Site icon Vistara News

WPL 2023: ಟಾಸ್​ ಗೆದ್ದ ಆರ್​ಸಿಬಿ ತಂಡದಿಂದ ಬೌಲಿಂಗ್​ ಆಯ್ಕೆ

royal-challengers-bangalore-women-opt-to-bowl

royal-challengers-bangalore-women-opt-to-bowl

ಮುಂಬಯಿ: ಭಾನುವಾರದ ಮಹಿಳಾ ಪ್ರೀಮಿಯರ್​ ಲೀಗ್​ನ(WPL 2023) ಡಬಲ್​ ಹೆಡ್ಡರ್​ ಹಣಾಹಣಿಯ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ತಂಡದ ನಾಯಕಿ ಸ್ಮೃತಿ ಮಂಧಾನಾ ಬೌಲಿಂಗ್​ ಆಯ್ಕೆ ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮೊದಲು ಬ್ಯಾಟಿಂಗ್​ ನಡೆಸಲಿದೆ.

ಮುಂಬಯಿಯ ಬ್ರಬೋರ್ನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಉಭಯ ತಂಡಗಳ ಈ ಕಾದಾಟ ಕೂಟದ ರೋಚಕ ಪಂದ್ಯಗಳಲ್ಲೊಂದಾಗುವ ಎಲ್ಲ ಸಾಧ್ಯತೆ ಇದೆ. ಏಕೆಂದರೆ ಟೂರ್ನಿಯ ಇತ್ತಂಡಗಳಲ್ಲಿ ಸ್ಟಾರ್​ ಆಟಗಾರ್ತಿಯರ ಸಂಖ್ಯೆ ಹೆಚ್ಚಿದೆ.

ಕೂಟದ ಹರಾಜಿನಲ್ಲೇ ಅತ್ಯಧಿಕ 3.40 ಕೋಟಿ ರೂ.ಗೆ ಮಾರಾಟಗೊಂಡ ಏಡಗೈ ಬ್ಯಾಟರ್​ ಸ್ಮೃತಿ ಮಂಧಾನಾ, ಎಲ್ಲಿಸ್‌ ಪೆರ್ರಿ, ಹೀತರ್‌ ನೈಟ್‌, ಸೋಫಿ ಡಿವೈನ್‌ ಹೀಗೆ ಹಲವು ಸಮಕಾಲೀನ ಶ್ರೇಷ್ಠ ಆಟಗಾರ್ತಿಯರನ್ನೊಳಗೊಂಡ ಆರ್​ಸಿಬಿ ಮೇಲ್ನೋಟ್ಟಕ್ಕೆ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ.

ತಂಡ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನಾ (ನಾಯಕಿ), ಸೋಫಿ ಡಿವೈನ್‌, ಎಲ್ಲಿಸ್‌ ಪೆರ್ರಿ, ರಿಚಾ ಘೋಷ್‌, ದಿಶಾ ಕಸಟ್‌, ಹೀತರ್‌ ನೈಟ್‌, ಕನಿಕಾ ಅಹುಜಾ, ಆಶಾ ಶೋಭನಾ, ಮೆಗಾನ್‌ ಶಟ್‌, ಪ್ರೀತಿ ಬೋಸ್‌, ರೇಣುಕಾ ಸಿಂಗ್‌.

ಇದನ್ನೂ ಓದಿ WPL 2023: ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್​ ಪಂದ್ಯದ ಸಂಭಾವ್ಯ ತಂಡ

ಡೆಲ್ಲಿ ಕ್ಯಾಪಿಟಲ್ಸ್​: ಮೆಗ್‌ ಲ್ಯಾನಿಂಗ್‌ (ನಾಯಕಿ), ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್‌, ಮರಿಜಾನ್‌ ಕಾಪ್‌, ಅಲೈಸ್‌ ಕ್ಯಾಪ್ಸಿ, ತನಿಯಾ ಭಾಟಿಯಾ, ಅರುಂಧತಿ ರೆಡ್ಡಿ, ಜೆಸ್‌ ಜೊನಾಸೆನ್‌, ರಾಧಾ ಯಾದವ್‌, ಶಿಖಾ ಪಾಂಡೆ,ತಾರಾ ನೋರಿಸ್‌.

Exit mobile version