವಾರ) ಮುಂಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಸ್ಟಾರ್​ ಆಟಗಾರ್ತಿಯನ್ನು ಖರೀದಿಸುವ ಮೂಲಕ 2ನೇ ಆವೃತ್ತಿಯಲ್ಲಿ ಕಪ್​ ಗೆಲ್ಲುವ ವಿಶ್ವಾಸದಲ್ಲಿದೆ.

ಕಳೆದ ಬಾರಿ ಅತ್ಯಂತ ಕಳಪೆ ಪ್ರದರ್ಶನ

ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ್ತಿಯರಾದ ಸ್ಮೃತಿ ಮಂಧಾನ, ರಿಚಾ ಘೋಷ್​, ರೇಣುಕಾ ಸಿಂಗ್​ ಸೇರಿ ಆಸೀಸ್​ನ ಸ್ಟಾರ್​ ಆಲ್​ರೌಂಡರ್​ ಎಲ್ಲಿಸ್​ ಪೆರಿ, ಹೀದರ್ ನೈಟ್, ಸೋಫಿ ಡಿವೈನ್ ಅವರನ್ನೊಳ ಅತ್ಯಂತ ಬಲಿಷ್ಠ ತಂಡವಾಗಿದ್ದ ಆರ್​ಸಿಬಿ ಕಳೆದ ಚೊಚ್ಚಲ ಆವೃತ್ತಿಯಲ್ಲಿ ತೀರಾ ಕಳೆಪೆ ಪ್ರದರ್ಶನ ತೋರಿತ್ತು. ಈ ಮೂಲಕ ತಾವು ಕೂಡ ಪುರುಷರ ತಂಡದಂತೆ ನತದೃಷ್ಟರು ಎನಿಸಿಕೊಂಡಿದ್ದರು. ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದ್ದರು.

ಮುಂದಿನ ಆವೃತ್ತಿಗೆ ಸ್ಟಾರ್​ ಆಟಗಾರ್ತಿರನ್ನು ಉಳಿಸಿಕೊಂಡು ಮತ್ತೆ ಮಿನಿ ಹರಾಜಿನಲ್ಲಿ ಕೆಲ ಸ್ಟಾರ್​ ಆಟಗಾರ್ತಿಯನ್ನು ತಂಡಕ್ಕೆ ಸೇರಿಸಿಕೊಂಡಿರುವ ಆರ್​ಸಿಬಿ ಹೇಗೆ ಪ್ರದರ್ಶನ ತೋರಲಿದೆ ಎನ್ನುವುದು ಕಾದು ನೋಡಬೇಕಿದೆ. ಮಿನಿ ಹರಾಜಿನಲ್ಲಿ ಆರ್​ಸಿಬಿ 7 ಆಟಗಾರ್ತಿಯರನ್ನು ಖರೀದಿ ಮಾಡಿದೆ. ಭಾರತೀಯ ಆಟಗಾರ್ತಿ ಏಕ್ತಾ ಬಿಷ್ತ್ ಅವರನ್ನು 60 ಲಕ್ಷ ರೂ.ಗೆ, ಆಸ್ಟ್ರೇಲಿಯಾದ ಜಾರ್ಜಿಯಾ ವೇರ್ಹ್ಯಾಮ್ ಅವರನ್ನು 40 ಲಕ್ಷ ರೂ.ಗೆ, ಇಂಗ್ಲೆಂಡ್ ತಂಡದ ಅನುಭವಿ ಆಟಗಾರ್ತಿ ಕೇಟ್ ಕ್ರಾಸ್ ಅವರನ್ನು 30 ಲಕ್ಷ ರೂ.ಗೆ, ಶುಭಾ ಸತೀಶ್ ಅವರನ್ನು 10 ಲಕ್ಷ ರೂ., ಎಸ್ ಮೇಘನಾ 30 ಲಕ್ಷ ರೂ., ಸೋಫಿ ಮೊಲಿನೆಕ್ಸ್ 30 ಲಕ್ಷ ರೂ. ನೀಡಿ ಖರೀದಿಸಿತು.

ಇದನ್ನೂ ಓದಿ ಅನುಭವಿ ಆಟಗಾರ್ತಿಯರನ್ನು ಹಿಂದಿಕ್ಕಿ ಕೋಟಿ ಮೊತ್ತ ಪಡೆದ ಕರ್ನಾಟಕದ 21 ವರ್ಷದ ವೃಂದಾ ದಿನೇಶ್

ಆರ್​ಸಿಬಿ ತಂಡ

ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಶ್ತ್, ಶುಭಾ ಸತೀಶ್, ಎಸ್ ಮೇಘನಾ, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್.

Exit mobile version