ಲಂಡನ್ : ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರು ತಾವು ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಎಂಬುದನ್ನು ಮರೆತು ಬ್ಯಾಟ್ ಮಾಡಲು ಆರಂಭಿಸಿದ್ದಾರೆ. ಇಂಗ್ಲೆಂಡ್‌ನ ರಾಯಲ್ ಲಂಡನ್ ಕಪ್‌ನಲ್ಲಿ ಆಡುತ್ತಿರುವ ಅವರು ಸಸೆಕ್ಸ್ ಪರ ಸತತ ಎರಡನೇ ಶತಕ ಬಾರಿಸಿದ್ದಾರೆ. ಅದರೂ ಕಡಿಮೆ ಎಸೆತಗಳಿಗೆ. ಭಾನುವಾರವಂತೂ ೧೩೧ ಎಸೆತಗಳಿಗೆ ೧೭೪ ರನ್ ಬಾರಿಸವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಭಾನುವಾರ Surrey ತಂಡದ ವಿರುದ್ಧ ಅವರು ಲಿಸ್ಟ್ ಎ ಮಾದರಿಯಲ್ಲಿ ಜೀವನ ಶ್ರೇಷ್ಠ ಗರಿಷ್ಠ ರನ್ ಬಾರಿಸಿದ್ದಾರೆ. ಈ ಹಿಂದೆ ಅವರು ಅಜೇಯ ೧೫೮ ರನ್ ಗಳಿಸಿದ್ದರು. ಅಂತೆಯೇ ಹಿಂದಿನ ಪಂದ್ಯದಲ್ಲಿ ವಾರ್ವಿಕ್‌ಶೈರ್ ವಿರುದ್ಧ ೭೯ ಎಸೆತಗಳಲ್ಲಿ ೧೦೭ ರನ್ ಬಾರಿಸಿದ್ದರು. ಈ ಮೂಲಕ ಸ್ಫೋಟಕ ಬ್ಯಾಟಿಂಗ್‌ಗೆ ತಾವು ಕೂಡ ಸಮರ್ಥರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇವರ ಬ್ಯಾಟಿಂಗ್ ಬಲದಿಂದ ಸಸೆಕ್ಸ್ ತಂಡ ೨೧೬ ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಸಸೆಕ್ಸ್ ತಂಡದ ಪೂಜಾರ ಅವರ ಸ್ಫೋಟಕ ಶತಕದ ಹೊರತಾಗಿಯೂ ೪ ರನ್‌ಗಳ ರೋಚಕ ಸೋಲಿಗೆ ಒಳಗಾಯಿತು.
ಸಸೆಕ್ಸ್ ತಂಡದ ನಾಯಕರಾಗಿರುವ ಚೇತೇಶ್ವರ್ ಅವರ ಇನಿಂಗ್ಸ್‌ನಲ್ಲಿ ೨೦ ಫೋರ್‌ಗಳು ಹಾಗೂ ೫ ಸಿಕ್ಸರ್‌ಗಳು ಸೇರಿಕೊಂಡಿವೆ. ೬೯ ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದ ಪೂಜಾರ, ೧೦೩ ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದ್ದರು. ಆದರೆ, ಕೊನೇ ೨೮ ಎಸೆತಗಳಲ್ಲಿ ೭೪ ರನ್ ಸಿಡಿಸಿ ಎದುರಾಳಿ ತಂಡದ ಬೌಲರ್‌ಗಳನ್ನು ಬಿಡದೇ ದಂಡಿಸಿದ್ದಾರೆ.
ಪೂಜಾರ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸಸೆಕ್ಸ್ ತಂಡ ೫೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೩೭೮ ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಅಚ್ಚರಿಯೆಂದರೆ ಎದುರಾಳಿ surrey ತಂಡದ ಬೌಲರ್‌ಗಳು ೩೬ ಇತರ ರನ್‌ಗಳನ್ನೇ ನೀಡಿದ್ದಾರೆ. ಪೂಜಾರ ಅವರಿಗೆ ಸಾಥ್ ಕೊಟ್ಟ ಟಾಮ್ ಕ್ಲಾರ್ಕ್ (೧೦೪) ಕೂಡ ಶತಕ ಬಾರಿಸಿದ್ದಾರೆ.
ನಾಲ್ಕನೇ ಓವರ್‌ಗೆ ಕ್ರಿಸ್‌ಗೆ ಇಳಿದ ಪೂಜಾರ ೪೮ನೇ ಓವರ್ ತನಕವೂ ಬ್ಯಾಟಿಂಗ್ ಮುಂದುವರಿಸಿದರು. ಅವರಿಗೆ ದ್ವಿಶತಕ ಬಾರಿಸುವ ಅವಕಾಶ ಇತ್ತಾದರೂ, ದೊಡ್ಡ ಹೊಡೆತವನ್ನು ಬಾರಿಸಲು ಹೋಗಿ ಕ್ಯಾಚ್ ನೀಡಿ ಔಟಾಗಿದ್ದರು.
ಗುರಿ ಬೆನ್ನಟ್ಟಿದ Surrey ತಂಡ ೩೧.೪ ಓವರ್‌ಗಳಲ್ಲಿ ೧೬೨ ರನ್‌ಗಳಿಗೆ ಆಲ್‌ಔಟ್ ಆಯಿತು.
ಇದನ್ನೂ ಓದಿ | Royal London Cup | ಅಂದುಕೊಂಡಂತೆ ಇಲ್ಲ ಕ್ರಿಕೆಟರ್ ಚೇತೇಶ್ವರ್ ಪೂಜಾರ!